






ಪುತ್ತೂರು: ನಾನೊಬ್ಬ ಹೀರೋ ಹೋಂಡಾ ಕಂಪನಿಯ ಪ್ಯಾಶನ್ ಪ್ರೊ ದ್ವಿಚಕ್ರ ವಾಹನ, ಈಗ ನಾನು ಉಪ್ಪಿನಂಗಡಿ ಸಮೀಪದ ಆದರ್ಶನಗರ ಎಂ.ಆರ್.ಪಿ.ಎಲ್ ಪೆಟ್ರೋಲ್ ಪಂಪಿನ ಎದುರು ಭಾಗದಲ್ಲಿರುವ ಮಾವಿನ ಮರದ ಅಡಿಯಲ್ಲಿ ಅನಾಥವಾಗಿ ನಿಂತಿದ್ದೇನೆ. ನನ್ನನ್ನು ಕೆಲವು ವರ್ಷಗಳಿಂದ ಸಾಕಿ ಸಲಹಿದ ನನ್ನ ಮಾಲಕನ ಬಗ್ಗೆ ನನಗೆ ಅರಿವಿಲ್ಲ, ಯಾಕೆಂದರೆ ನನಗೆ ಮೆದುಳಿಲ್ಲ, ನನ್ನ ಜೀವಿತಾವಧಿಯಲ್ಲಿ ನನ್ನ ಮಾಲಕನಿಗಾಗಿ ಹಲವಾರು ವರ್ಷ ದುಡಿದು, ಅವನ ಸಂಸಾರದ ಭಾರವನ್ನೂ ಹೊತ್ತಿದ್ದೇನೆ. ಇದೀಗ ನನ್ನ ಪರಿಚಯ ಯಾರಿಗೂ ಸಿಗಬಾರದು ಅಂತ ನನ್ನ ಹಣೆ ಪಟ್ಟಿಯನ್ನು ( ನಂಬರ್ ಪ್ಲೇಟ್) ಕಿತ್ತು ಹಾಕಿದ್ದಾರೆ.. ಅಲ್ಲದೆ ನನ್ನ ಕಣ್ಣನ್ನು (ಹೆಡ್ ಲೈಟ್) ಕಿತ್ತು ಹಾಕಲಾಗಿದೆ.


ಅಲ್ಲದೆ ಈ ವರ್ಷದ ವಿಪರೀತ ಚಳಿಗೆ ಹಗಲು ಇರುಳು ಎನ್ನದೆ ಕಳೆದ 05 ದಿನಗಳಿಂದ ಮಾವಿನ ಮರದ ಅಡಿಯಲ್ಲಿ ಅನಾಥವಾಗಿ ನಿಂತಿದ್ದೇನೆ. ನಿಮ್ಮೆಲ್ಲರಲ್ಲಿ ನನ್ನದೊಂದು ವಿನಂತಿ ನನ್ನ ಮಾಲಕನ ಪರಿಚಯ ಇದ್ದವರು ಯಾರಾದರೂ ಇದ್ದಲ್ಲಿ ನನ್ನ ಈಗಿನ ಪರಿಸ್ಥಿತಿಯನ್ನು ಅವರಿಗೆ ಮನವರಿಕೆ ಮಾಡಿ, ನನಗೊಂದು ಉತ್ತಮ ಜೀವನ ದೊರಕಿಸಿಕೊಟ್ಟು ಪುಣ್ಯ ಕಟ್ಟಿಕೊಳ್ಳಿ…. ಇತೀ ಪ್ಯಾಶನ್ ಪ್ರೋ













