






ಬಡಗನ್ನೂರು: ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ಶಾಲೆಗಳಾದ ಶ್ರೀ ಬಾಲಸುಬ್ರಹ್ಮಣ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ವೋದಯ ಪ್ರೌಢಶಾಲೆ ಇದರ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ವಿವಿಧ ಕೊಡುಗೆಗಳ ಲೋಕಾರ್ಪಣೆ, ಸಾಧಕರಿಗೆ ಸನ್ಮಾನ ಸಮಾರಂಭ, ಸರ್ವೋದಯ ಹೆಜ್ಜೆ ಗೆಜ್ಜೆ ನಾದ ಡಿ.20ರಂದು ಸರ್ವೋದಯ ವಿದ್ಯಾಸಂಸ್ಥೆಗಳ ಸಭಾ ಭವನದಲ್ಲಿ ನಡೆಯಲಿದೆ.


ಬೆಳಿಗ್ಗೆ ವಿವಿಧ ಕೊಡುಗೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಸರ್ವೋದಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್ ಡಿ ಶಿವರಾಮ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕೊಡುಗೆಗಳಾದ ಸ್ಟೀಲ್ ಟೇಬಲ್ ಮತ್ತು ಬೆಂಚ್ ಮತ್ತು ಟೇಬಲ್ ನ ಲೋಕಾರ್ಪಣೆಯನ್ನು ಪ್ರಗತಿಪರ ಕೃಷಿಕ ಜಯಂತ್ ರೈ ಕುದ್ಕಾಡಿ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಕುತ್ಯಾಳ ಚೈತನ್ಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ರಘುನಾಥ ರೈ ಕೆ., ಸರ್ವೆ S.G.M ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಎಚ್.ಬಿ, ಬಡಗನ್ನೂರು ದ.ಕ.ಜಿ.ಪ.ಪ್ರಾ. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ, ಪಾಪೆಮಜಲು ಹಾ.ಉ.ಸಹಕಾರಿ ಸಂಘದ ಅಧ್ಯಕ್ಷರಾದ ವಿನಯ್ ಕುಮಾರ್ ಕಜಮೂಲೆ, ಸುಳ್ಯಪದವು ರಿಫಾಯಿಯ್ಯಾ ಮಸೀದಿ ಕಮಿಟಿಯ ಅಧ್ಯಕ್ಷ ಆಲಿ ಹಾಜಿ ಕೆ.ಸಿ, ಬೆಂಗಳೂರು HEL ಉದ್ಯೋಗಿ ಚೇತನ್ ಎಮ್ ಭಾಗವಹಿಸಲಿದ್ದಾರೆ.



ಸಂಜೆ ಗಂಟೆ 5.30ರಿಂದ ಅಂಗನವಾಡಿ L.K.ಗ್ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸರ್ವೋದಯ ಹೆಜ್ಜೆ ಗೆಜ್ಜೆ ನಾದ, ರಾತ್ರಿ ಗಂಟೆ 8ರಿಂದ ಸರ್ವೋದಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್ ಡಿ ಶಿವರಾಮ್ ಅಧ್ಯಕ್ಷತೆಯಲ್ಲಿ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ, ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಗಣೇಶ ಪ್ರಸಾದ್, ವಾಯಪಡೆಯ ಶಬರೀಶ ಬೋಳಂಕೂಡ್ಲು, 2024-25ನೇ SSLC ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯನ್ನು ಪಡೆದ ವಿದ್ಯಾರ್ಥಿಗಳು,ರಾಷ್ಟ್ರ ಮತ್ತು ರಾಜ್ಯ ಮಟ್ಟದ ಶಾಲಾ ಕ್ರೀಡಾ ಸಾಧಕರು 2025, ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ಹಿರಿಯ ವಿದ್ಯಾರ್ಥಿಗಳು,ಸಂಸ್ಥೆಗೆ ವಿವಿಧ ಕೊಡುಗೆಗಳನ್ನು ನೀಡಿದ ಸಾಧಕರನ್ನು ಅಭಿನಂದಿಸಲಿದೆ.
ಅತಿಥಿಗಳಾಗಿ ಉಜಿರೆ ಎಸ್ ಡಿ ಎಂ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ಬಾಲಭಾಸ್ಕರ ಕೆ. INT ಯ ನಿವೃತ್ತ ಜನರಲ್ ಮ್ಯಾನೇಜರ್ ಸುಬ್ರಹ್ಮಣ್ಯ ಭಟ್ ಕುಳೂರು, ಮಂಗಳೂರು ಪೊಲೀಸ್ ಇಲಾಖೆ ಅಸಿಸ್ಟಂಟ್ ಸಬ್ ಇನ್ಸ್ ಪೆಕ್ಟರ್ ರಾದ ಚಂದ್ರಶೇಖರ ಎನ್.ಎ,ಕಾರ್ಕಳ ಕ್ರಿಯೇಟಿವ್ಸ್ ಪದವಿ ಪೂರ್ವ ಕಾಲೇಜಿನ ಮುಖ್ಯಸ್ಥರು, ಉಪನ್ಯಾಸರಾದ ಲೋಹಿತ್ ಎಸ್.ಜಿ ಮುಖ್ಯಸ್ಥರು ಭಾಗವಹಿಸಲಿದ್ದಾರೆ.









