





ಸವಣೂರು: ದ.ಕ.ಜಿಲ್ಲಾ ಪಂಚಾಯತ್, ಕಡಬ ತಾಲೂಕು ಪಂಚಾಯತ್, ಪುತ್ತೂರು ತಾಲೂಕು ಪಂಚಾಯತ್, ಅಂತರ್ ತಾಲೂಕು ಕ್ರೀಡಾಕೂಟ ಸಂಘಟನಾ ಸಮಿತಿ, ಗ್ರಾಮ ಪಂಚಾಯತ್ ಸವಣೂರು ಇದರ ಆಶ್ರಯದಲ್ಲಿ ಪುತ್ತೂರು ಮತ್ತು ಕಡಬ ತಾಲೂಕಿನ ಗ್ರಾಮ ಪಂಚಾಯತ್ ಸದಸ್ಯರಿಗೆ ಹಾಗು ಸಿಬ್ಬಂದಿಗಳಿಗೆ ಅಂತರ್ ತಾಲೂಕು ಮಟ್ಟದ ಕ್ರೀಡಾಕೂಟವು ‘ಬೊಲ್ಪು 2025-26’ ಎಂಬ ಹೆಸರಿನಲ್ಲಿ ನ.22ರಂದು ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.


ಸವಣೂರು ಜಂಕ್ಷನ್ ನಲ್ಲಿ ಮೆರವಣಿಗೆಗೆ ಚಾಲನೆ ನೀಡಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ,ಅಧಿಕಾರ ವಿಕೇಂದ್ರಿಕರಣದ ನಿಜವಾದ ಅರ್ಥ ಮತ್ತು ಅನುಸಂಧಾನ ಇರುವುದು ಗ್ರಾಮ ಪಂಚಾಯತ್ಗಳಲ್ಲಿ ಯಾಕೆಂದರೆ ಗ್ರಾ.ಪಂ.ನಲ್ಲಿ ಆಡಳಿತ ಪಕ್ಷ ,ಪ್ರತಿ ಪಕ್ಷ ಎಂಬುವುದಿಲ್ಲ.ಅಲ್ಲಿ ಸದಸ್ಯರು ಪಕ್ಷದ ಚಿಹ್ನೆಯಡಿ ಆಯ್ಕೆಯಾಗುವುದಿಲ್ಲ.ಅಲ್ಲಿ ಆಯ್ಕೆಯಾಗುವುದು ಜನತೆಯ ಆಶಯದಂತೆ.ಗ್ರಾ.ಪಂ.ಗೆ ವಿಶೇಷ ಅಧಿಕಾರವಿದ್ದು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಬಿಡುಗಡೆ ಮಾಡುವ ಅನುದಾನವನ್ನು ಅನುಷ್ಟಾನಗೊಳಿಸುವುದು ಗ್ರಾ.ಪಂ.ಗಳು.ಪ್ರಧಾನ ಮಂತ್ರಿಗಳಂತೆ ಸ್ಥಳೀಯವಾಗಿ ಗ್ರಾ.ಪಂ.ಗೆ ಮಹತ್ವವಿದೆ.ಗ್ರಾ.ಪಂ.ಸದಸ್ಯರು ಹಾಗೂ ಆಡಳಿತ ನಿರಂತರವಾಗಿ ಜನಸಂಪರ್ಕ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತದೆ.ಗ್ರಾ.ಪಂ.ಸದಸ್ಯರಿಗೆ ನಿರಂತರವಾಗಿ ಮತದಾರರ ಸಂಪರ್ಕವಿರುವುದರಿಂದ ಅವರಿಗೆ ಒತ್ತಡಗಳೂ ಹೆಚ್ಚು ಇದೆ.ಆ ಒತ್ತಡಗಳ ನಡುವೆಯೂ ಸಮಾಜಮುಖಿ ಚಿಂತನೆಯ ಜತೆಗೆ ಶಾರೀರಿಕವಾಗಿ, ಭೌತಿಕವಾಗಿ ಸದೃಢತೆ ಬೇಕೆಂಬ ನಿಟ್ಟಿನಲ್ಲಿ ಸವಣೂರು ಗ್ರಾ.ಪಂ.ಎರಡು ತಾಲೂಕುಗಳ ಗ್ರಾ.ಪಂ.ಸದಸ್ಯರ,ಸಿಬ್ಬಂದಿಗಳ ಕ್ರೀಡಾಕೂಟ ನಡೆಸಿರುವುದು ಅಭಿನಂದನೀಯ.ಇದು ರಾಜ್ಯದಲ್ಲೇ ಪ್ರಥಮ.ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರ ಮಾರ್ಗದರ್ಶನದಲ್ಲಿ ಉತ್ತಮ ಕಾರ್ಯಕ್ರಮ ಆಯೋಜನೆಯಾಗಿದೆ.ಈ ಮೂಲಕ ಗ್ರಾ.ಪಂ.ಜನಪ್ರತಿನಿಧಿ,ಸಿಬ್ಬಂದಿಗಳಿಗೆ ಸಂಪರ್ಕ ಸಾಧಿಸಲು ಪೂರಕ ವಾತಾವರಣ ಒದಗಿದೆ ಎಂದರು.





