ನೆಲ್ಯಾಡಿ ವಿಶ್ವವಿದ್ಯಾಲಯ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ನೇಮಕ

0

ನೆಲ್ಯಾಡಿ: ನೆಲ್ಯಾಡಿ ವಿಶ್ವವಿದ್ಯಾಲಯ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ನೇಮಕವು ಸೆ.24ರಂದು ನಡೆಯಿತು.

ಮಹಾಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಸಂಯೋಜಕರಾದ ಡಾ. ಸುರೇಶ್ ವಹಿಸಿ ಮಾತನಾಡಿ, ಶಿಕ್ಷಕ ರಕ್ಷಕ ಸಂಘದ ಪಾತ್ರದ ಮಹತ್ವವನ್ನು ಉಲ್ಲೇಖಿಸುವುದರೊಂದಿಗೆ ಕಾಲೇಜಿನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಶೈಕ್ಷಣಿಕ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.

ಶಿಕ್ಷಕ- ರಕ್ಷಕ ಸಂಘದ ಖಜಾಂಚಿ ವೆರೋನಿಕಾ ಪ್ರಭಾ ವಿ. ಪಿ. 2024-2025ರ ಸಾಲಿನ ಲೆಕ್ಕ ಪತ್ರ ಮಂಡನೆ ಮಾಡಿದರು. ಈ ಆಯವ್ಯಯ ಪಟ್ಟಿಯನ್ನು ಸಭೆಯು ಅನುಮೋದಿಸಿತು. ಮುಂದೆ ಪೋಷಕರ ನೂತನ ಪದಾಧಿಕಾರಿಗಳ ನೇಮಕವಾಯಿತು. ಈ ಸಾಲಿನ ಪೋಷಕರ ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಉಮ್ಮರ್ ಬೈಲಂಗಡಿ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಅಶ್ವಿತಾ ರೈ, ಸಹ ಕಾರ್ಯದರ್ಶಿಯಾಗಿ ಸೇಸಮ್ಮ ಇವರು ಆಯ್ಕೆಗೊಂಡರು. ಸದಸ್ಯರುಗಳಾದ ಧನಂಜಯ್, ಲಿಂಗಪ್ಪ ಗೌಡ ಹಾಗೂ ಉಮ್ಮರ್ ನುಸ್ಲಿಯಾರ್ ಇವರುಗಳು ಆಯ್ಕೆಗೊಂಡರು.ನೂತನ ಕಾರ್ಯಾಧ್ಯಕ್ಷ ಉಮ್ಮರ್ ಬೈಲಂಗಡಿ ಮಾತನಾಡಿದರು.

ಪೋಷಕರ ಕಾರ್ಯಕಾರಿ ಸಮಿತಿಯ ಪೂರ್ವ ಕಾರ್ಯಾಧ್ಯಕ್ಷ ಉದಯ, ಉಪಾಧ್ಯಕ್ಷರಾದ ಪ್ರೇಮ, ಸದಸ್ಯರುಗಳಾದ ಶಿವಣ್ಣ, ನಾಗೇಶ, ಪಾರ್ವತಿ ತಮ್ಮ ಸ್ಥಾನದಿಂದ ನಿರ್ಗಮಿಸಿದರು. ನೂತನ ಹಾಗೂ ಪೂರ್ವ ಪದಾಧಿಕಾರಿಗಳು ಮತ್ತು ಹೆತ್ತವರು ಹಾಗೂ ಪೋಷಕರು ಸಲಹೆ ಸೂಚನೆಗಳನ್ನು, ಉತ್ತಮ ಅಭಿಪ್ರಾಯಗಳನ್ನು ನೀಡಿದರು. ಡಾ. ಸೀತಾರಾಮ ಪಿ ಸ್ವಾಗತಿಸಿದರು. ಶಿಕ್ಷಕ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ ಚಂದ್ರಕಲಾ ವಂದಿಸಿದರು.ಉಪನ್ಯಾಸಕಿ ನಿಶ್ಮಿತಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here