ಪುತ್ತೂರು: ಅ.2ರಂದು ಪುತ್ತೂರು ಶಾರದೋತ್ಸವ ಪ್ರಯುಕ್ತ ಶಾರದಾ ಮೆರವಣಿಗೆಯು ಬೊಳುವಾರಿನಿಂದ ಆರಂಭವಾಗಿ ಗಾಂಧಿ ಕಟ್ಟೆ ಮೂಲಕ ದರ್ಬೆ ವೃತ್ತದ ಕಡೆಗೆ ಸಾಗಲಿದೆ.
ಈ ಸಮಯದಲ್ಲಿ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಲಾಗಿದ್ದು ಸಂಜೆ 4 ಗಂಟೆಯಿಂದ ಮಂಗಳೂರು ಕಡೆಯಿಂದ ಬರುವ ಎಲ್ಲಾ ಘನ ವಾಹನಗಳು( ಕೆಎಸ್ಆರ್ಟಿಸಿ ಬಸುಗಳು ಸೇರಿ) ಎಲ್ಲಾ ವಾಹನಗಳು ಬೊಳುವಾರು ಕಡೆಗೆ ಸಂಚರಿಸದೆ ಲೀನೆಟ್ ಜಂಕ್ಷನ್ ನಿಂದ ನೇರವಾಗಿ ಅಶ್ವಿನಿ ವೃತ್ತದ ಕಡೆಗೆ ಚಲಿಸಿ, ದರ್ಬೆ ಮುಖಾಂತರ ಗಾಂಧಿ ಕಟ್ಟೆ ಕಡೆ ಬರುವುದು. ಅದೇ ರೀತಿ ಮಂಗಳೂರಿನಿಂದ ಉಪ್ಪಿನಂಗಡಿ ಕಡೆಗೆ ಸಾಗುವ ವಾಹನಗಳು ನಗರದಿಂದ ಬನ್ನೂರು ರಸ್ತೆಯಾಗಿ ಪಡೀಲು ಬಂದು ಉಪ್ಪಿನಂಗಡಿ ರಸ್ತೆಯನ್ನು ಸೇರುವುದು. ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಹೊರಡುವ ಎಲ್ಲಾ ಬಸುಗಳು ದರ್ಬೆ ವೃತದ ಮೂಲಕ ಅಶ್ವಿನಿ ವೃತ್ತಕ್ಕೆ ತಲುಪಿ ಮುಂದಕ್ಕೆ ಸಾಗುವುದು. ಉಪ್ಪಿನಂಗಡಿ ಕಡೆಯಿಂದ ಬರುವ ಎಲ್ಲಾ ಘನವಾಹನಗಳು (ಕೆಎಸ್ಆರ್ಟಿಸಿ ಬಸ್) ಸೇರಿ ಕೊಟೆಚ ಜಂಕ್ಷನ್ ನಿಂದ ಎಡಕ್ಕೆ ಚಲಿಸಿ, ಎಪಿಎಂಸಿ ರಸ್ತೆಯಾಗಿ ಮುಂದಕ್ಕೆ ಸಾಗುವಂತೆ ಸಂಚಾರಿ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.