ಪುತ್ತೂರು: ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಶಕ್ತಿ ಜಟಾಧಾರಿ ಭಜನ ಮಂದಿರದ ಲೋಕಾರ್ಪಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯು ಅ.12ರಂದು ಭಜನಾ ಮಂದಿರದ ಆವರಣದಲ್ಲಿ ಬಿಡುಗಡೆಗೊಂಡಿತು.

ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಪ್ರಗತಿಪರ ಕೃಷಿಕ ಮಲಾರು ಬೀಡು ಬಾಲಕೃಷ್ಣ ರೈ ಚಿಲ್ಮೆತ್ತಾರು ಮಾತನಾಡಿ, ದೊಡ್ಡ ಮಟ್ಟದ ಭವ್ಯವಾದ ಭಜನಾ ಮಂದಿರದ ನಿರ್ಮಾಣಗೊಂಡಿರುವುದು ಇದೇ ಪ್ರಥಮವಾಗಿದೆ. ಎಲ್ಲರ ಸಹಕಾರದಿಂದ ಭವ್ಯ ಮಂದಿರ ನಿರ್ಮಾಣಗೊಂಡಿದೆ. ಮುಂದೆ ವಿಭಜನೆಯಾಗದಂತೆ ಎಲ್ಲರೂ ಕೈಜೋಡಿಸಬೇಕು. ನಿರಂತರ ಭಜನೆ ನಡೆಯಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಅಳ್ವ ಮಾತನಾಡಿ, ಊರಿನ ಯುವಕರ ಶಕ್ತಿ, ಹಿರಿಯ ಮಾರ್ಗದರ್ಶನದಿಂದ ಭವ್ಯ ಭಜನಾ ಮಂದಿರ ನಿರ್ಮಾಣಗೊಂಡಿದೆ. ಇದಕ್ಕೆ ಶಾಸಕ ಅಶೋಕ್ ಕುಮಾರ್ ರೈಯವರು ರೂ.5ಲಕ್ಷ ಅನುದಾನ ನೀಡಿದ್ದಾರೆ. ಅಲ್ಲದೆ ಮಂದಿರವಿರುವ ಜಾಗದ ದಾಖಲೆ ಮಾಡಿಸುವ ಕಾರ್ಯವೂ ಮಾಡಲಿದ್ದಾರೆ. ಮಂದಿರಕ್ಕೆ ಆವಶ್ಯಕವಾದ ಸಹಕಾರ ನೀಡಲು ನಾನು ಸಿದ್ದನಾಗಿರುವುದಾಗಿ ತಿಳಿಸಿದರು.
ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಭಜನಾ ಮಂದಿರ ನಿರ್ಮಾಣ ಕಾಮಗಾರಿಗಳಿಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರೂ.3 ಲಕ್ಷ ಅನುದಾನ ಹಾಗೂ ವೈಯಕ್ತಿಕವಾಗಿ ರೂ.5ಲಕ್ಷ ದೇಣಿಗೆ ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿಯವರು ರೂ.5ಲಕ್ಷ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಇನ್ನಷ್ಟು ಅನುದಾನಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.
ಭಜನಾ ಮಂದಿರದ ಲೋಕಾರ್ಪಣಾ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೈಕಾರ ಪ್ರಾಸ್ತಾವಿಕವಾಗಿ ಮಾತನಾಡಿ, ಮಂದಿರದ ಲೋಕಾರ್ಪಣೆಗೆ ವ್ಯಾಪಕ ಪ್ರಚಾರವಾಗಬೇಕು. ಈ ನಿಟ್ಟಿನಲ್ಲಿ ಮಂದಿರದ ವ್ಯಾಪ್ತಿಯಲ್ಲಿರುವ ಮನೆಗಳ ಜೊತೆಗೆ ಗ್ರಾಮದ ಹೊರಗೂ ಆಮಂತ್ರಣ ತಲುಪಿಸುವ ಕೆಲಸವಾಗಬೇಕು. ಸಮಿತಿಯವರು ಇಂದಿನಿಂದಲೇ ಲೋಕಾರ್ಪಣೆಯ ಕಾರ್ಯಕ್ರಮಗಳಿಗೆ ಸಮಯ ವಿನಿಯೋಗಿಸುವಂತೆ ವಿನಂತಿಸಿದರು.
ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ ಶುಭಹಾರೈಸಿದರು.
ಸ್ನಾನಗೃಹ, ಶೌಚಾಲಯಕ್ಕೆ ಶಿಲಾನ್ಯಾಸ:
ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿಯವರು ಮಂಜೂರುಗೊಳಿಸಿದ ರೂ.5ಲಕ್ಷ ಅನುದಾನದಲ್ಲಿ ಮಂದಿರದ ಆವರಣದಲ್ಲಿ ನಿರ್ಮಾಣವಾಗಲಿರುವ ಸ್ನಾನಗೃಹ ಹಾಗೂ ಶೌಚಾಯಲದ ಕಾಮಗಾರಿಗಳಿಗೆ ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಶಿಲಾನ್ಯಾಸ ನೆರವೇರಿಸಿದರು.
