ಪುತ್ತೂರು: ನಮ್ಮ ಶಾಸಕರಾದ ಅಶೋಕ್ ಕುಮಾರ್ ರೈ ರವರ “ಅಶೋಕ ಜನ ಮನ” ಕಾರ್ಯಕ್ರಮದಲ್ಲಿ ಒಳ್ಳೆಯ ಕಾರ್ಯಕ್ರಮಕ್ಕೆ ಜನರು ಪ್ರೀತಿಯಿಂದ ಬಂದಿದ್ದಾರೆ. ಆದರೆ ಬಿಜೆಪಿ ಒಳ್ಳೆಯ ಕಾರ್ಯಕ್ರಮದ ವಿರುದ್ಧ ಟೀಕೆ ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ವಿರೋಧ ಪಕ್ಷದಲ್ಲಿ ನಿಂತು ಕೆಲಸ ಮಾಡಲಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಅಶೋಕ ಜನಮನದ ವಿರುದ್ಧ ಬಿಜೆಪಿ ಪತ್ರಿಕಾಗೋಷ್ಠಿ ಮಾಡಿ ಕಾರ್ಯಕ್ರಮದಲ್ಲಿ ಅವ್ಯವಸ್ಥೆ ಆಗಿದೆ. ಅದಕ್ಕೆ ರಾಜ್ಯ ಸರಕಾರ, ಗೃಹ ಇಲಾಖೆ, ಜಿಲ್ಲಾಡಳಿತ ಹೊಣೆ ಎಂದು ಹೇಳಿರುವುದಕ್ಕೆ ಹುರುಳಿಲ್ಲ. ಅಶೋಕ ಕುಮಾರ್ ರೈ ಯವರು ಸತತ 13 ವರ್ಷಗಳಿಂದ ವಸ್ತ್ರದಾನ ಮಾಡುತ್ತಿದ್ದಾರೆ. ಈ ಬಾರಿ ಒಂದು ಲಕ್ಷ ಜನರಿಗೆ ಕೊಟ್ಟಿದ್ದಾರೆ. ಅಶೋಕ್ ಕುಮಾರ್ ರೈ ಅವರು ತನ್ನ ಗಳಿಕೆಯ ಒಂದಂಶವನ್ನು ಜನರಿಗೆ ಮರಳಿಸುತ್ತಿದ್ದಾರೆ. ಇಲ್ಲಿ ಇಷ್ಟು ಜನ ಸೇರಿದ್ದು ಅಶೋಕ್ ರೈ ಯವರ ಮೇಲೆ ಪ್ರೀತಿ ಇಟ್ಟು ಬಂದಿರುವುದಿಲ್ಲದೇ ಬೇರೆ ಯಾವ ಕಾರಣಕ್ಕೂ ಅಲ್ಲ. ಅವರ ಟ್ರಸ್ಟಿನ ಮೂಲಕ ತರಬೇತಿ ನೀಡಿ ನೂರಾರು ಜನರಿಗೆ ಉದ್ಯೋಗ ಸಿಗುವಂತೆ ಮಾಡಿದ್ದಾರೆ. ಕಂಬ ಏರುವ ತರಬೇತಿ ನೀಡಿ ಮೆಸ್ಕಾಂನಲ್ಲಿ ಉದ್ಯೋಗಕ್ಕೆ ಕಾರಣಕರ್ತರಾಗಿದ್ದಾರೆ. ಉದ್ಯೋಗ ಮೇಳಕ್ಕೆ ಯುವಕರನ್ನು ಕರೆದೊಯ್ದು ಬೇರೆ ಬೇರೆ ಖಾಸಗಿ ಒಡೆತನದ ಸಂಸ್ಥೆಗಳಲ್ಲಿ ಉದ್ಯೋಗ ಸೇರುವಂತೆ ಮಾಡಿದ್ದಾರೆ. ಶಾಸಕರು ನಿತ್ಯ ನಿರಂತರ ಪುತ್ತೂರು ವಿಧಾನಸಭೆಯ ಮಹಾಜನತೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಕೆಪಿಎಸ್ಸಿ ಮಾದರಿ ಶಾಲೆ 5ಕ್ಕೆ ಬೇಡಿಕೆಯಲ್ಲಿ 3 ಶಾಲೆಗಳಿಗೆ ಪ್ರಾರಂಭಿಸಲು ಈಗಾಗ ಅನುಮೋದನೆ ದೊರೆತಿದೆ. ಮೆಡಿಕಲ್ ಕಾಲೇಜ್ ಆಗಬೇಕೆಂದು ಟೊಂಕ ಕಟ್ಟಿ ಅನುಮೋದನೆ ದೊರೆತಿದೆ. ಸಿದ್ದರಾಮಯ್ಯನವರು ಕೂಡ ತುಂಬಿದ ವೇದಿಕೆಯಲ್ಲಿಯೇ ಘೋಷಣೆ ಮಾಡಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 60 ಕೋಟಿ ಅನುದಾನದಲ್ಲಿ ಹಾಗೂ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ 3೦೦ ಕೋಟಿ ಅನುದಾನದಲ್ಲಿ ಜೀಣೋದ್ದಾರದ ಮಾಸ್ಟರ್ ಪ್ಲಾನ್ ಈಗಾಗಲೇ ಸಿದ್ಧಗೊಂಡಿದೆ. ಒಟ್ಟಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಅವರು 2೦೦೦ಕೋಟಿ ರೂಪಾಯಿಗೂ ಮಿಕ್ಕಿ ಅನುದಾನ ತಂದು ಕೊಟ್ಟಂತಹ ಧೀಮಂತ ನಾಯಕ ಅಶೋಕ್ ಕುಮಾರ್ ರೈ. ಅವರ ಸಾಧನೆಯನ್ನು ಬಿಜೆಪಿಯವರಿಗೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಇಷ್ಟು ವರ್ಷದ ಬಿಜೆಪಿ ಶಾಸಕರುಗಳ ಸಾಧನೆಯನ್ನು ನಮ್ಮ ಶಾಸಕರು ಎರಡುವರೆ ವರ್ಷದಲ್ಲಿ ಮೀರಿಸಿದ್ದಾರೆ. ಶಾಸಕರಿಂದ ಪುತ್ತೂರಿನ ಅಭಿವೃದ್ಧಿಯನ್ನು ಸಹಿಸಲಾರದೆ ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ ಎಂದು ಕೃಷ್ಣಪ್ರಸಾದ್ ಆಳ್ವ ಹೇಳಿದರು.
ಕಾಂಗ್ರೆಸ್ನ ಅಶ್ವಮೇಧ ಕುದುರೆ ಅಭಿವೃದ್ಧಿಯಲ್ಲಿ ಹೋಗಿ ಆಗಿದೆ:
ಬಡವರ ಪರವಾಗಿ ಮಾಡುವ ಯಾವುದೇ ಕಾರ್ಯಕ್ರಮಕ್ಕೆ ಬಿಜೆಪಿಗರು ಯಾವಾಗಲೂ ವಿರೋಧ ಮಾಡುತ್ತಾ ಬಂದವರು. ಪಂಚ ಗ್ಯಾರಂಟಿಯನ್ನು ವಿರೋಧಿಸಿದವರು. ಮೆಡಿಕಲ್ ಕಾಲೇಜು ಘೋಷಣೆಯಾದಾಗ ಅದನ್ನು ಸುಳ್ಳು ಎಂದವರು. ನಿಮಗೆ ಟೀಕೆ ಮಾಡಲಿಕ್ಕೆ ಯಾವುದು ಸಿಗುವುದಿಲ್ಲ ಎಂದಾಗ ಅಶೋಕ ಜನಮನ ಕಾರ್ಯಕ್ರಮದಲ್ಲಿ ಏನಾದರೂ ಸಿಗಬಹುದಾ ಎಂದು ಹುಡುಕಾಡಿದ್ದಾರೆ. ನಮ್ಮ ಕಾಂಗ್ರೆಸಿನ ಅಶ್ವಮೇಧ ಕುದುರೆ ಅಭಿವೃದ್ಧಿಯಲ್ಲಿ ಹೋಗಿ ಆಗಿದೆ ಎಂದು ಕೃಷ್ಣಪ್ರಸಾದ್ ಆಳ್ವ ಹೇಳಿದರು.
