ರೂ.1,68 ಲಕ್ಷ ನಿವ್ವಳ ಲಾಭ, ಶೇ. 10 ಡಿವಿಡೆಂಡ್, ಲೀಟರ್ ಹಾಲಿಗೆ ರೂ.71 ಪೖೆಸೆ ಬೋನಸ್ ಘೋಷಣೆ
ಬಡಗನ್ನೂರು: ಬಡಗನ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದ 2024-25 ಸದಸ್ಯರ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ ಸೀತಾರಾಮ ಗೌಡ ಉಳಯರವರ ಅಧ್ಯಕ್ಷತೆಯಲ್ಲಿ ಸೆ.17 ರಂದು ಸಂಘದ ಸಭಾಂಗಣದಲ್ಲಿ ನಡೆಯಿತು.
ವರದಿ ಸಾಲಿನಲ್ಲಿ ಸಂಘ ಎ ಶ್ರೇಣಿ ಪಡೆದಿದ್ದು ರೂ. 1,68,667.48 ನಿವ್ವಳ ಲಾಭಗಳಿಸಿ ಸದಸ್ಯರಿಗೆ ಶೇ.10 / ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ ರೂ.71 ಪೈಸೆ ಬೋನಸ್ ನೀಡಲಾಗುವುದು ಎಂದು ಘೋಷಿಸಿಲಾಯಿತು.

ವರದಿ ಸಾಲಿನಲ್ಲಿ ಸಂಘ ದಿನಂಪ್ರತಿ ಸರಾಸರಿ 310.7 ಲೀಟರ್ ಹಾಲು ಶೇಖರಣೆ ಮಾಡಲಾಗಿದೆ. ವರದಿ ಸಾಲಿನಲ್ಲಿ 92 ಸದಸ್ಯರು ಹಾಲನ್ನು ಸರಬರಾಜು ಮಾಡುತ್ತಿದ್ದು .ಸಂಘವು ವರದಿ ಸಾಲಿನಲ್ಲಿ 49,91,869.44 ರೂಪಾಯಿಯ 1,13,416.3 ಲೀಟರ್ ಹಾಲನ್ನು ಶೇಖರಣೆ ಮಾಡುತ್ತಿದೆ ಅದರಲ್ಲಿ 3,64644 ರೂಪಾಯಿಯ 7,398.5,ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಿರುತ್ತದೆ. .ವರದಿ ಸಾಲಿನಲ್ಲಿ 10,63,990 ರೂಪಾಯಿಯ 831 ಚೀಲ ನಂದಿನಿ ಪಶು ಆಹಾರ, ರೂ.33550 ಲವಣ ಮಿಶ್ರಣ 610 ಕೆ.ಜಿಯನ್ನು ಮಾರಾಟ ಮಾಡಲಾಗಿದೆ.ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಿಂದ ಒಟ್ಟು ವ್ಯಾಪಾರ ಲಾಭ ರೂ.1,97,52,696.65 ಬಂದಿರುತ್ತದೆ.
ಮುಖ್ಯ ಅತಿಥಿಯಾಗಿ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಒಕ್ಕೂಟದಲ್ಲಿ ರೈತರಿಗೆ ದೊರಕುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಸಂಘದ ಸದಸ್ಯರು ಉತ್ತಮ ಗುಣಮಟ್ದದ ಹಾಲು ಹಾಕುವ ಮೂಲಕ ಸಂಘದ ಉನ್ನತಿಗೆ ಸಹಕಾರ ನೀಡಬೇಕು ಎಂದ ಅವರು ಪ್ರಸ್ತುತ ಸಂಘವು 300ರಿಂದ 350 ಲೀಟರ್ ಹಾಲು ಶೇಖರಣೆ ಮಾಡುತ್ತಿದ್ದು ಮುಂದೆ ಅದು 750 ಲೀ ಗಳಷ್ಟು ಹೆಚ್ಚಾಗಬೇಕು. ಪ್ರಸ್ತುತ ಹಸುಗಳಲ್ಲಿ ಕಂಡು ಬರುವ ಗಬ್ಬದ ಸಮಸ್ಯೆ ಮತ್ತು ಇತರ ಸಮಸ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲವೊಂದು ಔಷದಿಯ ಗುಣ ಹೊಂದಿರುವ ಮಿಶ್ರಣಗಳನ್ನು ಪಶು ಆಹಾರದಲ್ಲಿ ಬೆರೆಸಿ ಗುಣಮಟ್ಟವನ್ನು ಉತ್ತಮ ಪಡಿಸಲಾಗಿದೆ. ರೈತರು ಹೆಚ್ಚು ಹೆಚ್ಚು ಉಪಯೋಗಿ ಕೊಳ್ಳಬೇಕು ಜೊತೆಗೆ ಎಲ್ಲ ಸದಸ್ಯರು ಪಶುಗಳಿಗೆ ವಿಮಾ ಸೌಲಭ್ಯವನ್ನು ಮಾಡಿಸುವಂತೆ ಹೇಳಿದರು..
