ಪುತ್ತೂರು: ದಿನಾಂಕ 22.09.2025 ರಿಂದ 27.09.2025ರ ತನಕ ನವೋದಯ ಪ್ರೌಢಶಾಲೆಯಲ್ಲಿ ನವಚೇತನ NMMS – ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ – 2025 ರ ಸಿದ್ದತಾ ತರಬೇತಿ ಶಿಬಿರವನ್ನು ಆಡಳಿತ ಮಂಡಳಿಯ ವತಿಯಿಂದ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸೆ.22ರಂದು ದ.ಕ.ಜಿ.ಪ.ಹಿ.ಪ್ರಾ.ಶಾಲೆಯ ಶಿಕ್ಷಕಿ ಸೌಮ್ಯ ಕುಮಾರಿ ದೀಪ ಪ್ರಜ್ವಲನದ ಮೂಲಕ ನೆರವೇರಿಸಿ, ಶಿಬಿರಾರ್ಥಿಗಳನ್ನು ಉದ್ದೇಶಿಸಿ, ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಣೇಶ್ ರೈವಹಿಸಿ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆಯುವಂತೆ ತಿಳಿಸಿದರು. ನವೋದಯ ಆಡಳಿತ ಮಂಡಳಿಯ ಕೋಶಾಧಿಕಾರಿ ಸುದೆನಡ್ಕ ಗಣೇಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಗುರು ಪುಷ್ಪಾವತಿ ಎಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. NMMS ಪರೀಕ್ಷೆಯ ಮಹತ್ವದ ಬಗ್ಗೆ ಸವಿವರವಾದ ಮಾಹಿತಿಯನ್ನು ಶಿಕ್ಷಕಿ ಭುವನೇಶ್ವರಿ ಎಂ.ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. ಶಿಕ್ಷಕಿಯರಾದ ಸುಮಂಗಲಾ ಕೆ ಸ್ವಾಗತಿಸಿ, ಶೋಭಾ ಬಿ ವಂದಿಸಿದರು. ಶಿಕ್ಷಕರಾದ ರಾಧಾಕೃಷ್ಣ ಕೋಡಿ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ಕೆ, ಶಿಕ್ಷಕಿ ಗೌತಮಿ, ಕಚೇರಿ ಸಹಾಯಕರಾದ ನಾರಾಯಣ ಬನ್ನೆಂತಾಯ ಹಾಗೂ ಅಡುಗೆ ಸಿಬ್ಬಂದಿಗಳು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಪನ್ಮೂಲ ಶಿಕ್ಷಕರು ತರಬೇತಿಯನ್ನು ಮುಂದುವರಿಸಿದರು.