






ಕಾಣಿಯೂರು: ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಇದರ ನಿರ್ದೇಶನದಂತೆ ಪಳ್ಳತ್ತಾರು ತಕ್ವಿಯತುಲ್ ಇಸ್ಲಾಂ ಮದ್ರಸದಲ್ಲಿ ಏಕದಿನ ವಿದ್ಯಾರ್ಥಿ ಸಂಗಮ ಡಿ.25ರಂದು ನಡೆಯಿತು.
ಪಳ್ಳತ್ತಾರು ಮಸೀದಿಯ ಅಧ್ಯಕ್ಷರಾದ ಉಪ್ಪುಂಞಿ ಹಾಜಿ ಧ್ವಜಾರೋಹಣ ನೆರವೇರಿಸಿದರು. ಮಸೀದಿಯ ಗೌರವಾಧ್ಯಕ್ಷ ಸಯ್ಯದ್ ಮದನಿ ತಂಙಳ್ ದುಆ ನೆರವೇರಿಸಿ ಖತೀಬ್ ಉಸ್ತಾದ್ ಶರೀಫ್ ಸಖಾಫಿ ಉದ್ಘಾಟಿಸಿದರು. ಬಳಿಕ ಫಿಝಿಕಲ್ ಎಕ್ಸಸೈಝ್, ನಮಾಝ್ ಹಾಗೂ ಅಂಗಶುಧ್ಧಿಯ ಪ್ರಾಕ್ಟಿಕಲ್ ತರಬೇತಿ, ಆಟೋಟ ಸ್ಪರ್ಧೆ, ಸೆಮಿನಾರ್, ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಎಸ್ ಬಿ ಎಸ್ ಐಡಿ ವಿತರಣೆ ನಡೆಯಿತು. ಅಧ್ಯಾಪಕರಾದ ನಾಸಿರ್ ಸಅದಿ ಸ್ವಾಗತಿಸಿ, ಬಶೀರ್ ಸಅದಿ ವಂದಿಸಿದರು.













