ಪುತ್ತೂರು: ಸೆ.21ರಿಂದ ಸೆ.30ರವರೆಗೆ 10 ದಿನಗಳ ಕಾಲ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿಯಮಿತ) ಇವರ ಸಂಯುಕ್ತ ಆಶ್ರಯದಲ್ಲಿ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಲಾದ “ದಸರಾ ಯೋಗ ಶಿಬಿರ” ಸೆ.30 ಸಮಾರೋಪಗೊಂಡಿತು.

ಕಾರ್ಯಕ್ರಮವನ್ನು ಮು. ಪ್ರಾ. ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಪದ್ಮಯ್ಯ ನಾಯ್ಕ್ ಬಂಡಿಕಾನ, ಮುಂಡೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು, ಪದ್ಮನಾಭ ಗೌಡ ಗುತ್ತಿನಪಾಲು, ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ವಿಜಯಲಕ್ಷ್ಮಿ ಉದ್ಘಾಟಿಸಿದರು.
ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಣಿಯೂರು ಮತ್ತು ಪಾಲ್ತಾಡಿ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯೋಗ ಶಿಕ್ಷಕ ಅಶೋಕ್ ಅಂಬಟ ಯೋಗಾಸನ ತರಬೇತಿ ನೀಡಿದರು.ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಯೋಗ ಶಿಕ್ಷಕರಿಗೆ ಗೌರವಿಸಿದರು.
ಶಿಬಿರದಲ್ಲಿ ಜೆ ಸಿ ಗಂಗಾಧರ, ಪದ್ಮಯ್ಯ ನಾಯ್ಕ, ಉಮೇಶ್ ಗುತ್ತಿನಪಾಲು, ಪದ್ಮನಾಭ ಎ, ಧನಂಜಯ ಎಂ, ಸಮರ್ಥ ಡಿ ಕುಲಾಲ, ಚೈತ್ರಾ ಡಿ ಎಲಿಯ, ಗುರುಪ್ರಸಾದ್ ಆಚಾರ್ಯ, ಸಾನ್ವಿ ಬಿಜೆ ಜಯಪ್ರಕಾಶ್ ಬಿ, ನವೀನ್ ನೆಕ್ಕಿಲು , ಲಲಿತಾ ಪಜಿಮಣ್ಣು, ಜಯಾನಂದ ಅಂಬಟ, ಮಾಲತಿ ಕೆ , ಅದ್ವಿಕ್ ಎ, ರಾಜೇಶ್ ಎ ಬಿ , ಸೌಮ್ಯ ಎಂ ಸಿ , ಗಣೇಶ್ ಪಿ , ಭವ್ಯ ಜೆ ಎ , ನಮೀಶ್ ಬಿಜೆ , ಮೋಹನ್ ಪಿ , ದೇವಿತ ಪಿ ಜಿ, ವನಿತ ಬಿ, ಧನ್ವಿತಾ , ಯಶ್ವಿನ್ ಭಾಗವಹಿಸಿದ್ದರು. ಮುಂಡೂರು ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಪ್ರಕಾಶ್ ಡಿಸೋಜ ಶಿಬಿರಕ್ಕೆ ಸಹಕಾರ ನೀಡಿದರು.