





ತ್ರಿಶೂಲ್ ಫ್ರೆಂಡ್ಸ್, ಹೊಳ್ಳ ಕ್ರ್ಯಾಕರ್ಸ್ ರವರಿಂದ ಅದ್ದೂರಿಯ ಆಯೋಜನೆ


ಪುತ್ತೂರು: ತ್ರಿಶೂಲ್ ಫ್ರೆಂಡ್ಸ್ ಹಾಗೂ ಹೊಳ್ಳ ಕ್ರ್ಯಾಕರ್ಸ್ ಸಂಯುಕ್ತ ಆಶ್ರಯದಲ್ಲಿ ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಲೈವ್ “ಅವತಾರ್ ಉತ್ಸವ್ ಪುತ್ತೂರು ಉತ್ಸವ” ಹೆಸರಿನಲ್ಲಿ ಸೆ.18 ರಿಂದ ನ.2ರ ವರೆಗೆ ಸುಮಾರು 45 ದಿನಗಳ ಕಾಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಜರಗಲಿದೆ.





ವಿವಿಧ ಬಗೆಯ ಫುಡ್ ಕೋರ್ಟ್, ಶಾಲಾ ಬ್ಯಾಗ್, ಉಪಕರಣಗಳು ಸೇರಿದಂತೆ ವಿವಿಧ ಸ್ಟಾಲ್ ಗಳು, ಅಮೇಜ್ಮೆಂಟ್ ಪಾರ್ಕ್, ಜಾಯೈಂಟ್ ವ್ಹೀಲ್, ಬ್ರೇಕ್ ಡ್ಯಾನ್ಸ್, ಕೊಲಂಬಸ್, ಡ್ರ್ಯಾಗನ್, ಮಕ್ಳಳಿಗೆ ಆಟೋಟಗಳು ಹೀಗೆ ವಿವಿಧ ಮನೋರಂಜನೆಗಳು ಈ ಪುತ್ತೂರು ಉತ್ಸವ ಹೊಂದಿದ್ದು, ಪುತ್ತೂರು ಹಾಗೂ ಆಸುಪಾಸಿನ ಜನತೆ ಈ ಉತ್ಸವದಲ್ಲಿ ಪಾಲ್ಗೊಂಡು ಉತ್ಸವವನ್ನು ದ್ವಿಗುಣಗೊಳಿಸಬೇಕಾಗಿ ಆಯೋಜಕರಾದ ತ್ರಿಶೂಲ್ ಫ್ರೆಂಡ್ಸ್ ಹಾಗೂ ಹೊಳ್ಳ ಕ್ರ್ಯಾಕರ್ಸ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


            







