ಪುತ್ತೂರು: ಕರ್ನಾಟಕ ರಾಜ್ಯ ಭಾವ್ಯಕತಾ ಪರಿಷತ್ ದ.ಕ ಜಿಲ್ಲೆ ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ಇವರ ವತಿಯಿಂದ ಸಾಹಿತ್ಯ ರತ್ನ ಪ್ರಶಸ್ತಿಯನ್ನು ಪುತ್ತೂರಿನ ಎವಿಜಿ ಅಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಯಶುಭ ರೈಯವರಿಗೆ ಸೆ. 14 ರಂದು ದೇರಳಕಟ್ಟೆಯಲ್ಲಿ ಜರಗಿದ ಸಮಾರಂಭದಲ್ಲಿ ನೀಡಿ, ಗೌರವಿಸಲಾಗಿದೆ.

ಯಶುಭ ರೈಯವರು ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಚುಟುಕು ಕವನ ಮತ್ತು ಡ್ರಗ್ಸ್ ಮುಕ್ತ ಸಮಾಜಕ್ಕೆ ಒಂದು ಸಂದೇಶ ಎಂಬ ಚುಟುಕು ಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.