ಪುತ್ತೂರು: ಜೆಡ್ಡು ಅಳಿಕೆ ಗ್ರಾಮದ ಶ್ರೀ ಆದಿ ಧನ್ವಂತರಿ ಕ್ಷೇತ್ರ ಪದ್ಮಗಿರಿಯಲ್ಲಿ ಶ್ರೀ ಧನ್ವಂತರಿ ಜಯಂತಿ ನಡೆಯಲಿದೆ. ಆ ಸಲುವಾಗಿ ಅ.19 ರಂದು ಸಿಂಚನ ಲಕ್ಷ್ಮಿ ಕೋಡಂದೂರು ಇವರಿಂದ ಭರತನಾಟ್ಯ ಪ್ರಸ್ತುತಿ ನಡೆಯಲಿದೆ.
ಇವರು ಚಕ್ರ ಕೋಡಿ ಮನೆತನಕ್ಕೆ ಸೇರಿದ ನಿವೃತ್ತ ಶಿಕ್ಷಕ ರಘುರಾಮ ಶಾಸ್ತ್ರಿ ಹಾಗೂ ಖ್ಯಾತ ಸಂಗೀತ ವಿದುಷಿ ಸವಿತಾ ಶಾಸ್ತ್ರಿ ದಂಪತಿಗಳ ಸುಪುತ್ರಿ. ಸಂಗೀತ ಹಾಗೂ ನಾಟ್ಯ ಎರಡರಲ್ಲಿಯೂ ಅತ್ಯಂತ ಪ್ರೌಢಿಮೆಯನ್ನು ಗಳಿಸಿರುವ ಈಕೆ ಹಲವಾರು ರಾಜ್ಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ .ಪ್ರಸ್ತುತ ಇವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೊದಲನೇ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ Mtech ವ್ಯಾಸಂಗ ಮಾಡುತ್ತಿದ್ದಾರೆ.