ವಲಯ ಮಟ್ಟದ ಪ್ರತಿಭಾ ಕಾರಂಜಿ : ಸಾಂದೀಪನಿ ವಿದ್ಯಾಸಂಸ್ಥೆ ಕಿರಿಯ ಮತ್ತು ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ನರಿಮೊಗರು ಇದರ ವತಿಯಿಂದ ಸರ್ವೆ ಕಲ್ಪಣೆ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ನರಿಮೊಗರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಾಂದೀಪನಿ ವಿದ್ಯಾಸಂಸ್ಥೆ ನರಿಮೊಗರು ಇಲ್ಲಿನ ಕಿರಿಯ ಮತ್ತು ಹಿರಿಯ ಪ್ರಾಥಮಿಕ ವಿಭಾಗವು ಪ್ರಥಮ ಸಮಗ್ರ ಪ್ರಶಸ್ತಿಯನ್ನು ಗಳಿಸಿಕೊಂಡಿರುತ್ತದೆ.

ಪ್ರಾಥಮಿಕ ಕಿರಿಯ ವಿಭಾಗದಲ್ಲಿ ವಿಜೇತರ ವಿವರ:
ಕನ್ನಡ ಕಂಠ ಪಾಠ -ಗಹನ್ ಜಿ ಪಿ ಗೌಡ – ಪ್ರಥಮ
ಚಿತ್ರಕಲೆ-ಆರ್ಯ ಎನ್ – ಪ್ರಥಮ
ಕಥೆಹೇಳುವುದು -ತೇಜಸ್ವಿ ಭಾರಧ್ವಜ್ – ಪ್ರಥಮ
ಕ್ಲೇ ಮಾಡಲಿಂಗ್ -ಪ್ರದ್ಯುನ್ ಎನ್ – ಪ್ರಥಮ
ಭಕ್ತಿಗೀತೆ -ಸಿಂಧು – ಪ್ರಥಮ
ಇಂಗ್ಲೀಷ್ ಕಂಠಪಾಠ -ಜೀವಿಕಾ ಜೆ ಕೆ -ದ್ವಿತೀಯ
ಧಾರ್ಮಿಕ ಪಠಣ ಸಂಸ್ಕೃತ -ಅಗಸ್ತ್ಯ ಮೋಹನ – ದ್ವಿತೀಯ

ವಿಜೇತರಾದ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳ ವಿವರ:
ಮೌಲ್ಯಾ – ಕನ್ನಡ ಕಂಠಪಾಠ ಪ್ರಥಮ
ಅನುಜ್ಞಾ ಎಂ.ಆರ್ – ಹಿಂದಿ ಕಂಠಪಾಠ ಪ್ರಥಮ
ಶ್ರಿಯಾನ್.ಸಿ.ರೈ – ದೇಶಭಕ್ತಿ ಗೀತೆ ಪ್ರಥಮ
ಅತಿನ್.ಜೆ‌.ರಾವ್ – ಚಿತ್ರಕಲೆ ಪ್ರಥಮ
ಚಿನ್ಮಯಿ ಗೌರಿ – ಕವನ ವಾಚನ ಪ್ರಥಮ
ಗಾನವಿ‌‌ ‌.ಹೆಚ್ – ಸಂಸ್ಕೃತ ಕಂಠಪಾಠ ದ್ವಿತೀಯ
ಧಾತ್ರಿ ಬಿ.ಕೆ – ಅಭಿನಯ ಗೀತೆ ದ್ವಿತೀಯ
ರಿದಾ ಝೈನಾಬ್ – ಧಾರ್ಮಿಕ ಪಠಣ ಅರೇಬಿಕ್ ತೃತೀಯ
ವೈ‌.ಜನನಿ – ಮಿಮಿಕ್ರಿ ತೃತೀಯ
ಅಹಲ್ಯಾ ಬನಾರಿ – ಭಕ್ತಿಗೀತೆ ತೃತೀಯ
ಮಾನ್ವಿ.ಪಿ – ಕಥೆ ಹೇಳುವುದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.


ಇವರಿಗೆ ಶಾಲಾ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಅಭಿನಂದನೆಗಳನ್ನು ತಿಳಿಸಿರುತ್ತಾರೆ ಎಂದು ಮುಖ್ಯ ಗುರು ಪ್ರಸನ್ನ ಕೆ ಶಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here