ಕಾರ್ಯಕ್ರಮ ಉದ್ಘಾಟಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಈ ಹಿಂದೆ ಕೋಟದಲ್ಲಿ ಶ್ರೀನಿವಾಸ ಪೂಜಾರಿ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಉಡುಪಿ, ದ.ಕ ಜಿಲ್ಲೆಯ ಗ್ರಾ.ಪಂ.ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿಗಳಿಗೆ ಕ್ರೀಡಾಕೂಟ ನಡೆಸುತ್ತಿದ್ದರು.ಅವರೀಗ ಲೋಕ ಸಭಾ ಸದಸ್ಯರಾದ ಬಳಿಕ ಕ್ರೀಡಾ ಕೂಟ ಈ ಬಾರಿ ನಡೆದಿಲ್ಲ.ಆದರೆ ಆ ಕೊರತೆಯನ್ನು ಸವಣೂರು ಗ್ರಾ.ಪಂ.ಆಡಳಿತ ಮಂಡಳಿ ಅಂತರ್ ತಾಲೂಕು ಮಟ್ಟದ ಕ್ರೀಡಾಕೂಟ ನಡೆಸುವ ಮೂಲಕ ನೀಗಿಸಿದೆ.ಗ್ರಾಮ ಪಂಚಾಯತ್ ಸದಸ್ಯ ಗಿರಿಶಂಕರ ಸುಲಾಯ ಅವರು ಎಲ್ಲಾ ಸದಸ್ಯರನ್ನು ಸೇರಿಸಿಕೊಂಡು ಉತ್ತಮವಾಗಿ ಕ್ರೀಡಾಕೂಟ ಸಂಘಟಿಸಿದ್ದಾರೆ.ಒತ್ತಡದಲ್ಲಿ ಕೆಲಸ ನಿರ್ವಹಿಸುವ ಗ್ರಾ.ಪಂ.ಸಿಬ್ಬಂದಿ ಹಾಗೂ ಸದಸ್ಯರಿಗೆ ಈ ಕ್ರೀಡಾಕೂಟ ನವೋಲ್ಲಾಸ ತಂದಿದೆ ಎಂದರು.
