ಎಡಮಂಗಲದಲ್ಲಿ ಉಪೇಕ್ಷಿತ ಬಂಧುಗಳ ಮನೆಗೆ ಭೇಟಿ ನೀಡಿದ ಶ್ರೀ ರಾಜಶೇಖರಾನಂದ ಸ್ವಾಮೀಜಿ
ಕಡಬ: ಕಡಬ ವಿ.ಹಿಂ.ಪ. ಧರ್ಮ ಪ್ರಸಾರ ವಿಭಾಗ ಪುತ್ತೂರು ಜಿಲ್ಲೆ ಕಡಬ ಪ್ರಖಂಡ ಎಡಮಂಗಲ ಘಟಕದ ವತಿಯಿಂದ ಎಡಮಂಗಲದ ಮರ್ದೂರಡ್ಕ ಸೇವಾ ಬಸ್ತಿಯಲ್ಲಿ ಸಂತರ ಪಾದಯಾತ್ರೆ ಕಾರ್ಯಕ್ರಮ ಅ.19ರಂದು ನಡೆಯಿತು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಉಪೇಕ್ಷಿತ ಬಂಧುಗಳ ಮನೆಗೆ ಭೇಟಿ ನೀಡಿದರು. ಕಾರ್ಯಕ್ರಮದಲ್ಲಿ ಗೋಪೂಜೆ ನಡೆಸಿ ಆಶೀರ್ವಚನ ನೀಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರರ ವರ್ಷಾಚರಣೆಯಲ್ಲಿದ್ದು, ನೂರು ವರ್ಷಗಳಿಂದ ವಿವಿಧ ಸೇವಾ ಕಾರ್ಯಗಳನ್ನು ನಡೆಸಿ ಅಗಾಧ ಶಕ್ತಿಯಾಗಿ ಬೆಳೆದಿದೆ. ಆದರೂ ಇಂದಿಗೂ ಸಮಾಜದಲ್ಲಿ ಜಾತಿ ವ್ಯವಸ್ಥೆಗಳು ಹಾಗೂ ಉಪೇಕ್ಷಿತ ವರ್ಗಗಳನ್ನು ಪ್ರತ್ಯೇಕಿಸುವ ಕೆಲವರ ದೃಷ್ಟಿಕೋಣದಿಂದ ಸಮಸ್ತ ಹಿಂದೂ ಸಮಾಜ ಒಗ್ಗಟ್ಟಿನಿಂದ ಇರಲು ತೊಡಕಾಗಿದೆ. ಆದುದರಿಂದ ಸಮಸ್ತ ಹಿಂದೂ ಸಮಾಜದ ಎಲ್ಲ ವರ್ಗಗಳ ಜನರನ್ನು ಒಂದೂಗೂಡಿಸುತ್ತಾ ಅವರ ಕಷ್ಟ ಸುಖದಲ್ಲಿನಾವು ಪಾಲ್ಗೋಳ್ಳಬೇಕು ಈ ಮೂಲಕ ಸಮಾಜದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಸ್ಥೆಯಾದ ವಿ.ಹಿಂ.ಪ. ದ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ನಮ್ಮ ಧರ್ಮ ಸಂಸ್ಕೃತಿಗಳನ್ನು ಸಮುದಾಯವಾಗಿ ಆಚರಿಸಿದಾಗ ಎಲ್ಲರಿಗೂ ತಲುಪುತ್ತದೆ ಎಂದರು.
ವಿವೇಕಾನಂದ ವಿದ್ಯಾವರ್ದಕ ಸಂಘದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ವೆಂಕಟ್ರಮಣ ರಾವ್ ಮಂಕುಡೆ ಮಾತನಾಡಿದರು. ವೇದಿಕೆಯಲ್ಲಿ ಕಾಲೋನಿಯ ಹಿರಿಯರಾದ ಕತ್ತೋಡಿ ಮರ್ದೂರಡ್ಕ, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ ಮೋಹನ್ ದಾಸ್ ಬಳ್ಕಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿ.ಹಿಂ.ಪ. ಜಿಲ್ಲಾ ಸಹ ಕಾರ್ಯದರ್ಶಿ ಪ್ರಮೋದ್ ನಂದುಗುರಿ, ಪ್ರಖಂಡ ಸಹ ಕಾರ್ಯದರ್ಶಿ ಲಕ್ಷ್ಮೀಶ ಇಜಿನಡ್ಕ, ಸೇವಾ ಪ್ರಮುಖ್ ಚೇತನ್ ಎಡಮಂಗಲ, ಸತ್ಸಂಗ ಪ್ರಮುಖ್ ಸುಖೇಶ್ ಹಳೆಸ್ಟೇಷನ್, ಪ್ರಚಾರ ಪ್ರಸಾರ ಪ್ರಮುಖ್ ಚೇತನ್ ಕೋಡಿಂಬಾಳ, ಎಡಮಂಗಲ ಗ್ರಾ.ಪಂ. ಅಧ್ಯಕ್ಷ ರಾಮಣ್ಣ ಜಾಲ್ತಾರು, ಪ್ರಮುಖರಾದ ದಾಮೋಧರ ಗೌಡ ಲೆಕ್ಕೆಸಿರಿಮಜಲು, ಸರ್ವೇಶ್ ಅಲಕ್ಕೆ, ಪ್ರವೀಣ್ ರೈ ಮರ್ದೂರಡ್ಕ, ಮುದರ ಮೇಲಿನ ಮರ್ದೂರಡ್ಕ, ಅಣ್ಣು ಕೆಳಗಿನ ಮರ್ದೂರಡ್ಕ, ಕುಂಞಪ್ಪ ಮರ್ದೂರಡ್ಕ ಮೊದಲಾದವರು ಉಪಸ್ಥಿತರಿದ್ದರು.
ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೀಳಾ ನಿರೂಪಿಸಿ, ವಂದಿಸಿದರು.
