ಅನುಭವಿ ತರಬೇತುದಾರರಿಂದ ನಡೆಯಲಿರುವ ತರಬೇತಿ
ಪುತ್ತೂರು: ಕಳೆದ ಹಲವು ವರ್ಷಗಳ ಅವಧಿಯಲ್ಲಿ ಯುವ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರಿ ಮತ್ತು ಸರಕಾರಿ ಸ್ವಾಮ್ಯದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿರುವ ವಿದ್ಯಾಮಾತಾ ಅಕಾಡೆಮಿಯು 2025ನೇ ಸಾಲಿನ ಸಿಬ್ಬಂದಿ ನೇಮಕಾತಿ ಆಯೋಗ ನಡೆಸುವ ವಿವಿಧ ನೇಮಕಾತಿ ಪರೀಕ್ಷೆಗಳು ಸದ್ಯದಲ್ಲೇ ನಡೆಯಲಿದ್ದು, ಈ ನೇಮಕಾತಿ ಮಂಡಳಿಯು ಕುರಿತು ಮಾಹಿತಿಯನ್ನು ಪ್ರಕಟಿಸಿರುತ್ತದೆ. ಇದಕ್ಕೆ ಪೂರಕವಾಗಿ ವಿದ್ಯಾಮಾತಾ ಅಕಾಡೆಮಿಯು ನೇರ ತರಗತಿ ಮತ್ತು ಆನ್ಲೈನ್ ತರಗತಿಗಳ ಮೂಲಕ ತರಬೇತಿಯನ್ನು ನೀಡಲಿದ್ದು, ಈ ನೇಮಕಾತಿ ಪರೀಕ್ಷೆಯನ್ನು ಎದುರಿಸಲಿರುವ ಅಭ್ಯರ್ಥಿಗಳು ತರಗತಿಗಳನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಕ್ರ್ಯಾಶ್ ಕೋರ್ಸ್ ತರಬೇತಿಯ ನೇರ ತರಗತಿಗಳು ಬೆಳಿಗ್ಗೆ ಸಮಯ 10.00ರಿಂದ ಸಂಜೆ 3.00ರ ವರೆಗೆ ಹಾಗೂ ಆನ್ಲೈನ್ ತರಗತಿಗಳು ರಾತ್ರಿ ಸಮಯ 8 ರಿಂದ 9 ರವರೆಗೆ ನಡೆಯಲಿದೆ, ಆಸಕ್ತ ಅಭ್ಯರ್ಥಿಗಳು ಕೂಡಲೇ ಸಂಸ್ಥೆಯನ್ನು ಸಂಪರ್ಕಿಸಿ ದಾಖಲಾತಿಯನ್ನು ಪಡೆದುಕೊಳ್ಳಲು ವಿದ್ಯಾಮಾತಾ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ವಿದ್ಯಾಮಾತಾ ಅಕಾಡೆಮಿನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆಗಳು-9620468869 / 9148935808.