ಕ್ರೀಡಾಪಟುಗಳಿಂದ ಧ್ವಜ ವಂದನೆ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ಉತ್ತಮ ಕಾರ್ಯಕ್ರಮ ಆಯೋಜನೆ ಮಾಡಿದ ಸವಣೂರು ಗ್ರಾ.ಪಂ.ಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು. ವಿಧಾನ ಪರಿಷತ್ ಸದಸ್ಯನಾದ ಬಳಿಕ ಹಲವು ಗ್ರಾ.ಪಂ.ಗಳಿಗೆ ಭೇಟಿ ನೀಡುತ್ತಿದ್ದೇನೆ.ಎಲ್ಲೂ ಕೂಡ ರಾಜಕೀಯದ ವಿಚಾರವೇ ಗೋಚರಿಸುವುದಿಲ್ಲ.ಕೇಂದ್ರ, ರಾಜ್ಯ ಸರಕಾರದ ಅನುದಾನಗಳನ್ನು ಗ್ರಾಮೀಣ ಮಟ್ಟದಲ್ಲಿ ಅನುಷ್ಠಾನಗೊಳಿಸುವುದರಲ್ಲಿ ಗ್ರಾ.ಪಂ.ಗಳ ಪಾತ್ರ ಮಹತ್ವದ್ದು.ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಂಜುನಾಥ ಭಂಡಾರಿಯವರು ಗ್ರಾ.ಪಂ.ಗಳ ಸದಸ್ಯರು, ಸಿಬ್ಬಂದಿಗಳಿಗೆ ಕ್ರೀಡಾಕೂಟ ನಡೆಸಿದ್ದಾರೆ.ಸವಣೂರಿನಲ್ಲಿ ನಡೆದ ಕ್ರೀಡಾಕೂಟದಿಂದ ಶಕ್ತಿ ಪಡೆದುಕೊಂಡು ಮುಂದಿನ ದಿನಗಳಲ್ಲಿ ನಾನೂ ಕೂಡ ಇಂತಹ ಕಾರ್ಯಕ್ರಮ ಜೋಡನೆಗೆ ಪ್ರಯತ್ನ ಮಾಡಲಾಗುವುದು ಎಂದರು.ಸವಣೂರಿನಲ್ಲಿ ಆಯೋಜಿಸಿದ ಕ್ರೀಡಾಕೂಟದಲ್ಲಿ ಭಜನೆ,ದಫ್ ,ಚೆಂಡೆ ಮೇಳ ಸೇರಿದಂತೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ಮಾಡಲಾಗಿದೆ ಎಂದರು.
ಧ್ವಜಾರೋಹಣ ನೆರವೇರಿಸಿದ ಪುತ್ತೂರು, ಕಡಬ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೂರು ಸ್ತರಗಳಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡಿದೆ.ಈ ಅಧಿಕಾರ ವಿಕೇಂದ್ರೀಕರಣದ ಶಕ್ತಿ ಏನೆಂಬುದನ್ನು ಸವಣೂರು ಗ್ರಾ.ಪಂ.ಕ್ರೀಡಾಕೂಟ ಆಯೋಜನೆ ಮಾಡುವ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು,ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು,ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ,ಸವಣೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ,ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು,ಚಾರ್ವಾಕ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಗಣೇಶ ಉದನಡ್ಕ,ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ತೀರ್ಥಾನಂದ ದುಗ್ಗಳ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುದರ್ಶನ ನಾಯಕ್ ಕಂಪ,ವಿಜಯ ಬ್ಯಾಂಕ್ ನಿವೃತ್ತ ರೀಜನಲ್ ಮ್ಯಾನೇಜರ್ ಎ.ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ,ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ.