ಪುತ್ತೂರು: ಹೆತ್ತವರಿಗಾಗಿ ಕಾಯುತ್ತಿರುವ ಹಸುಗೂಸು – 3 ತಾಸಿನಿಂದ ಮಗುವನ್ನು ಸಂತೈಸುತ್ತಿರುವ ಬದ್ರುನ್ನಿಸಾ- ಮಗುವಿನ ಹೆತ್ತಬ್ಬೆಗಾಗಿ ಕಾಯುತ್ತಿರುವ ಸಂಘಟಕರು

0

ಪುತ್ತೂರು: ಅಶೋಕ ಜನಮನ ಕಾರ್ಯಕ್ರಮದ ಮೈದಾನದಲ್ಲಿ ಹೆತ್ತವರಿಂದ ಹಸುಗೂಸೊಂದು ಬೇರ್ಪಟ್ಟ ಘಟನೆ ನಡೆದಿದೆ. ನಾಲ್ಕು ತಿಂಗಳ ಹೆಣ್ಣು ಮಗುವಿನ ಹೆತ್ತವರಿಗಾಗಿ ಸಂಘಟಕರು ಪಡಬಾರದ ಕಷ್ಟ ಪಡುತ್ತಿದ್ದಾರೆ. ವೇದಿಕೆಯ ಎದುರು ಭಾಗದಲ್ಲಿ ಮಗುವನ್ನು ಮಡಿಲಲ್ಲಿಟ್ಟು ಒಳಮೊಗ್ರಿನ ಬದ್ರುನ್ನಿಸಾ ಎನ್ನುವ ಮಹಿಳೆ ಮಗುವಿನ ತಾಯಿಗಾಗಿ ಕಾಯುತ್ತಿದ್ದಾರೆ.ಕಳೆದ ಮೂರು ಗಂಟೆಯಿಂದ ನಿರಂತರವಾಗಿ ಉದ್ಘೋಷಕರು ಮಗುವಿನ ಹೆತ್ತವರಿಗಾಗಿ ಕರೆ ನೀಡುತ್ತಿದ್ದರೂ ಹೆತ್ತವರಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಇದು ಅಚ್ಚರಿಗೆ ಕಾರಣವಾಗಿದ್ದರೂ ಸಂಘಟಕರು ಮಾತ್ರ ತಾಳ್ಮೆಯಿಂದ ಕಾಯುವಿಕೆಯನ್ನು ಮುಂದುವರೆಸಿದ್ದಾರೆ.

LEAVE A REPLY

Please enter your comment!
Please enter your name here