ಪುತ್ತೂರು: ಮುಂಡೂರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನ ವತಿಯಿಂದ ಪೂಜಿಸಲ್ಪಟ್ಟ ಗಣೇಶನ ಶೋಭಾಯಾತ್ರೆಯು ಕಲ್ಲಗುಡ್ಡೆಗೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ಶೋಭಾಯಾತ್ರೆ ಸಮಿತಿ ವತಿಯಿಂದ ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಂಗೀತ ವಿದುಷಿ ಅಪರ್ಣಾ ಕೊಡಂಕಿರಿ ಹಾಗೂ ತಂಡದವರು ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮ ನೀಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಥ್ಯಿ, ಸನ್ಮತಿ ಮತ್ತು ನಿಶಾಂತ್ ಹಾಗೂ ಮೆಸ್ಕಾಂ ಉದ್ಯೋಗಿಗಳಾದ ರವಿಚಂದ್ರರೈ ಮತ್ತು ಸಂತೋಷ್ ವೇಗಸ್ ಇವರನ್ನು ಸ್ಥಳೀಯರು ಹಾಗೂ ಸಮಿತಿ ಸದಸ್ಯರು ಸೇರಿ ಸನ್ಮಾನಿಸಲಾಯಿತು.