





ಪುತ್ತೂರು: ಇಂಪ್ಯಾಕ್ಟ್ ಆರ್ಟ್ ಅಂಡ್ ಸ್ಪೋರ್ಟ್ಸ್ ಯೆಸೋಸಿಯೇಷನ್‌ನಿಂದ ಸುಳ್ಯದಲ್ಲಿ ನ.22ರಂದು ನಡೆದ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್‌ಶಿಫ್‌ನಲ್ಲಿ 2025ರ ಸ್ಪರ್ಧೆಯಲ್ಲಿ ಐಕೆಎಂಎ ಪುತ್ತೂರು ಸಂಸ್ಥೆಯ ವಿದ್ಯಾರ್ಥಿನಿಯಾಗಿರುವ ಕು. ದೀಪ್ತ ಡಿ.ಕೆಯವರು ಕಟಾ ಹಾಗೂ ಕುಮಿಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.


ನ.23ರಂದು ಮಂಗಳೂರಿನ ಫಾ. ಮುಲ್ಲರ್ ಒಳಾಂಗಡ ಕ್ರೀಡಾಂಗಣದಲ್ಲಿ ನಡೆದ ಅಸ್ಮಿತ ಖೇಲೋ ಇಂಡಿಯಾ ಕಿಕ್ ಬಾಕ್ಸಿಂಗ್ 2025-26 ರಲ್ಲಿ ಪಾಯಿಂಟ್ ಫೈಟ್ ಫೈಟ್ ಮತ್ತು ಕ್ರಿಯೇಟಿವ್ ಫಾರ್ಮ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರು ಐಕೆಎಂಎ ಪುತ್ತೂರು ಶಾಖೆಯ ತರಬೇತುದಾರ ಶಿವಪ್ರಸಾದ್ ಕೆ ಇವರಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದು ಸ. ಹಿ. ಪ್ರಾ. ಶಾಲೆ, ಹಾರಾಡಿ ಇಲ್ಲಿ 3ನೇ ತರಗತಿ ವಿದ್ಯಾರ್ಥಿನಿ. ಇವರು ಬನ್ನೂರು ಕರ್ಮಲ ನಿವಾಸಿಯಾದ ಪ್ರಾಧ್ಯಾಪಕ ಪ್ರೊ. ದೀಕ್ಷಿತ್ ಕುಮಾರ್ ಹಾಗೂ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕಿ ಪ್ರೇಮಲತಾ ಜಿ ಇವರ ಪುತ್ರಿ.