ಭಜನ ಮಂದಿರದ ಆಡಳಿತ ಸಮಿತಿ ಅಧ್ಯಕ್ಷರು, ಲೋಕಾರ್ಪಣೆ ಸಮಿತಿ ಕಾರ್ಯಾಧ್ಯಕ್ಷ ಅಜಿತ್ ರೈ ಹೊಸಮನೆ, ಮಂದಿರದ ಪ್ರಧಾನ ಕಾರ್ಯದರ್ಶಿ ಸತೀಶ್ ಅಂಚನ್ ಅಜ್ಜಿಕಲ್ಲು, ಕೋಶಾಧಿಕಾರಿ ಶಶಿರಾಜ್ ರೈ ಚಿಲ್ಮೆತ್ತಾರು, ಸದಸ್ಯರಾದ ಪ್ರಕಾಶ್ ರೈ ಹೊಸಮನೆ, ಕೃಷ್ಣಪ್ರಸಾದ್ ನಾಯ್ಕ ದರ್ಖಾಸ್, ಮಹೇಶ್ ರೈ ಮೊಡಪ್ಪಾಡಿ, ಸತೀಶ್ ಕುಮಾರ್ ನಾಯ್ಕ ಮೊಡಪ್ಪಾಡಿ, ದಯಾನಂದ ಶೆಟ್ಟಿ ಮೊಡಪ್ಪಾಡಿ, ಶರತ್ ಕುಮಾರ್ ಗೌಡ ದೇವಸ್ಯ, ಸುಶಾಂತ್ ಅಜ್ಜಿಕಲ್ಲು, ಪ್ರಕಾಶ್ ಕುಮಾರ್ ನಾಯ್ಕ ಬೈರೋಡಿ, ಲೋಕಾರ್ಪಣೆ ಸಮಿತಿ ಉಪಾಧ್ಯಕ್ಷರಾದ ಲಕ್ಷ್ಮಣ ನಾಯ್ಕ ಅಜ್ಜಿಕಲ್ಲು, ರಮೇಶ್ ರೈ ಮೊಡಪ್ಪಾಡಿ, ಕಾರ್ಯದರ್ಶಿಗಳಾದ ಮಂಜುನಾಥ ರೈ ಮೊಡಪ್ಪಾಡಿ, ಚಂದ್ರಿಕಾ ಲೋಕೇಶ್ ರೈ ಮೊಡಪ್ಪಾಡಿ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಕೋಶಾಧಿಕಾರಿ ಸಂದೀಪ್ ರೈ ಚಿಲ್ಮೆತ್ತಾರು, ಸ್ವಾಗತ ಸಮಿತಿ ಸಂಚಾಲಕ ಭಗವಾನ್ ದಾಸ್ ರೈ ಚಿಲ್ಮೆತ್ತಾರು, ಸಹ ಸಂಚಾಲಕರಾದ ಚಂದ್ರಹಾಸ ರೈ ಪನಡ್ಕ, ಕರುಣಾಕರ ಮುಂಡೋವುಮೂಲೆ, ಪದ್ಮನಾಭ ಪೂಜಾರಿ ಅಜ್ಜಿಕಲ್ಲು, ಸದಸ್ಯರಾದ ಧೂಮಣ್ಣ ಶೆಟ್ಟಿ ಮೊಡಪ್ಪಾಡಿ, ಭಾಸ್ಕರ ಶೆಟ್ಟಿ ಅಜ್ಜಿಕಲ್ಲು, ಸುಖೇಶ್ ರೈ ಮೊಡಪ್ಪಾಡಿ, ಆರ್ಥಿಕ ಸಮಿತಿ ಸಂಚಾಲಕ ಶಶಿಧರ ರೈ ಮೊಡಪ್ಪಾಡಿ, ಸಂತೋಷ್ ಕುಮಾರ್ ರೈ ನಾಲ, ಹರೀಶ್ ರೈ ಅಜ್ಜಿಕಲ್ಲು, ಜಗದೀಶ್ ಶೆಟ್ಟಿ ಹೊಸಮನೆ, ದಾಮೋದರ ಶೆಟ್ಟಿ ತೊಟ್ಲ, ಧನಂಜಯ ರೈ ನಾಲ, ರಾಮಯ್ಯ ರೈ ಯಡ್ಕತ್ತೋಡಿ, ವೇದಿಕೆ ಸಮಿತಿ ಸಂಚಾಲಕ ಈಶ್ವರ ನಾಯ್ಕ ಮುಂಡೋವುಮೂಲೆ, ಆಮಂತ್ರಣ ವಿತರಣಾ ಸಮಿತಿಯ ಪ್ರಕಾಶ್ ಕುಮಾರ್ ಬೈರೋಡಿ, ಪ್ರಚಾರ ಸಮಿತಿ ಧನರಾಜ್ ರೈ ಕಾಪಿಕಾಡ್, ಮಂದಿರದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷರಾದ ಗುಡ್ಡಪ್ಪ ರೈ, ರಮೇಶ್ ರೈ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.
ಮಾನ್ವಿ ಪ್ರಾರ್ಥಿಸಿದರು. ಲೋಕಾರ್ಪಣ ಸಮಿತಿ ಗೌರವಾಧ್ಯಕ್ಷ ಶ್ರೀಧರ ರೈ ಹೆಚ್ ಹೊಸಮನೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಕೊಳಕ್ಕೆಗದ್ದೆ ವಂದಿಸಿದರು. ಆಡಳಿತ ಮಂಡಳಿ ಸದಸ್ಯೆ ಮಹೇಶ್ ರೈ ಕೇರಿ ಕಾರ್ಯಕ್ರಮ ನಿರೂಪಿಸಿದರು.