





ಪುತ್ತೂರು: ನ.24ರಂದು ಶ್ರೀ ಗಜಾನನ ಹಿರಿಯ ಪ್ರಾಥಮಿ ಕಶಾಲೆ ಪಾಳ್ಯತ್ತಡ್ಕ ಇಲ್ಲಿ ನಡೆದ ಮೇನಾಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಗಜಾನನ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.


ಸುಜನ್ ಕೃಷ್ಣ, ಸಾಹಸ್ ಆರ್ ಏ, ಇಯಾಸ್, ತನುಶ್ರೀ, ಆರಾಧ್ಯ ಎಸ್, ಅಧ್ವೈತ್ ಪ್ರಥಮ ಸ್ಥಾನ ಹಾಗೂ ತನಿತ್ ಬಿ ಎಲ್, ಯಶ್ವಿತ್ ಪೂಜಾ ಲಾತ್ವಿಕ್ಎಸ್,ಆರಾಧ್ಯ ಎಸ್ ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನವನ್ನು ಅನುಶ್ರೀ ಹಾಗೂ ಪ್ರಣಮ್ಯ ಆರ್ ಕೆ ಪಡೆದುಕೊಂಡು ಪ್ರಥಮ ಸ್ಥಾನ ಪಡೆದ ವಿಧ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಅಡಳಿತ ಮಂಡಳಿಯವರು ಹಾಗೂ ಮುಖ್ಯಗುರು ಹಾಗೂ ಶಿಕ್ಷಕವೃಂದದವರು ಅಭಿನಂದನೆ ಸಲ್ಲಿಸಿದರು.