ಸವಣೂರು, ಕಡಬ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ,ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರ,ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್ ನಿರ್ದೇಶಕ ಪುತ್ತುಬಾವ ಹಾಜಿ,ತಾ.ಪಂ.ತಾಂತ್ರಿಕ ಸಹಾಯಕ ಮನೋಜ್ ಕುಮಾರ್, ಸವಣೂರು ಪ.ಪೂ.ಕಾಲೇಜಿನ ಪ್ರಾಚಾರ್ಯೆ ಪದ್ಮಾವತಿ ಎನ್.ಪಿ,ಪ್ರೌಢಶಾಲಾ ಮುಖ್ಯಗುರು ರಘು ಬಿ.ಆರ್.,ಕಡಬ ತಾ.ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್,ಪಂಚಾಯತ್ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗೇಶ್ ಎಂ.,ಕಡಬ ತಾ.ಪಂ.ನೌಕರರ ಸಂಘದ ಅಧ್ಯಕ್ಷೆ ಪುಷ್ಪಲತಾ ಗೋಳಿತೊಟ್ಟು,ಪುತ್ತೂರು ತಾ.ಪಂ.ನೌಕರರ ಸಂಘದ ಅಧ್ಯಕ್ಷ ಹೊನ್ನಪ್ಪ ಆರ್ಯಾಪು,ಡೇ ಎನ್.ಆರ್.ಎಲ್.ಎಂ. ಕಾರ್ಯಕ್ರಮ ವ್ಯವಸ್ಥಾಪಕ ಜಗತ್,ಅಲ್ನೂರ್ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಝಕಾರಿಯಾ ಮಾಂತೂರು,ಸವಣೂರು ವರ್ತಕರ ಸಂಘದ ಅಧ್ಯಕ್ಷ ರಫೀಕ್ ಹಾಜಿ ಅರ್ತಿಕೆರೆ,ಶರೀಫ್ ಸಿ.ಎಚ್.,ರಾಜ್ಯ ಯುವ ಸಂಘಗಳ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು,ಬಿಜೆಎಂ ಚಾಪಲ್ಲ ಅಧ್ಯಕ್ಷ ಮಹಮ್ಮದ್ ಹಾಜಿ ಕಣಿಮಜಲು,ಸವಣೂರು ಪ್ರಾ.ಕೃ.ಪ.ಸ.ಸಂಘದ ಸಿಇಓ ಚಂದ್ರಶೇಖರ ಪಿ.,ಸವಣೂರು ಶ್ರೀ ರಾಮ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಜಯ ಈಶ್ವರ ಗೌಡ ಕಾಯರ್ಗ,ನೋಟರಿ ವಕೀಲ ಮಹಾಬಲ ಶೆಟ್ಟಿ ಕೊಮ್ಮಂಡ,ಸವಣೂರು ಹಾ.ಉ.ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ,ಉಪಾಧ್ಯಕ್ಷೆ ಆಶಾ ರೈ ಕಲಾಯಿ,ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ,ಉಪಾಧ್ಯಕ್ಷ ರವಿ ಕುಮಾರ್, ಜಿ.ಪಂ.ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ,ಸವಣೂರು ಸಿಆರ್ಪಿ ಜಯಂತ ವೈ.,ಸವಣೂರು, ಪುಣ್ಚಪ್ಪಾಡಿ ಗ್ರಾಮಾಡಳಿತಾಧಿಕಾರಿ ಬಸವರಾಜು, ಪಾಲ್ತಾಡಿ ಗ್ರಾಮಾಡಳಿತಾಧಿಕಾರಿ ರವಿಚಂದ್ರ ಪಿ.,ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ವಿನಯ ಸುವರ್ಣ, ಸವಣೂರು ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ನಡುಬೈಲು,ಕಡಬ ತಾಲೂಕು ಪ್ರಾ.ಶಾ.ದೈ.ಶಿಕ್ಷಣ ಶಿಕ್ಷಕರ ಸಂಘ ಬಾಲಕೃಷ್ಣ ಕೆ.,ಸವಣೂರು ಪ್ರೌಢಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ರಾಧಾಕೃಷ್ಣ ಓಡಂತರ್ಯ,ಹರೀಶ್ ತೋಟದಡ್ಕ,ಸುಪ್ರಿತ್ ರೈ ಖಂಡಿಗ,ಗಂಗಾಧರ ರೈ ದೇವಸ್ಯ,ಶಿವರಾಮ ಗೌಡ ಮೆದು,ನಾಟಿ ವೈದ್ಯರಾದ ವಾಸುದೇವ ಇಡ್ಯಾಡಿ, ಪದ್ಮಯ್ಯ ಗೌಡ ಪರಣೆ ಮೊದಲಾದವರಿದ್ದರು.
