





ಪುತ್ತೂರು: ಪುತ್ತೂರಿನಲ್ಲಿರುವ ಸೈನಿಕ ಭವನ ದುರಸ್ಥಿಗೆ ಅನುದಾನ ನೀಡುವಂತೆ ಮಾಜಿ ಸೈನಿಕರ ಸಂಘದ ವತಿಯಿಂದ ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಿದರು.


ಮನವಿಯಲ್ಲಿ 1990ರಲ್ಲಿ ನಿರ್ಮಾಣವಾದ ಮಾಜಿ ಸೈನಿಕರ ಭವನ ಶಿಥಿಲಗೊಂಡಿರುತ್ತದೆ. ಸಂಘದ ಚಟುವಟಿಕೆಗಾಗಿ ಇರುವ ಈ ಕಟ್ಟಡದಲ್ಲಿ ಸಭಾಭವನವಿದ್ದು ಇದಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಯೂ ಆಗಬೇಕಿದೆ. ಇದುವರೆಗೆ ಸಂಘದ ಸದಸ್ಯರ ಮೂಲಕ ದೇಣಿಗೆ ಸಂಗ್ರಹಿಸಿ ಕಟ್ಟಡವನ್ನು ನಿರ್ಮಾಣ ಮಾಡಿದ್ದು, ಈ ಕಟ್ಟಡವನ್ನು ದುರಸ್ಥಿ ಮಾಡಿಸಲು ಅನುದಾನಕ್ಕಾಗಿ ಮನವಿ ಮಾಡಿದರು. ಸಂಘದ ಈ ಕಟ್ಟಡವನ್ನು ಯುವ ಜನತೆಗೆ ತರಬೇತಿ ನೀಡಲು ಬಳಕೆಯಾಗುತ್ತಿದ್ದು, ಮಾನವ ಸಂಪತ್ತನ್ನು ವೃದ್ದಿಸುವ ಕೇಂದ್ರ ಆಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.





ಮನವಿ ಸ್ವೀಕರಿಸಿದ ಶಾಸಕರು ಮಾಜಿ ಸೈನಿಕರ ಕಟ್ಟಡ ದುರಸ್ಥಿಗೆ ಮೊದಲ ಹಂತದಲ್ಲಿ 5 ಲಕ್ಷ ರೂಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಸಂತಕುಮಾರ್, ಟ್ರಸ್ಟ್ ಅಧ್ಯಕ್ಷ ಜೋಸೆಫ್ ಡಿಸೋಜಾ, ಸದಸ್ಯರಾದ ಭಾಸ್ಕರ್ ನಾಯ್ಕ್, ಅಮ್ಮಣ್ಣ ರೈ ಪಾಪೆಮಜಲು, ರಮೇಶ್ ರೈ, ಚಂಚಲಾಕ್ಷ, ನಾಗಪ್ಪ ಗೌಡ, ಹೊನ್ನಪ್ಪ ಗೌಡ, ಬಾಲಕೃಷ್ಣ, ಚಂದ್ರಶೇಖರ್ ಎ, ಸಿದ್ದಣ್ಣ ಗೌಡ, ರವಿಚಂದ್ರ ಶೆಟ್ಟಿ, ಮಧನಪೂಜಾರಿ, ಸದಾನಂದ ಕೆ ಎನ್ ಉಪಸ್ಥಿತರಿದ್ದರು.