ಟೀಕೆ ನಿಲ್ಲಿಸಿ, ವಿರೋಧ ಪಕ್ಷದಲ್ಲಿ ನಿಂತು ಕೆಲಸ ಮಾಡಿ:
ಜನರು ಪಂಚ ಗ್ಯಾರಂಟಿಯ ಅಭಿಯಾನಕ್ಕೆ ಪ್ರೀತಿಯಿಂದ ಜನಪ್ರಿಯ ಮುಖ್ಯಮುಂತ್ರಿ ಸಿದ್ದರಾಮಯ್ಯರವರ ಗೌರವದಿಂದ ಹಾಗೂ ಪುತ್ತೂರಿನ ಅಭಿವೃದ್ಧಿಯ ಹರಿಕಾರ ಅಶೋಕ್ ಕುಮಾರ್ ರೈ ರವರ ಅಭಿಮಾನದಿಂದ ಲಕ್ಷ ಲಕ್ಷ ಜನ ಬೆಳಿಗ್ಗಿನಿಂನದ ರಾತ್ರಿ 9.45ರವರೆಗೆ ಬಂದು ಹೋಗಿದ್ದಾರೆ. ಜನರ ಮನ ಬೆಳಗುವ ಕಾರ್ಯಕ್ರಮ ಯಶಸ್ವಿಯಾಗಿದೆ. ದಯವಿಟ್ಟು ಟೀಕೆ ಟಿಪ್ಪಣೆ ಮಾಡುವುದನ್ನು ನಿಲ್ಲಿಸಿ. ವಿರೋಧ ಪಕ್ಷದಲ್ಲಿ ನಿಂತು ಕೆಲಸ ಮಾಡಿ ಎಂದು ಹೇಳಿದ ಕೃಷ್ಣಪ್ರಸಾದ್ ಅಳ್ವ ಅವರು ಸಣ್ಣ ತಪ್ಪು ಆಗಿದ್ದರೆ ಮುಂದಕ್ಕೆ ಸರಿ ಮಾಡುವ ಕೆಲಸ ಮಾಡುತ್ತೇವೆ ಎಂದು ಕೃಷ್ಣಪ್ರಸಾದ್ ಆಳ್ವ ಹೇಳಿದರು.