ವೇದಿಕೆಯಲ್ಲಿ ಉಪಾಧ್ಯಕ್ಷೆ ಹೇಮಲತಾ ಸಂಪಿಗೆಮಜಲು, ನಿರ್ದೇಶಕರಾದ ನಾರಾಯಣ ನಾಯ್ಕ ನೇರ್ಲಂಪ್ಪಾಡಿ, ರವಿರಾಜ ರೈ ಕೆಳಗಿನ ಪೇರಾಲು, ಸುಬ್ರಾಯ ನಾಯಕ್ ಮೇಗಿನಮನೆ, ಶಿವಚಂದ್ರ ಕುಲಾಲ್ ಪೖೆರುಪುಣಿ, ಲೀಲಾವತಿ ಕಟ್ಟಾವು, ಪದ್ಮಶ್ರಿ ಬಡಕ್ಕಾಯೂರು, ಸುಧಾ ಯಂ.ಯಶೋಧ ಕೖೊಲ, ಉಪಸ್ಥಿತರಿದ್ದರು.ಸಂಘದ ಕಾರ್ಯದರ್ಶಿ ಮೋಹನ ಎಂ ಸ್ವಾಗತಿಸಿ, ಗತ ವರದಿ ಮಂಡಿಸಿದರು.
ಸಹಾಯಕಿ ಸುಜಾತ ಮೖೆಂದನಡ್ಕ ಪ್ರಾರ್ಥಿಸಿ, ವಂದಿಸಿದರು. ಸುಬ್ಬಯ್ಯ ರೖೆ ಹಲಸಿನಡಿ ಸನ್ಮಾನ ಕಾರ್ಯಕ್ರಮದ ನಿರೂಪಣೆ ಮಾಡಿದರು.ಸಭೆಯಲ್ಲಿ ಸಂಘದ ಸರ್ವಸದಸ್ಯರು ಭಾಗವಹಿಸಿದ್ದರು.

ಬಹುಮಾನ ವಿತರಣೆ:
ವರದಿ ಸಾಲಿನಲ್ಲಿ ಅತೀ ಹೆಚ್ಚು ಹಾಲು ಪೂರೈಸಿದ ಸಂಘದ ಶಶಿಧರ ಭಟ್, ಕೖೊಲ, ಪ್ರಥಮ ಸೀತಾರಾಮ ಗೌಡ ಉಳಯ ದ್ವಿತೀಯ ಹಾಗೂ ಪದ್ಮಶ್ರೀ ಬಡಕ್ಕಾಯೂರು ತೃತೀಯ ಬಹುಮಾನ ನೀಡಿ ಗೌರವಿಸಲಾಯಿತು. ಮತ್ತು ಭಾಗವಹಿಸಿ ಸದಸ್ಯರಿಗೆಲ್ಲರಿಗೂ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು.
ಸನ್ಮಾನ
2024-25ನೇ ಸಾಲಿನಲ್ಲಿ ತಮಿಳುನಾಡು ಈರೋಡಿನಿಂದ 6 ಮಿಶ್ರತಳಿ ಹಸುಗಳನ್ನು (HF) ಖರೀದಿಸಿ ಹಸು ಸಾಕಾಣೆಯಲ್ಲಿ ಅತ್ಯುತ್ತಮವಾಗಿ ಸಾಧನೆಗೈದು ಸಂಘಕ್ಕೆ ಸರಾಸರಿ ದಿನವೊಂದಕ್ಕೆ 85 ಲೀಟರ್ ಹಾಲು ಸರಬರಾಜು ಮಾಡಿ.ಹಾಲು ಶೇಖರಣೆ ಹೆಚ್ಚಳಕ್ಕೆ ಶ್ರಮಿಸಿದ ಸಂಘದ ಸದಸ್ಯೆಯಾದ ಫ್ರಾಂಕಿ ವಿದ್ಯಾ ಮರಿಯಾ ಮೊಂತೇರೋ ಇವರನ್ನು ಶ್ರೀ ಕ್ಷೇತ್ರ ಪಡುಮಲೆ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು, ಸಂಘದ ಸ್ಥಾಪಕ ಅಧ್ಯಕ್ಷ ಕೃಷ್ಣ ರೖೆ ಕುದ್ಕಾಡಿ, ಹಾಗೂ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಇವರುಗಳು ಸಾಲು ಹೊದಿಸಿ, ಸನ್ಮಾನ ಪತ್ರ, ಫಲಾಪುಷ್ಪ ಸ್ಮರಣಿಕೆ,ನೀಡಿ ಅಭಿನಂದಿಸಿದರು.