





ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಕುಕ್ಕಾಡಿ ಪ್ರೀತಂ ಪುತ್ತೂರಾಯ ಅವರನ್ನು ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಆರೋಗ್ಯ ರಕ್ಷಾ ಸಮಿತಿಯಿಂದ ದೇವಸ್ಥಾನದಲ್ಲಿ ಗೌರವಿಸಿದರು.


ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಸದಸ್ಯ ಲಕ್ಷ್ಮಣ ಬೈಲಾಡಿ, ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಉದಯ ಕುಮಾರ್ ರೈ, ಹರಿಣಿ ಪುತ್ತೂರಾಯ, ತೇಜಸ್ ಸಂಪ್ಯ, ಜಯರಾಮ ನಾಕ್ ಸಿಂಹವನ, ಸುರೇಶ್ ಸಂಪ್ಯ, ನಾರಾಯಣ ನಾಕ್ ಸಿಂಹವನ, ನವೀನ್ ಕುಕ್ಕಾಡಿ, ಸುರೇಶ್ ಮುಕ್ವೆ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.