ಏನು ಆಗಿಲ್ಲ:
ಕಾರ್ಯಕ್ರಮದಲ್ಲಿ ಕೆಲವು ಜನರ ಅಸ್ವಸ್ತ ಆಗಿದೆ, ಅದಕ್ಕೆ ಸರಿಯಾದ ಸ್ಪಂದನೆ ಆಗಿದೆ. ಉಡುಗೊರೆ ಕೊಡುವಲ್ಲಿ ನೂಕುನುಗ್ಗಲು ಆಗಿದೆ. ಸ್ವಲ್ಪ ಸಮಸ್ಯೆ ಆಗುವುದು ಸಹಜ. ಕುಂಬಮೇಳದಲ್ಲಿ, ಮೋದಿ ಬಂದಾಗಲೂ ಸಮಸ್ಯೆ ಆಗಿದೆ. ಬಿಜೆಪಿಯವರಿಗೆ ಟೀಕೆ ಟಿಪ್ಪಣಿ ಮಾಡಲು ಸಣ್ಣ ಕಾರ್ಯಕ್ರಮ ಬೇಕಿತ್ತು. ಸಿಎಂ ಬರ್ತಾರೆ ಎಂದಾಗ ಕೊನೆಯ ಕ್ಷಣದಲ್ಲಿ ನಮಗೆ ನೀರಿನ ಬಾಟಲಿಯನ್ನು ಜನರಿಗೆ ನೀಡಲು ಪೊಲೀಸರು ಬಿಡಲಿಲ್ಲ. ಆದರೆ ನೀರಿನ ಬ್ಯಾರಲ್ ಇಟ್ಟು ಅಲ್ಲಿಂದ ನೀರು ಕೊಡುವ ಕೆಲಸ ಮಾಡಿದ್ದೇವು. ಸ್ಟೇಜ್ನಿಂದ 40 ಮೀಟರ್ ದೂರ ಸಭಾಂಗಣ ಮಾಡಬೇಕಾಗಿತ್ತು. ಊಟದ ಕೌಂಟರ್, ವಸ್ತ್ರವಿತರಣೆ ಕೌಂಟರ್ ಕೊನೆಯ ಕ್ಷಣದಲ್ಲಿ ಬದಲಾವಣೆಯನ್ನು ಭದ್ರತಾ ಸಿಬ್ಬಂದಿಗಳು ಮಾಡಿಸಿದ್ದು. ಸ್ವಲ್ಪ ನೂಗುನುಗ್ಗಲು ಆಗಿದೆ. ಯಾರಿಗೂ ಗಾಯ ಆಗಿಲ್ಲ. ಅಲ್ಲಿ ಬೇಕಾದಷ್ಟು ವೈದ್ಯಕೀಯ ಸೇವೆಯೂ ಇತ್ತು. ನಮ್ಮ ಮನೆಯಲ್ಲೂ 5೦೦ ಮಂದಿಯ ಕಾರ್ಯಕ್ರಮ ಆಗುವಾಗ ವ್ಯತ್ಯಾಸ ಆಗುತ್ತದೆ. ಇಂತಹ ಸಂದರ್ಭದಲ್ಲಿ ದೊಡ್ಡ ಕಾರ್ಯಕ್ರಮದಲ್ಲಿ ಸಣ್ಣ ವ್ಯತ್ಯಾಸ ಆಗುವುದು ಸಹಜ. ಆದರೆ ಬಿಜೆಪಿಯವರಿಗೆ ಸಾರ್ವಜನಿಕರ ಮೇಲೆ ಕರುಣೆ ಇಲ್ಲದಂತೆ ಮಾತನಾಡುತ್ತಾರೆ. ಕಾರ್ಯಕ್ರಮದಲ್ಲಿ ರಾತ್ರಿಯು ಕೂಡಾ ಜನರಿಗೆ ಉಡುಗೊರೆ ಕೊಟ್ಟು ಕಳುಹಿಸಿದ್ದೇವೆ. ವಾಹನ ವ್ಯವಸ್ಥೆ ಇಲ್ಲದಾಗ ಶಾಸಕರೇ ತನ್ನ ಸ್ವಂತ ಖರ್ಚಿನಲ್ಲಿ ದೂರದ ಊರಿಗೆ ರಿಕ್ಷಾದಲ್ಲಿ ಕಳುಹಿಸಿಕೊಟ್ಟಿದ್ದಾರೆ ಎಂದು ರವೀಂದ್ರ ನೆಕ್ಕಿಲು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೂನ್ ಸ್ವೀಕ್ವೇರಾ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಬ್ದುಲ್ ರಹಿಮಾನ್ ಅಜಾದ್, ಮಾದ್ಯಮ ವಕ್ತಾರ ಸುಪ್ರಿತ್ ಕಣ್ಣಾರಾಯ, ವಕ್ತಾರ ರವೀಂದ್ರ ರೈ ನೆಕ್ಕಿಲು ಉಪಸ್ಥಿತರಿದ್ದರು.