





200 ವರ್ಷ ಬಾಳಿಕೆ ಬರುವ ಮಹಾಲಿಂಗೇಶ್ವರನ ಫೋಟೋ, ಮತ್ತಿತರ ಬೆಳ್ಳಿ ಫೋಟೋಗಳು ಲಭ್ಯ


ಪುತ್ತೂರು: ಎಂಟಿ ರಸ್ತೆಯಲ್ಲಿರುವ ಚೇತನ ಆಸ್ಪತ್ರೆ ಬಳಿ ಇರುವ ನಾಯಕ್ ಕಾಂಪ್ಲೆಕ್ಸ್ ನಲ್ಲಿ ನ.26ರಂದು ಶ್ರೀ ಸಾಯಿ ಮಹಾದೇವ್ ಗಿಫ್ಟ್ & ಫೋಟೋ ಫ್ರೇಮ್ ಮಳಿಗೆ ಶುಭಾರಂಭಗೊಂಡಿತು.






ಔಟ್ ಲೆಟ್ ಉದ್ಘಾಟಿಸಿ ಮಾತನಾಡಿದ ಜಿಎಲ್ ಆಚಾರ್ಯ ಜ್ಯವೆಲ್ಲರ್ಸ್ ಮಾಲಕ ಬಲರಾಮ ಆಚಾರ್ಯ, ಅನೇಕ ವರ್ಷಗಳಿಂದ ಈ ಉದ್ಯಮದಲ್ಲಿ ಮಾಲಕರು ತೊಡಗಿಕೊಂಡಿದ್ದಾರೆ. ನಂಜನಗೂಡಿನಿಂದ ಪುತ್ತೂರಿಗೆ ಆಗಮಿಸಿ ಯಶಸ್ಸು ಕಂಡಿದ್ದಾರೆ. ಈ ಉದ್ಯಮವೂ ಉತ್ತರೋತ್ತರ ಅಭಿವೃದ್ಧಿಯಾಗಲಿ. ಇನ್ನೂ ಅನೇಕ ಶಾಖೆಗಳನ್ನು ತೆರೆಯುವಂತಾಗಲಿ ಎಂದು ಶುಭಹಾರೈಸಿದರು. ಪುತ್ತೂರು ವರ್ತಕರ ಸಂಘದ ಅಧ್ಯಕ್ಷ ರವಿಕೃಷ್ಣ ಡಿ. ಮಾತನಾಡಿ, ಮಾಲಕರು ಪುತ್ತೂರಿಗೆ ಚಿರಪರಿಚಿತರು. ಮಹಾಲಿಂಗೇಶ್ವರನ ಮಣ್ಣಿನಲ್ಲಿ ಪ್ರಾರಂಭಿಸಿದ ಈ ಉದ್ಯಮವು ಯಶಸ್ಸು ಕಾಣಲಿ ಎಂದು ಶುಭಹಾರೈಸಿದರು.
ಮಾಲಕ ಮಹಾದೇವ ಸ್ವಾಮಿ ಮಾತನಾಡಿ, 15 ವರ್ಷಗಳಿಂದ ಈ ಉದ್ಯಮದ ಮಾರ್ಕೆಂಟಿಗ್ ನಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ, ಹೈದರಾಬಾದ್, ವಿಶಾಖಪಟ್ಟಣಕ್ಕೆ ಪುತ್ತೂರಿನಿಂದಲೇ ಬೆಳ್ಳಿ ಐಟಂಗಳನ್ನು ಪೂರೈಕೆ ಮಾಡುತ್ತಿದ್ದು, ಇದೀಗ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಚೇತನ ಆಸ್ಪತ್ರೆ ಬಳಿ ಔಟ್ ಲೆಟ್ ಪ್ರಾರಂಭಿಸಿ ಹೊಸ ಕನಸಿನ ಯಶಸ್ಸಿನ ಹಾದಿಯನ್ನು ನೋಡುತ್ತಿದ್ದೇನೆ ಎಂದರು.
ಗಡಿ ಯಜಮಾನ ಸಂಪತ್ ಕುಮಾರ್, ಮುಖಂಡ ಕಿಟ್ಟಸ್ವಾಮಿ, ಮೈತ್ರಿ ಎಲೆಕ್ಟ್ರಿಕಲ್ಸ್ ನ ರವಿನಾರಾಯಣ, ಕಟ್ಟಡ ಮಾಲಕ ಶೈಲೇಶ್ ನಾಯಕ್, ಬಾಲಕೃಷ್ಣ, ರವಿ ಪ್ರಾವಿಷನ್ ಸ್ಟೋರ್ ನ ರವಿ, ಕಮಲಮ್ಮ, ಕಲಾವತಿ, ಶಿಲ್ಪ ಸಂಪತ್, ಆಶ ಮಹಾದೇವ, ಲಕ್ಷ್ಮೀ ಕೃಷ್ಣ ಶೆಟ್ಟಿ ಮತ್ತಿತರ ಗಣ್ಯರು ಆಗಮಿಸಿ ಶುಭಹಾರೈಸಿದರು. ಮಾಲಕ ಮಹಾದೇವಸ್ವಾಮಿ ಅವರ ಪತ್ನಿ ಆಶಾ, ಪುತ್ರಿ ಭಾಗ್ಯಲಕ್ಷ್ಮೀ, ಪುತ್ರ ಹರಿಕೃಷ್ಣ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.
200 ವರ್ಷ ಬಾಳಿಕೆಯ ಫೋಟೋ
ಶುದ್ಧ ಬೆಳ್ಳಿಯಿಂದ ತಯಾರಿಸಿದ ಫೋಟೋ ಫ್ರೇಮ್ ಗಳು ಮಾತ್ರವಲ್ಲದೆ, ಚಿನ್ನದ ನೀರಿನಿಂದ ಎಲ್ಲಾ ರೀತಿಯ ಫೋಟೋಗಳನ್ನು ಮಾಡಿಕೊಡಲಾಗುತ್ತದೆ. ಚಿನ್ನದ ನೀರಿನಿಂದ ಹಾಗೂ ಕೈಯಿಂದಲೇ ತಯಾರಿಸುವ ಫೋಟೋ ಫ್ರೇಮ್ ಇದಾಗಿದ್ದು, ಇದನ್ನು ತಂಜಾವೂರು ಆರ್ಟ್ ಫೋಟೋ ಫ್ರೇಮ್ಸ್ ಎಂದು ಕರೆಯುತ್ತಾರೆ. ಭಾರಿ ಬೇಡಿಕೆ ಇರುವ ಈ ಫೋಟೋ ಫ್ರೇಮ್, 200 ವರ್ಷ ಬಾಳಿಕೆ ಬರುತ್ತದೆ. ಚಿನ್ನದ ನೀರಿನಿಂದ ಸಿದ್ಧಪಡಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಮತ್ತು ಇನ್ನಿತರ ದೇವರ ಫೋಟೋಗಳು ಕೂಡ ಇಲ್ಲಿ ಗ್ರಾಹಕರಿಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 9902512811 ಸಂಪರ್ಕಿಸುವಂತೆ ಮಾಲಕರು ತಿಳಿಸಿದ್ದಾರೆ.








