





ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆಗಮಿಸಿ ತುಪ್ಪದ ದೀಪ ಬೆಳಗಿಸಿ, ತಿಂಗಳ ಎಳ್ಳೆಣ್ಣೆ ಅಭಷೇಕಕ್ಕೆ ಎಣ್ಣೆ ಸಮರ್ಪಣೆ ಮಾಡಿದರು.


ಈ ಸಂದರ್ಭ ಅವರು ದೇವರ ನಡೆಯಲ್ಲಿ ಪ್ರಾರ್ಥನೆ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರಿಗೆ ಶಲ್ಯ ಹೊದಿಸಿ ಗೌರವಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ ಜೊತೆಗಿದ್ದರು.













