





ಪುತ್ತೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮತ್ತು ಜಿಲ್ಲಾ ವಕ್ಫ್ ಸಮಿತಿ ವತಿಯಿಂದ ಮಂಗಳೂರಿನಲ್ಲಿ ಉಮ್ಮೀದ್ ಪೋರ್ಟಲ್ ಕಾರ್ಯಗಾರ, ಟಿ. ಎಂ. ಶಹೀದ್, ಕೆ. ಎಂ. ಮುಸ್ತಫಾರಿಗೆ ಸನ್ಮಾನ ಮಂಗಳೂರು ಪುರಭವನದಲ್ಲಿ ದ.ಕ ಜಿಲ್ಲೆಯ ಎಲ್ಲಾ ತಾಲೂಕುಗಳ ಮಸೀದಿ, ಮದ್ರಸ, ಖಬರಸ್ಥಾನ, ದರ್ಗಾ ಸಮಿತಿಗಳ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಖಜಾಂಚಿಗಳ ಸಮಾವೇಶ ಕರ್ನಾಟಕ ವಕ್ಫ್ ಆಸ್ತಿಗಳ ನೋಂದಣಿ ಪೋರ್ಟಲ್ “ಉಮ್ಮೀದ್ ” ಮಾಹಿತಿ ಕಾರ್ಯಾಗಾರ ಜರಗಿತು.


ಸಮಾರಂಭದ ಅಧ್ಯಕ್ಷತೆಯನ್ನು ನಿಕಟ ಪೂರ್ವ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿ ಸ್ಟಾರ್ ವಹಿಸಿದ್ದರು. ಕರ್ನಾಟಕ ವಿಧಾನಸಭಾ ಸ್ಪೀಕರ್ ಯು. ಟಿ ಖಾದರ್ ಉದ್ಘಾಟಿಸಿದರು.





ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡ ಟಿ. ಎಂ ಶಹೀ ದ್ ತೆಕ್ಕಿಲ್, ಸುಳ್ಯ ಯೋಜನಾ ಪ್ರಾಧಿಕಾರ ( ಸೂಡ) ಅಧ್ಯಕ್ಷರಾಗಿ ನೇಮಕಗೊಂಡ ಕೆ.ಎಂ. ಮುಸ್ತಫರನ್ನು ಸನ್ಮಾನಿಸಲಾಯಿತು. ಸಂಪನ್ಮೂಲಗಳ ವ್ಯಕ್ತಿಗಳಾಗಿ ರಾಜ್ಯ ವಕ್ಫ್ ಮಂಡಳಿ ಸ್ಕ್ರೀನಿಂಗ್ ಕಮಿಟಿ ಚೇರ್ಮನ್ ಅನ್ವರ್ ಪಾಷ ದಾವಣಗೆರೆ, ಮಾಜಿ ರಾಜ್ಯ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಖಾಲಿದ್ ಅಹ್ಮದ್ ಬೆಂಗಳೂರು ಲೀಗಲ್ ಸೆಲ್ ಚೇರ್ಮನ್ ರಿಯಾಜ್ ಅಹ್ಮದ್ ಖಾನ್ ಬೆಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ. ಎ ಗಫೂರ್, ಮಾಜಿ ವಕ್ಫ್ ಸಮಿತಿ ಅಧ್ಯಕ್ಷ ಎಸ್.ಎಂ.ಆರ್ ರಶೀದ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.









