




ಕಾವು:ಬುಶ್ರಾ ಆಂಗ್ಲ ಮಾಧ್ಯಮ ಶಾಲೆ, ಕಾವು ಇವರ ವಾರ್ಷಿಕ ಕ್ರೀಡಾಕೂಟವು ಡಿ.9 ನಡೆಯಿತು.



ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಶಾಲೆಯ ಸಂಸ್ಥಾಪಕರಾದ ಜನಾಬ್ ಅಬ್ದುಲ್ ಅಜೀಜ್ ನೆರವೇರಿಸುವ ಮೂಲಕ ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೊಯಿಂಗಾಜೆ ಕ್ರೀಡಾ ಜ್ಯೋತಿ ಬೆಳಗಿಸುವುದರ ಮತ್ತು ಪಾರಿವಾಳವನ್ನು ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿಲಾಯಿತು. ನಂತರ ವಿದ್ಯಾರ್ಥಿಗಳು ಗ್ರೀನ್, ಯೆಲ್ಲೋ, ರೆಡ್ ಮತ್ತು ಬ್ಲೂ ತಂಡಗಳಲ್ಲಿ ಮಾರ್ಚ್ ಪಾಸ್ಟ್ ಮತ್ತು ಪಥಸಂಚಲನದಲ್ಲಿ ಭಾಗವಹಿಸಿ ಶಿಸ್ತು ಮತ್ತು ಸಂಘಟನೆಯ ಪ್ರದರ್ಶನ ನಡೆಯಿತು.





ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇದರ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೊಯಿಂಗಾಜೆ ಮಾತನಾಡಿ ಕ್ರೀಡೆ ಮಕ್ಕಳಲ್ಲಿ ಶಿಸ್ತು, ಸಹಕಾರ, ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ಪಾಠದ ಜೊತೆಗೆ ಕ್ರೀಡೆಗೂ ಸಮಾನ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು. ಉದ್ಯೋಗ ಪಡೆಯುವುದು ಮಾತ್ರ ಜೀವನದ ಗುರಿ ಅಲ್ಲ ಇತರರಿಗೆ ಉದ್ಯೋಗ ಕೊಡಿಸುವ ಸಾಮರ್ಥ್ಯ ಹೊಂದಿದ ವ್ಯಕ್ತಿಯೇ ನಿಜವಾದ ಯಶಸ್ವಿ ಎಂದು ಪ್ರೇರಣಾದಾಯಕ ಸಂದೇಶ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಕ–ರಕ್ಷಕ ಸಂಘದ ಅಧ್ಯಕ್ಷರಾದ ಹೀರಾ ಅಬ್ದುಲ್ ಖಾದರ್ ಹಾಜಿ, ಉಪಾಧ್ಯಕ್ಷರುಗಳಾದ ಅಕ್ಷತಾ ಚಂದ್ರಶೇಖರ ಬಲ್ಯಾಯ, ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿಗಳಾದ ಬಶೀರ್ ಕೌಡಿಚ್ಚಾರ್ ಮತ್ತು ಕೆ ಕೆ ಇಬ್ರಾಹಿಂ, ಸದಸ್ಯರಾದ ರವಿರಾಜ್ ಬೋರ್ಕರ್, ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಬದ್ರುದ್ದೀನ್ ಹಾಗೂ ನೂರುದ್ದೀನ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ದೀಪಿಕಾ ಚಾಕೋಟೆ ಕಾರ್ಯಕ್ರಮವನ್ನು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ತ್ರಿವೇಣಿ ಕುಲಾಲ್ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಶೈಕ್ಷಣಿಕ ಸಲಹೆಗಾರ ಕೃಷ್ಣಪ್ರಸಾದ್ ವಂದಿಸಿದರು .ಕಾರ್ಯಕ್ರಮದ ನಿರೂಪಣೆಯನ್ನು ಹೇಮಲತಾ ಕಜೆಗದ್ದೆ ನಿರ್ವಹಿಸಿದರು









