





ಪುತ್ತೂರು: ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.25-26ರಂದು ಪಂಚಮಿ,ಚಂಪಾ ಷಷ್ಠಿ ಮಹೋತ್ಸವ ,ಜಾತ್ರೋತ್ಸವ ಕೆಮ್ಮಿಂಜೆ ನಾಗೇಶ ತಂತ್ರಿಗಳ ಹಿರಿತನದಲ್ಲಿ ನಡೆಯಲಿದೆ.



ನ.24ರಂದು ಸಂಜೆ ಪಾಲ್ತಾಡಿ ಉಳ್ಳಾಕುಲು ದೈವಸ್ಥಾನ, ಮಣಿಕ್ಕಾರ ವಿಷ್ಣುಮೂರ್ತಿ ದೇವಸ್ಥಾನ ,ಮುಕ್ಕೂರು ,ಕುಂಡಡ್ಕ ಭಾಗದಿಂದ ಹಾಗೂ ಊರವರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು.ಪಾಲ್ತಾಡಿ ಶ್ರೀ ಧರ್ಮರಸು ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.





ಇಂದು ಶ್ರೀ ದೇವರಿಗೆ ರಂಗಪೂಜೆ,ಶ್ರೀ ದೇವರ ಬಲಿಹೊರಟು ಶ್ರೀ ಭೂತಬಲಿ ಮಹೋತ್ಸವ, ವಸಂತ ಕಟ್ಟೆ ಪೂಜೆ
ನ.25ರಂದು ಬೆಳಿಗ್ಗೆ 9 ರಿಂದ ಭಜನಾ ಕಾರ್ಯಕ್ರಮ,ಬೆಳಿಗ್ಗೆ 9.30ರಿಂದ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ,ನವಕ ಕಲಶಪೂಜೆ,ಆಶ್ಲೇಷ ಬಲಿ,ಶ್ರೀ ಸುಬ್ರಹ್ಮಣ್ಯ ದೇವರಿಗೆ ಪಂಚಾಮೃತ ಅಭಿಷೇಕ,ಪಂಚ ಗವ್ಯಾಭಿಷೇಕ,ನವಕ ಕಲಶಾಭಿಷೇಕ,ದೈವಗಳಿಗೆ ತಂಬಿಲ,ನಾಗದೇವರಿಗೆ ಪಂಚಾಮೃತ ಅಭಿಷೇಕ,ತಂಬಿಲ ಸೇವೆ ನಡೆದು ಮಧ್ಯಾಹ್ನ ಮಹಾಪೂಜೆ,ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 5ರಿಂದ ಅಭಿನವ ಯಕ್ಷಕಲಾ ಕೇಂದ್ರ ಮಾಡಾವು ಇದರ ವಿದ್ಯಾರ್ಥಿಗಳಿಂದ ವಾಸುದೇವ ರೈ ಬೆಳ್ಳಾರೆ ಇವರ ನೇತೃತ್ವದಲ್ಲಿ ವೀರ ಅಭಿಮನ್ಯು ಯಕ್ಷಗಾನ ನಡೆಯಲಿದೆ. ಬಳಿಕ ದೈವಗಳ ಭಂಡಾರ ತೆಗೆದು ಶ್ರೀ ದೇವರಿಗೆ ರಂಗಪೂಜೆ,ಶ್ರೀ ದೇವರ ಬಲಿಹೊರಟು ಶ್ರೀ ಭೂತಬಲಿ ಮಹೋತ್ಸವ, ವಸಂತ ಕಟ್ಟೆ ಪೂಜೆ ನಡೆಯಲಿದೆ.
ರಾತ್ರಿ ಅಮ್ಮ ಕಲಾವಿದರು ಕುಡ್ಲ ಇವರಿಂದ ಆನ್ ಮಗೆ ತುಳು ನಾಟಕ ಪ್ರದರ್ಶನ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.

ನ.26: ದರ್ಶನ ಬಲಿ,ಬಟ್ಟಲು ಕಾಣಿಕೆ,,ವೈಧಿಕ ಮಂತ್ರಾಕ್ಷತೆ ,ದೈವಗಳ ನೇಮೋತ್ಸವ
ನ.26ರಂದು ಬೆಳಿಗ್ಗೆ ಭಜನಾ ಕಾರ್ಯಕ್ರಮ,ಬೆಳಿಗ್ಗೆ 9ರಿಂದ ದೇವರ ಬಲಿ ಹೊರಟು ಚಂಪಾ ಷಷ್ಠೀ ಮಹೋತ್ಸವ,ದರ್ಶನ ಬಲಿ,ಬಟ್ಟಲು ಕಾಣಿಕೆ, ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ,ಮಹಾಪೂಜೆ,ವೈದಿಕ ಮಂತ್ರಾಕ್ಷತೆ,ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ ವ್ಯಾಘ್ರ ಚಾಮುಂಡಿ ನೇಮೋತ್ಸವ ,ರುದ್ರ ಚಾಮುಂಡಿ ನೇಮೋತ್ಸವ ನಡೆಯಲಿದೆ.
ಕಾರ್ಯಕ್ರಮ ಸುದ್ದಿ ಯೂಟ್ಯೂಬ್ ಹಾಗೂ ಫೇಸ್ ಬುಕ್ನಲ್ಲಿ ನೇರಪ್ರಸಾರವಾಗಲಿದೆ.








