ಬಡಗನ್ನೂರು : ಆದಿದೈವ ಧೂಮಾವತಿ, ದೇಯಿ ಬೈದೇತಿ ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ಬೆಳಗ್ಗೆ ಮೂರುಗೋಳಿ ಶ್ರೀ ಪಾಡುರಂಗ ಭಜನಾ ಮಂಡಳಿ ಹಾಗೂ ಬಿಳಿಯೂರು ಶ್ರೀ ವಿಷ್ಣು ಭಜನಾ ಮಂಡಳಿ ಸದಸ್ಯರಿಂದ ಭಜನಾ ಸಂಕೀರ್ತಣೆ ನಡೆಯಿತು.
ಬಳಿಕ ಮಧ್ಯಾಹ್ನ 12.30 ರಿಂದ ಶ್ರೀ ದೇವಿಗೆ ಅಲಂಕಾರ ಪೂಜೆ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ಕೆ.ಬಿ ರಾಜಾರಾಮ್, ಮೊಕ್ತೇಸರ ಶ್ರೀಧರ ಪೂಜಾರಿ, ಕ್ಷೇತ್ರದ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಜತೆ ಕಾರ್ಯದರ್ಶಿ ಡಾ. ಸಂತೋಷ್ ಉಡುಪಿ, ಟ್ರಸ್ಟಿಗಳಾದ ನಾರಾಯಣ ಮಚ್ಚಿನ, ವಿಜಯ್ ವಿಕ್ರಮ್ ಉಪ್ಪಿನಂಗಡಿ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಕ್ಷಗಾನ ಸಮಿತಿ ಸಂಚಾಲಕಿ ಸುಕನ್ಯಾ ಪೂಜಾರಿ ಕಡಕಾರ್ ಉಡುಪಿ, ಮಂಜುನಾಥ ಸಾಲಿಯಾನ್ ಬೆಳ್ತಂಗಡಿ, ಜಯರಾಮ ಪೂಜಾರಿ ಕೆಳಂದೂರು, ಪ್ರಮೀಣ್ ಕುಮಾರ್ ಕೆಳಂದೂರು ಹಾಗೂ ಊರಪರವೂರ ಭಕ್ತಾಧಿಗಳು ಭಾಗವಹಿಸಿದ್ದರು.
