ʼಕಣಾದʼ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳು

0

ಪುತ್ತೂರು: ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆ ಇದರ ಕನ್ನಡ ಸಾಂಸ್ಕೃತಿಕ ಸಂಘವು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಕಟಿಸುತ್ತಿರುವ ’ಕಣಾದ’ ವಾರ್ಷಿಕ ವಿಜ್ಞಾನ ಪತ್ರಿಕೆಯ 51ನೇಯ ಸಂಚಿಕೆಗಾಗಿ ಏರ್ಪಡಿಸಿದ ರಾಜ್ಯಮಟ್ಟದ ಕನ್ನಡ ವಿಜ್ಞಾನ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಒಟ್ಟು 15 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ 9 ವಿದ್ಯಾರ್ಥಿಗಳು ಬಹುಮಾನ ವಿಜೇತರಾಗಿದ್ದಾರೆ.

ನ.21ರಂದು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಗಳು,(ಓಂಐ) ಬೆಂಗಳೂರು ಇದರ ಕನ್ನಡ ವಿಜ್ಞಾನ ಪತ್ರಿಕೆ ಕಣಾದ ಮುಖ್ಯ ಸಂಪಾದಕರಾದ ಡಾ|| ಆರ್ ವಿ ಲಕ್ಷ್ಮಿ ನಡೆಸಿಕೊಟ್ಟರು.

ಹಸಿರು ರಸಾಯನಶಾಸ್ತ್ರ ಮತ್ತು ಪರಿಸರ ಅಪಾಯವನ್ನು ತಗ್ಗಿಸುವಲ್ಲಿ ಅದರ ಪಾತ್ರ ಈ ವಿಷಯದಲ್ಲಿ 9ನೇ ತರಗತಿಯಕೆ ಪ್ರಥಮ್ ಭಕ್ತ (ಕೆ ಪ್ರಕಾಶ್ ಭಕ್ತ ಮತ್ತು ಪಲ್ಲವಿ ಪಿ ಭಕ್ತರವರ ಪುತ್ರ), 8ನೇ ತರಗತಿಯತಸ್ಮಿ ಪೂಂಜಾ ಪಿ (ಪಳನೀರು ಸತ್ಯಪ್ರಸಾದ್ ಮತ್ತು ಸವಿತರವರ ಪುತ್ರಿ) ಪ್ರಥಮ ಬಹುಮಾನ ಮತ್ತು 10ನೇ ತರಗತಿಯಅಭಿನ್ ಬಿ.ಎ.(ಚಿಕ್ಕಮುಡ್ನೂರುಆನಂದ ಬಿ.ಡಿ. ಮತ್ತು ಭಾರತಿ ಕೆ ಯವರ ಪುತ್ರ), ದ್ವಿತೀಯ ಬಹುಮಾನ ಹಾಗೂ 9ನೇ ತರಗತಿಯ ದ್ರಿಶಾ ಪಿ (ನರಿಮೊಗರು ಪ್ರಶಾಂತ್ ಎಂ. ಪಿ ಮತ್ತು ತ್ರಿವೇಣಿಯವರ ಪುತ್ರಿ), 8ನೇ ತರಗತಿಯ ಯಕ್ಷಿತ್ (ಕುರಿಯ ಹೊನ್ನಪ್ಪ ನಾಯ್ಕ್ ಮತ್ತು ಗುಲಾಬಿ ಯವರ ಪುತ್ರ)9ನೇ ತರಗತಿಯಆದಿತ್ಯ ಭಂಡಾರ್ಕರ್ (ನೆಲ್ಲಿಕಟ್ಟೆ ಕೆ ಅವಿನಾಶ್ ಭಂಡಾರ್ಕರ್ ಮತ್ತು ಅಕ್ಷತಾ ಭಂಡಾರ್ಕರ್ ದಂಪತಿಗಳ ಪುತ್ರ), ತೃತೀಯ ಬಹುಮಾನ ಪಡೆದಿರುತ್ತಾರೆ. ಆಧುನಿಕಯುದ್ಧ ನೀತಿಯಲ್ಲಿ ಡ್ರೋನ್‌ಗಳ ಬಳಕೆ ಈ ವಿಷಯದಲ್ಲಿ 9ನೇ ತರಗತಿಯ ಸತ್ಯಜಿತ್ ಕೆ (ಮುಂಡೂರಿನ ಪದ್ಮನಾಭ ನಾಯ್ಕ್ ಮತ್ತು ಶೀಲಾವತಿಯವರ ಪುತ್ರ) ಪ್ರಥಮ ಬಹುಮಾನ, 9ನೇ ತರಗತಿಯಧನ್ವಿಎಸ್ (ಪಡ್ನೂರು ಶ್ರೀಧರ ಮತ್ತು ಲೋಲಾಕ್ಷಿ ಪುತ್ರಿ)ದ್ವಿತೀಯ ಬಹುಮಾನ , 9ನೇ ತರಗತಿಯ ಮನುಶ್ರೀ (ಬನ್ನೂರು ನಾಗೇಶ್ ಮತ್ತು ಮಾಲತಿಯವರ ಪುತ್ರಿ) ತೃತೀಯ ಬಹುಮಾನ ಪಡೆದಿರುತ್ತಾರೆ. ಬಹುಮಾನವು ಪ್ರಮಾಣ ಪತ್ರ, ಕಣಾದ ಸಂಚಿಕೆ, ಸ್ಮರಣಿಕೆ ಮತ್ತು ನಗದು ಪುರಸ್ಕಾರಗಳನ್ನೊಳಗೊಂಡಿದೆ.


ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸುವುದರೊಂದಿಗೆ ಈ ಪ್ರಬಂಧಗಳು ಕಣಾದ ವಾರ್ಷಿಕ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here