ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವ ಹಕ್ಕುಗಳ ಘಟಕ ಕಾರ್ಯಕ್ರಮ

0

ಸವಣೂರು: ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ಆತ್ಮಹತ್ಯೆಯನ್ನು ಮಾಡದಿರುವಂತೆ ಜಾಗೃತಿಯನ್ನು ಮೂಡಿಸುವ ಉದ್ಧೇಶದಿಂದ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವಹಕ್ಕುಗಳ ಘಟಕದಲ್ಲಿ ಕಾರ್ಯಕ್ರಮವನ್ನು ಸೆ.17ರಂದು ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ರಾಜಲಕ್ಷ್ಮೀ ಎಸ್ ರೈ ಯವರು, ಒಬ್ಬರ ಉಸಿರಿಗಿರುವ ಮಹತ್ವವನ್ನು ತಿಳಿಸುವುದರ ಜೊತೆಗೆ ಯುವಜನರ ಆತ್ಮಹತ್ಯೆಯನ್ನು ತಡೆಗಟ್ಟುವುದರ ಕುರಿತು ಮಾಹಿತಿಯನ್ನು ನೀಡಿದರು.

ಮಾನವ ಹಕ್ಕುಗಳ ಘಟಕದ ಸಂಘಟಕ ಡಾ. ಕಿರಣಚಂದ್ರ ರೈ ಯವರು ಯುವಜನರು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಜೀವನ ಔಲ್ಯ ಹಾಗೂ ಯಾವುದೇ ಸಮಸ್ಯೆಗಳು ಎದುರಾದರೆ ಅದನ್ನು ಧ್ಯೈರ್ಯದಿಂದ ಎದುರಿಸಬೇಕು ಎನ್ನುವುದರೊಂದಿಗೆ ಆತ್ಮಹತ್ಯೆ ಯಾವುದಕ್ಕು ಪರಿಹಾರವಲ್ಲ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಪ್ರಾಂಶುಪಾಲ ಶೇಷಗಿರಿ ಎಂ, ಐ.ಕ್ಯೂ.ಎ.ಸಿ ಘಟಕದ ಮುಖ್ಯಸ್ಥ ಕೌಶಲ್ಯ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ವೆಂಕಟ್ರಮಣ ಇವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘಟಕ ದೀಕ್ಷಿತ್ ಜಿ ಸ್ವಾಗತಿಸಿ,ಅಸ್ಮಿತಾ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ತೃತೀಯ ಬಿ.ಎ ಯ ಕಲ್ಪನಾ ನಿರ್ವಹಿಸಿದರು.

LEAVE A REPLY

Please enter your comment!
Please enter your name here