ಹಿರಿಯ ಕ್ರೀಡಾಪಟು ವಸಂತಿ ಶಿವರಾಮ ಗೌಡ ಮೆದು ಕ್ರೀಡಾ ಜ್ಯೋತಿಯನ್ನು ಸವಣೂರು ಬಸದಿಯಿಂದ ಭಜನೆಯೊಂದಿಗೆ ಹೊರಟು ಮುಖ್ಯರಸ್ತೆಯ ಮೂಲಕ ಮೆರವಣಿಗೆಯಲ್ಲಿ ಕ್ರೀಡಾಂಗಣಕ್ಕೆ ತಂದರು.ಸವಣೂರು ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು ಕ್ರೀಡಾಜ್ಯೋತಿ ಸ್ವೀಕರಿಸಿದರು.
ಸವಣೂರು ಗ್ರಾ.ಪಂ.ಲೆಕ್ಕಸಹಾಯಕಿ ಜಯಂತಿ ಕೆ.,ಗ್ರಾ.ಪಂ.ಸದಸ್ಯರಾದ ರಾಜೀವಿ ಶೆಟ್ಟಿ, ತೀರ್ಥರಾಮ ಕೆಡೆಂಜಿ, ಚಂದ್ರಾವತಿ ಸುಣ್ಣಾಜೆ,ಇಂದಿರಾ ಬೇರಿಕೆ,ರಫೀಕ್ ಎಂ.ಎ.,ಚೆನ್ನು ಮುಂಡೋತಡ್ಕ,ಶಬೀನಾ ಅಂಕತಡ್ಕ, ಅಬ್ದುಲ್ ರಝಾಕ್ ಕೆನರಾ,ಬಾಬು ಎನ್.,ಯಶೋಧಾ ನೂಜಾಜೆ,ಶೀನಪ್ಪ ಶೆಟ್ಟಿ ನೆಕ್ರಾಜೆ,ಸತೀಶ್ ಅಂಗಡಿಮೂಲೆ,ಹರಿಕಲಾ ರೈ ಕುಂಜಾಡಿ,ವಿನೋದಾ ರೈ ಚೆನ್ನಾವರ,ಭರತ್ ರೈ ಪಾಲ್ತಾಡಿ, ತಾರಾನಾಥ ಬೊಳಿಯಾಲ, ಚೇತನಾ ಪಾಲ್ತಾಡಿ, ಹರೀಶ್, ಸಿಬ್ಬಂದಿಗಳಾದ ಪ್ರಮೋದ್ ಕುಮಾರ್ ಬಿ.,ದಯಾನಂದ ಮಾಲೆತ್ತಾರು,ಜಯಾ ಕೆ.,ಜಯಶ್ರೀ ಬಿ.,ಯತೀಶ್ ಕುಮಾರ್, ಶಾರದಾ ಎಂ.,ದೀಪಿಕಾ ,ಅನುಷಾ ವಿವಿಧ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಕ್ರೀಡಾಕೂಟದ ಸಂಚಾಲಕ ,ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಪಿಡಿಓ ವಸಂತ ಶೆಟ್ಟಿ ವಂದಿಸಿದರು.ಶಿಕ್ಷಕ ಗಣೇಶ ನಡುವಾಳ್ ನಿರೂಪಿಸಿದರು.
ಕಡಬ ಮತ್ತು ಪುತ್ತೂರು ತಾಲೂಕು ಜೊತೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿಗಳು ಸೇರಿ ಕಡಬದಲ್ಲಿ 420 ಮಂದಿ, ಪುತ್ತೂರು ತಾಲೂಕಿನಲ್ಲಿ 500 ಮಂದಿ ಸ್ಪರ್ಧಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡರು. ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ವಯೋಮಾನದ ಮಿತಿಯಲ್ಲಿ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಗುಂಡೆಸೆತ, ಚಕ್ರ ಎಸೆತ, ಈಟಿ ಎಸೆತ, ಹಗ್ಗಜಗ್ಗಾಟ, ರಿಲೇ ಸ್ಪರ್ಧೆ ನಡೆದು ಸುಮಾರು ಮಂದಿಗೆ 800 ಪದಕ ಮತ್ತು ಪ್ರಶಸ್ತಿ ವಿತರಣೆ ನಡೆಯಿತು.








