ಒಟ್ಟು ವ್ಯವಹಾರ ರೂ. 830 ಕೋಟಿ ; ರೂ. 2.01 ಕೋಟಿ ಲಾಭ
ಪುತ್ತೂರು: ಸಹಕಾರಿ ರತ್ನ ಕೆ. ಸೀತಾರಾಮ ರೈ ಸವಣೂರು ರವರು ಅಧ್ಯಕ್ಷರಾಗಿರುವ ಪುತ್ತೂರಿನ ದರ್ಬೆಯ ಪ್ರಶಾಂತ್ ಮಹಲ್ ನಲ್ಲಿ ಪ್ರಧಾನ ಕಚೇರಿ ಹೊಂದಿ ಜಿಲ್ಲೆಯಾದ್ಯಂತ 15 ಶಾಖೆಗಳನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆ.13ರಂದು ಪುತ್ತೂರಿನ ಪ್ರಶಾಂತ್ ಮಹಲ್ ನ ಸನ್ನಿಧಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೆ. ಸೀತಾರಾಮ ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘವು ವಾರ್ಷಿಕ ರೂ. 830ಕೋಟಿ ವ್ಯವಹಾರ ನಡೆಸಿ, ರೂ. 2.01 ಕೋಟಿ ಲಾಭಗಳಿಸಿದೆ. ಮುಂದಿನ ವರ್ಷ 3ಕೋಟಿ ಲಾಭದ ಗುರಿಯನ್ನು ಹೊಂದಿದ್ದೇವೆ. ಸಂಘದಲ್ಲಿ 100 ಮಂದಿ ಉದ್ಯೋಗಿಗಳಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ನೂತನ ಕಟ್ಟಡದ ಲೋಕಾರ್ಪಣೆ ಮಾಡಬೇಕೆಂಬ ಯೋಜನೆ ಇದೆ. ಸದಸ್ಯರಿಗೆ 17% ಡಿವಿಡೆಂಟ್ ಘೋಷಣೆ ಮಾಡಿದ್ದು, ಸದಸ್ಯರ ಒಪ್ಪಿಗೆ ಮೇರೆಗೆ 5% ನ್ನು ಸಂಘದ ಕಟ್ಟಡ ನಿಧಿಗೆ ವರ್ಗಾಯಿಸಲಾಗಿ 12% ಸದಸ್ಯರ ಖಾತೆಗೆ ಜಮೆ ಮಾಡಲಾಗುವುದು. ಸದಸ್ಯರ ಸಾಲದ ಮಿತಿಯನ್ನು ರೂ. 50ಲಕ್ಷದಿಂದ ರೂ. 1 ಕೋಟಿಗೆ ಏರಿಸುವುದು, ಚಿನ್ನಾಭರಣ ಈಡಿನ ಸಾಲವನ್ನು 25 ಲಕ್ಷದಿಂದ 50ಲಕ್ಷಕ್ಕೆ ಏರಿಸುವುದು. ಸಂಘದ ವ್ಯಾವಹಾರವನ್ನು ವಿಸ್ತರಿಸುವ ಉದ್ದೇಶದಿಂದ ದ.ಕ. ಜಿಲ್ಲೆಯಿಂದ ಉಡುಪಿ ಮತ್ತು ಮಡಿಕೇರಿ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. 16ನೇ ಶಾಖೆಯಾಗಿ ಮಂಗಳೂರಿನಲ್ಲಿ ಮತ್ತು 17ನೇ ಶಾಖೆಯಾಗಿ ಈಶ್ವರಮಂಗಲದಲ್ಲಿ ತೆರೆಯಲಾಗುವುದೆಂದು ಕೆ.ಸೀತಾರಾಮ ರೈ ಹೇಳಿದರು.
ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ ಸವಣೂರು, ನಿರ್ದೇಶಕರಾದ ಮಹಾಬಲ ರೈ ಬೋಳಂತೂರು, ಅಶ್ವಿನ್ ಎಲ್. ಶೆಟ್ಟಿ ಸವಣೂರು, ಎಸ್.ಎಂ. ಬಾಪು ಸಾಹೇಬ್, ಕೆ. ರವೀಂದ್ರನಾಥ ಶೆಟ್ಟಿ ಕೇನ್ಯ, ಎನ್. ರಾಮಯ್ಯ ರೈ ಕೆದಂಬಾಡಿ, ಚಿಕ್ಕಪ್ಪ ನಾಯ್ಕ್ ಅರಿಯಡ್ಕ, ಸೀತಾರಾಮ ಶೆಟ್ಟಿ ಬಿ. ಮಂಗಳೂರು, ವಿ.ವಿ. ನಾರಾಯಣ ಭಟ್ ನರಿಮೊಗರು, ಜೈರಾಜ್ ಭಂಡಾರಿ ಪುತ್ತೂರು, ಮಹಾದೇವ ಎಂ. ಮಂಗಳೂರು, ಶ್ರೀಮತಿ ಪೂರ್ಣಿಮಾ ಎಸ್. ಆಳ್ವ ಮಂಗಳೂರು, ಶ್ರೀಮತಿ ಯಮುನಾ ಎಸ್.ರೈ ಗುತ್ತುಪಾಲ್, ಶ್ರೀಮತಿ ರಶ್ಮಿ ಎಸ್. ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಮಹಾಪ್ರಬಂಧಕರಾದ ವಸಂತ ಜಾಲಾಡಿ ವದರಿ ವಾಚಿಸಿದರು. ಪುತ್ತೂರು ಶಾಖೆಯ ಹೆಚ್ಚುವರಿ ಶಾಖಾ ವ್ಯವಸ್ಥಾಪಕಿ ರಕ್ಷಾ ಡಿ.ಜೆ ಪ್ರಾರ್ಥಿಸಿದರು. ಕೇಂದ್ರ ಕಚೇರಿಯ ಸಿಬ್ಬಂದಿ ರಾಖಿ ಜಿ ಸ್ವಾಗತಿಸಿ, ಪ್ರಭಾರ ಶಾಖಾ ವ್ಯವಸ್ಥಾಪಕಿ ಕು. ಮಹಾಲಕ್ಷ್ಮೀ ಕೆ ವಂದಿಸಿದರು. ಕೇಂದ್ರ ಕಚೇರಿಯ ಸಿಬ್ಬಂದಿ ಶ್ರೀಮತಿ ಶ್ರೀರಕ್ಷಾ ಪಿ.ಕೆ 2024-25ನೇ ಸಾಲಿನ ತಿಳುವಳಿಕೆ ಪತ್ರವನ್ನು ವಾಚಿಸಿದರು. ವಿಟ್ಲ ಶಾಖೆಯ ವ್ಯವಸ್ಥಾಪಕಿ ಕವಿತಾ ಕೆ.ಎಸ್ ಗತ ವರ್ಷದ ಸಭಾ ನಡವಳಿಕೆಯನ್ನು ವಾಚಿಸಿದರು. ಮುಂದಿನ ವರ್ಷಕ್ಕೆ ತಯಾರಿಸಿದ ಅಂದಾಜು ಅಯವ್ಯಯ ಪಟ್ಟಿಯನ್ನು ಸಹಾಯಕ ಮಹಾಪ್ರಬಂಧಕರಾದ ಸುನಾದ್ ರಾಜ್ ಶೆಟ್ಟಿ ವಾಚಿಸಿದರು. ಆರ್ಥಿಕ ಸಾಲಿನಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ ಶಾಖಗಳಿಗೆ ಬಹುಮಾನ ನೀಡಲಾಯಿತು. ಪ್ರಥಮ ಸ್ಥಾನವನ್ನು ಕುಂಬ್ರ ಶಾಖೆ, ದ್ವಿತೀಯ ಬೊಳ್ವಾರು, ತೃತೀಯ ಸ್ಥಾನವನ್ನು ಸವಣೂರು ಶಾಖೆ ಪಡೆದುಕೊಂಡಿತು. ಪ್ರೋತ್ಸಾಹಕ ಬಹುಮಾನವನ್ನು ಮಡಂತ್ಯಾರು ಶಾಖೆಗೆ ನೀಡಲಾಯಿತು.
ಮುಂದಿನ ವರ್ಷ ವಿದ್ಯಾರಶ್ಮಿ ವಿದ್ಯಾಸಂಸ್ಥೆಗೆ ಮತ್ತು ಆದರ್ಶ ಸಹಕಾರಿ ಸಂಘಕ್ಕೆ 25 ವರ್ಷ ಮತ್ತು ನನ್ನ ವಿವಾಹವಾಗಿ 50 ವರ್ಷ ಈ ಸಂದರ್ಭದಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜಿಸಿ ಬಡ ಕುಟುಂಬಗಳಿಗೆ ನೆರವು ನೀಡುವ ಯೋಜನೆಯನ್ನು ಇಟ್ಟುಕೊಂಡಿದ್ದೇವೆ. ಈ ಕಾರ್ಯಕ್ಕೆ ನಿಮ್ಮೆಲ್ಲರ ಸಹಕಾರಬೇಕು.
ಕೆ. ಸೀತಾರಾಮ ರೈ