ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಗ್ರಾಹಕರಿಗೆ “ಸ್ವರ್ಣ ನಿಧಿ ಹಾಗೂ ಸ್ವರ್ಣ ಧಾರಾ” ಯೋಜನೆ

0

ಪುತ್ತೂರು: ಪುತ್ತೂರಿನ ಖ್ಯಾತ ಚಿನ್ನಾಭರಣಗಳ ಮಳಿಗೆ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುತ್ತಿದ್ದು, ಜಿಎಲ್ ಸ್ವರ್ಣ ನಿಧಿ ಹಾಗೂ ಸ್ವರ್ಣ ಧಾರಾ ಯೋಜನೆ ರೂಪಿಸಿದೆ.

ದಿನನಿತ್ಯದ ಸಣ್ಣಪುಟ್ಟ ಕಾರ್ಯಗಳಿಗೆ ಖರ್ಚು ಮಾಡುವ ಸಣ್ಣ ಮೊತ್ತವನ್ನು ಪರಿಶುದ್ಧ ಚಿನ್ನಾಭರಣವಾಗಿ ಪರಿವರ್ತಿಸಲು ಜಿ.ಎಲ್. ಸಂಸ್ಥೆ ಅವಕಾಶ ಒದಗಿಸಿದೆ. “ಜಿಎಲ್ ಸ್ವರ್ಣ ನಿಧಿ” ಸ್ಕೀಮ್ ನಲ್ಲಿ ಗ್ರಾಹಕರಿಗೆ ವಿಶೇಷ ಪ್ರಯೋಜನಗಳು ದೊರೆಯಲಿದೆ. ಈ ಯೋಜನೆ ಅವಧಿ 11 ತಿಂಗಳ ಅವಧಿಯಾಗಿದ್ದು, ಗ್ರಾಹಕರು 1 ತಿಂಗಳ ಕಂತನ್ನು ಬೋನಸ್ ಆಗಿ ಪಡೆಯಬಹುದು.

“ಜಿಎಲ್ ಸ್ವರ್ಣಧಾರಾ” ಚಿನ್ನ ಉಳಿತಾಯ ಯೋಜನೆಯಾಗಿದ್ದು, ಗ್ರಾಹಕರು ತಿಂಗಳ ಕಂತನ್ನು ಚಿನ್ನದ ಹೂಡಿಕೆಯಾಗಿ ಪರಿವರ್ತಿಸಿ ಆಕರ್ಷಕ ಬೋನಸ್ ಪಡೆಯಬಹುದಾಗಿದೆ. ಗ್ರಾಹಕರು ಆ್ಯಪ್ ಮುಖಾಂತರ ತಿಂಗಳ ಕಂತನ್ನು ಪಾವತಿಸಲು ಅವಕಾಶವಿದೆ. ಈ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here