





ಅಧ್ಯಕ್ಷರಾಗಿ ಪ್ರಶಾಂತ್ ಡಿಕೋಸ್ತ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುರ್ರಹ್ಮಾನ್ ಯುನಿಕ್


ಉಪ್ಪಿನಂಗಡಿ: ಇಲ್ಲಿನ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ 2025-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಡಿಕೋಸ್ತ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಯುನಿಕ್ ಅವಿರೋಧವಾಗಿ ಆಯ್ಕೆಯಾದರು.





ಸಂಘದ ಮಹಾಸಭೆಯು ಉಪ್ಪಿನಂಗಡಿ ರೋಟರಿ ಭವನದಲ್ಲಿ ಅಧ್ಯಕ್ಷ ಪ್ರಶಾಂತ್ ಡಿಕೋಸ್ತಾರವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರಗಿತು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯೂನಿಕ್ ವರದಿ ಮಂಡಸಿ, ಕೋಶಾಧಿಕಾರಿ ಲೋಕೇಶ್ ಆಚಾರ್ಯ ಲೆಕ್ಕಪತ್ರ ಮಂಡಿಸಿದರು.
ಈ ವೇಳೆ ನೂತನ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸಲಾಯಿತು. ಚುನಾವಣಾಧಿಕಾರಿಯಾಗಿ ಯು.ಜಿ. ರಾಧಾ ಮತ್ತು ಅಶ್ರಫ್ ಅಗ್ನಾಡಿ ಕಾರ್ಯನಿರ್ವಹಿಸಿದರು. ಚುನಾವಣೆಯ ವೇಳೆ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾದಿಯಾಗಿ ಎಲ್ಲಾ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು. ಅದರಂತೆ ಉಪಾಧ್ಯಕ್ಷರಾಗಿ ಶಬೀರ್ ಕೆಂಪಿ, ಜೊತೆ ಕಾರ್ಯದರ್ಶಿಗಳಾಗಿ ಕೈಲಾರ್ ರಾಜಗೋಪಾಲ ಭಟ್ ಮತ್ತು ನಿತ್ಯಾನಂದ ಕಿಣಿ, ಕೋಶಾಧಿಕಾರಿಯಾಗಿ ಲೋಕೇಶ್ ಆಚಾರ್ಯ ಆಯ್ಕೆಗೊಂಡರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಲೀಲ್ ಮುಕ್ರಿ, ಝಕಾರಿಯ ಕೊಡಿಪ್ಪಾಡಿ, ಮೊಹಮ್ಮದ್ ಮುಸ್ತಾಫ , ಇರ್ಷಾದ್ ಯು.ಟಿ., ತೌಷಿಫ್ ಯು.ಟಿ., ಅನುಷ್ ಯು., ಮನ್ಸೂರ್ ಕುದ್ಲೂರ್, ಪ್ರಕಾಶ್ ಅಶ್ವಿನಿ ಟ್ರೇಡಸ್ , ವಸಂತ ಗುಂಡಿಜೆ, ನವೀನ್ , ಅಬ್ದುಲ್ ಹಮೀದ್ ಮಠ, ಜಾಫರ್ ಜೋಗಿಬೆಟ್ಟು ಆಯ್ಕೆಗೊಂಡರು. ವಿಶೇಷ ಆಹ್ವಾನಿತರಾಗಿ ಮಾಜಿ ಅಧ್ಯಕ್ಷರುಗಳಾದ ಯು.ಜಿ. ರಾಧಾ, ಹಾರೂನ್ ರಶೀದ್ ಅಗ್ನಾಡಿ, ಕೆ. ಜಗದೀಶ್ ಶೆಟ್ಟಿ, ಜಯಂತ ಪೊರೋಳಿ, ಕಿಶೋರ್ ಅಧಿಕಾರಿಯವರನ್ನು ಆಯ್ಕೆ ಮಾಡಲಾಯಿತು.
ಸಂಘದ ಕಾನೂನು ಸಲಹೆಗಾರರಾಗಿ ಅಶ್ರಫ್ ಕೆ. ಅಗ್ನಾಡಿ, ಮಾಧ್ಯಮ ಸಲಹೆಗಾರಾಗಿ ಉದಯ್ ಕುಮಾರ್ ಯು.ಎಲ್., ಸಾಮಾಜಿಕ ಜಾಲತಾಣದ ನಿರ್ವಹಣಗಾರರಾಗಿ ಇರ್ಷಾದ್ ಯು.ಟಿ. ಆಯ್ಕೆಗೊಂಡರು.
ಸಭೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಬಾರ್ ಡೋನರ್ಸ್ ಸಂಘಟನೆಯ ಶಬೀರ್ ಕೆಂಪಿ, ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಉದಯ ಕುಮಾರ್ ಯು.ಎಲ್., ಅನುಪಮ ಸೇವೆಗಾಗಿ ಮೆಸ್ಕಾಂ ಉದ್ಯೋಗಿ ಭೀಮಣ್ಣ , ಹಿರಿಯ ವರ್ತಕರಾದ ಕರಾಯ ರಾಮಚಂದ್ರ ನಾಯಕ್, ಶುಕ್ರಿಯ ಅಬ್ದುಲ್ ರಹಿಮಾನ್ , ಜಪಾನಿನಲ್ಲಿ ನಡೆದ ಸಕುರಾ ವಿಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿದ ಉಪ್ಪಿನಂಗಡಿಯ ವಿದ್ಯಾರ್ಥಿ ಅಬ್ದುಲ್ ಬಾಶಿತ್, ರಾಜ್ಯ ಮಟ್ಟದ ಎತ್ತರ ಜಿಗಿತ ಸ್ಪರ್ಧಿ ಅಹಸನ್ ವದೂದ್‌ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಕೃಷ್ಣವೇಣಿ, ಉದ್ಯಮಿಗಳಾದ ಸುರೇಶ್ ಕೆ., ಪೂವಪ್ಪ ಗೌಡ , ಪೈಝಲ್ ಬದ್ರಿಯಾ, ಅಬ್ದುಲ್ ಹಮೀದ್, ಖಾದರ್ ಎಂ.ಜಿ., ರೂಪೇಶ್ ರೈ ಅಲಿಮಾರ್ , ಆನಂದ ಗೌಡ ರಾಮಕುಂಜ, ಮಹಮ್ಮದ್ ದಿಲ್‌ದಾರ್, ಇಬ್ರಾಹಿಂ ಆಚಿಕೆಂಪಿ, ಜಮಾಲ್ ಕೆಂಪಿ ಮೊದಲಾದವರು ಭಾಗವಹಿಸಿದ್ದರು. ಝಕಾರಿಯ ಕೊಡಿಪ್ಪಾಡಿ ಕಾರ್ಯಕ್ರಮ ನಿರೂಫಿಸಿದರು.









