ಇಎಂಐ ಎಕ್ಸ್ಚೇಂಜ್ ಆಫರ್
- ಲಕ್ಕೀ ಕೂಪನ್ ಮತ್ತು ಸ್ಕ್ರ್ಯಾಚ್ಕಾರ್ಡ್ನಲ್ಲಿ ಬಂಪರ್ ಬಹುಮಾನ
5೦೦ಕ್ಕೂ ಅಧಿಕ ಬಹುಮಾನಗಳು
ಪುತ್ತೂರು: ಬೆಳಕಿನ ಹಬ್ಬ ದೀಪಾವಳಿಯ ಅಂಗವಾಗಿ ಮೊಬೈಲ್ ಫೋನ್ಗಳ ಸೇಲ್ಸ್ & ಸರ್ವಿಸ್ಗಳ ಪ್ರತಿಷ್ಠಿತ ಮಳಿಗೆ ಸೆಲ್ಝೋನ್ನಲ್ಲಿ ‘ಫೆಸ್ಟೀವ್ ಧಮಕಾ ಸೇಲ್’ ಪ್ರಾರಂಭಗೊಂಡಿದ್ದು, ನಿಮ್ಮ ಕನಸಿನ ಸ್ಮಾರ್ಟ್ಫೋನ್ಗಳನ್ನು ಖರೀದಿಸಲು ಇದು ಸಕಾಲವಾಗಿದೆ.

ಪುತ್ತೂರಿನ ಮುಖ್ಯರಸ್ತೆಯ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಮುಂಭಾಗ ಮತ್ತು ಯೂನಿಯನ್ ಬ್ಯಾಂಕ್ ಬಳಿಯಿರುವ ಎರಡೂ ಮಳಿಗೆಗಳಲ್ಲಿಯೂ ಫೆಸ್ಟಿವ್ ಧಮಕಾ ಸೇಲೆ ನಡೆಯುತ್ತಿದೆ. ಗ್ರಾಹಕರು ತಮ್ಮಲ್ಲಿರುವ ಯಾವುದೇ ಸ್ಥಿತಿಯಲ್ಲಿರುವ ಮೊಬೈಲ್ಗಳನ್ನು ಹೊಸ ಸ್ಮಾರ್ಟ್ ಫೋನ್ನೊಂದಿಗೆ ಎಕ್ಸ್ಚೇಂಜ್ ಮಾಡಿಕೊಳ್ಳಬಹುದು. ಹೆಸರಾಂತ ಬ್ರಾಂಡ್ಗಳಾದ ವಿವೋ, ಒಪ್ಪೋ, ರೆಡ್ಮಿ, ಆಪಲ್ ಮೊಬೈಲ್ಗಳನ್ನು ಗ್ರಾಹಕರು ತಮ್ಮ ಬಜೆಟ್ಗೆ ತಕ್ಕಂತೆ ಸುಲಭ ಕಂತುಗಳಲ್ಲಿ ಖರೀದಿಸಬಹುದು. ಪ್ರತೀ ಖರೀದಿಗೆ ಲಕ್ಕಿ ಕೂಪನ್ ಮತ್ತು ಸ್ಕ್ರ್ಯಾಚ್ ಕಾರ್ಡ್ ಪಡೆದು ಬಂಪರ್ ಬಹುಮಾನಗಳಾದ ಬೈಕ್, ಸ್ಕೂಟರ್ ಎಲ್ಇಡಿ ಟಿ.ವಿ., ಐಫೋನ್, ಮಿಕ್ಸಿ ಹಾಗೂ ಇನ್ನಿತರ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಜೊತೆಗೆ 500 ಕ್ಕೂ ಅಧಿಕ ಉಡುಗೊರೆಗಳನ್ನು ನೀಡುತ್ತಿದೆ. ಸ್ಥಳದಲ್ಲೇ ಸಾಲ ಸೌಲಭ್ಯ, ಶೂನ್ಯ ದರದ ಡೌನ್ ಪೇಮೆಂಟ್, ಸುಲಭ ಕಂತುಗಳ ಸೌಲಭ್ಯದೊಂದಿಗೆ ನಿಮ್ಮ ಕನಸಿನ ಸ್ಮಾರ್ಟ್ ಫೋನ್ ಖರೀದಿಸುವ ಅವಕಾಶವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಹಬ್ಬದ ಅಂಗವಾಗಿ ಪ್ರತಿ ದಿನ ರೂ.82 ಪಾವತಿಸಿ ಐಫೋನ್ ಖರೀದಿ ಹಾಗೂ ಪ್ರತಿ ದಿನ ರೂ.72 ಪಾವತಿಸಿ ಸ್ಮಾಟ್ ಟಿ.ವಿ ಖರೀದಿಸುವ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಈ ಎಲ್ಲಾ ಕೊಡುಗೆಗಳು ಅ.31ರ ತನಕ ಸೀಮಿತ ದಿನಗಳ ಕಾಲ ನಡೆಯಲಿದ್ದು ಗ್ರಾಹಕರು ಇದರ ಪ್ರಯೋಜನ ಪಡೆದು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.