ವೈಭವ್ ಫೆಲೋಶಿಪ್ ಪ್ರಶಸ್ತಿಗೆ ಭಾಜನರಾದ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರೊ. ಪ್ರಶಾಂತ್ ಮಿನೇಜಸ್ ಕಾಲೇಜಿಗೆ ಭೇಟಿ – ಸಂವಾದ

0

ಪುತ್ತೂರು : ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಕೊಡಮಾಡುವ ಪ್ರತಿಷ್ಠಿತ ‘ವೈಶ್ವಿಕ್ ಭಾರತೀಯ ವೈಜ್ಞಾನಿಕ (ವೈಭವ್) ಫೆಲೋಶಿಪ್ ಅವಾರ್ಡ್ 2025-ಗೆ ಭಾಜನರಾದ, ಪ್ರಸ್ತುತ ಹೆಲ್ಮ್ ಹೋಲ್ಟ್ ಸೆಂಟ್ರಮ್ ಬರ್ಲಿನ್ (HZB)ನಲ್ಲಿ ವೇಗವರ್ಧನೆ ಮತ್ತು ವಸ್ತು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ, ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ಪ್ರೊ. ಪ್ರಶಾಂತ್ ಮಿನೇಜಸ್ ಅವರು ಕಾಲೇಜಿಗೆ ಭೇಟಿ ನೀಡಿ ವಿಜ್ಞಾನ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕಾಲೇಜಿನ ಪ್ರಾಂಶುಪಾಲರಾದ ವಂ.ಡಾ.ಆಂಟನಿ ಪ್ರಕಾಶ್ ಮೋಂತೆರೋ ಸ್ವಾಗತಿಸಿದರು.ಪ್ರಶಾಂತ್‌ ಅವರು ವಿಜ್ಞಾನ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ” ನನ್ನ ಸಾಧನೆಯ ಹಾದಿಗೆ ಭದ್ರ ಬುನಾದಿಯಾಗಿರುವ ಶಿಕ್ಷಣ ನೀಡಿದ ಕಾಲೇಜಿಗೆ ನಾನು ಸದಾ ಚಿರಋಣಿ. ನನ್ನ ಸಾಧನೆಯಲ್ಲಿ ಶಿಕ್ಷಕರಿಂದ ದೊರೆತ ಪ್ರೋತ್ಸಾಹ ಹಾಗೂ ಕಾಲೇಜಿನಲ್ಲಿ ದೊರೆತ ವೈಜ್ಞಾನಿಕ ಸಂಸ್ಕೃತಿಯ ವಾತಾವರಣವೇ ನನ್ನ ಇಂದಿನ ಈ ಯಶಸ್ಸಿಗೆ ಕಾರಣ” ಎಂಬುದಾಗಿ ಹೇಳಿದರು. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ಕಾಲೇಜು ಮಾಡಿದ ಸಾಧನೆಗಳನ್ನು ಪ್ರಶಂಸಿಸಿದರು.

ಪ್ರೊ. ಪ್ರಶಾಂತ್ ಮಿನೇಜಸ್ ವೇಗವರ್ಧನೆ ಮತ್ತು ವಸ್ತು ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಜಗತ್ತಿನ ಅಗ್ರಗಣ್ಯ ವಿಜ್ಞಾನಿಗಳ ಸಾಲಿನಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ. ಇವರ ಪರಿಸರ ಸುಸ್ಥಿರತೆ ಮತ್ತು ನವೀಕರಿಸಬಹುದಾದ ಇಂಧನಗಳ ಮೇಲಿನ ಸಂಶೋಧನೆಗೆ ಇವರಿಗೆ ದೊರಕಿದ ಈ ಪ್ರಶಸ್ತಿ ಇವರ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದೆ. ಹಾಗೆಯೇ 200ಕ್ಕೂ ಹೆಚ್ಚು ಉನ್ನತ ಪ್ರಭಾವದ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದರ ಜೊತೆಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇಂತಹ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗುವ ಮೂಲಕ ಸಂತ ಫಿಲೋಮಿನಾ ಕಾಲೇಜಿನ ಕೀರ್ತಿ ಪತಾಕೆಯನ್ನು ಬಾನೆತ್ತರದಲ್ಲಿ ಹಾರಿಸಿದ್ದಾರೆ ಎಂಬುದು ಸಂಸ್ಥೆಗೆ ಹೆಮ್ಮೆಯ ವಿಚಾರ. ಕಾಲೇಜಿನ ಪ್ರಾಂಶುಪಾಲರಾದ ವಂ.ಡಾ.ಆಂಟನಿ ಪ್ರಕಾಶ್ ಮೋಂತೆರೋ ಪ್ರೊ.ಪ್ರಶಾಂತ್ ಮಿನೇಜಸ್ ಅವರನ್ನು ಶ್ಲಾಘಿಸಿ,ಅವರ ಸಾಧನೆಗೆ ಅಭಿನಂದಿಸಿದರು.

LEAVE A REPLY

Please enter your comment!
Please enter your name here