







ಸುಸಂಸ್ಕೃತರನ್ನು ರೂಪಿಸುವಲ್ಲಿ ಮಹಿಳೆಯರ ಪಾತ್ರ ಮಹತ್ತರ: ಹರಿಣಿ ಪುತ್ತೂರಾಯ


ಉಪ್ಪಿನಂಗಡಿ: ಸುಸಂಸ್ಕೃತನಾದ ಮಗು ದೇಶಕ್ಕೆ ಸಂಪತ್ತಾಗಿ ರೂಪುಗೊಳ್ಳುವುದರಿಂದ , ಇಂತಹ ಮಕ್ಕಳನ್ನು ರೂಪಿಸುವಲ್ಲಿ ಅಮ್ಮಂದಿರ ಪಾತ್ರ ಮಹತ್ತರವಾಗಿದೆ. ಸಪ್ತ ಶಕ್ತಿಗಳನ್ನು ಹೊಂದಿರುವ ಮಾತೆಯರು ರಾಷ್ಟ್ರ್ರ ನಿರ್ಮಾಣ ಕಾರ್ಯದತ್ತ ಕರ್ತವ್ಯ ಬದ್ದತೆಯನ್ನು ತೋರಬೇಕು ಎಂದು ಪ್ರಾದ್ಯಾಪಕಿ ಹರಿಣಿ ಪುತ್ತೂರಾಯ ತಿಳಿಸಿದರು.



ಅವರು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ಆಯೋಜಿಸಲಾದ ಮಾತೃ ಭೋಜನಾ- ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವ ಸಾಮಾಜಿಕ ಚಿಂತಕ ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ ಮಾತನಾಡಿ, ಲೋಕಹಿತಂ ಮಮಕರಣೀಯಂ ಎನ್ನುವ ನಾವು ನಮ್ಮೊಳಗಿನ ಲೋಪದೋಷಗಳನ್ನು ನಿವಾರಿಸುವ ನಿಟ್ಟಿನಲ್ಲಿ ಒಗ್ಗೂಡಿ ಚಿಂತಿಸುವ ಇಂತಹ ಕಾರ್ಯಕ್ರಮಗಳು ಪ್ರೇರಣಾದಾಯಿಯಾಗಿದೆ ಎಂದರು.
ಮಹಿಳಾ ಉದ್ಯಮಿ ಶೋಭಾ ಗಣೇಶ್ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿಶು ಮಂದಿರದ ಗೌರವಾಧ್ಯಕ್ಷ ಯು ರಾಮ , ಅಧ್ಯಕ್ಷ ಮನೋಜ್ ಶೆಟ್ಟಿ, ಮಾತೃ ಮಂಡಳಿ ಅಧ್ಯಕ್ಷೆ ಸುಜಾತ ಕೃಷ್ಣ ಆಚಾರ್ಯ, ಪೋಷಕ ಮಂಡಳಿಯ ಅಧ್ಯಕ್ಷೆ ದಿವ್ಯ ಸುಧೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಮಚಂದ್ರ ಮಣಿಯಾಣಿ, ರಾಧಾ ಮೋನಪ್ಪ, ವೀಣಾ ವೆಂಕಪ್ಪ ಗೌಡ, ಯತೀಶ್ ಆಚಾರ್ಯ, ಕೆ ಸುಧಾಕರ ಶೆಟ್ಟಿ, ಶರತ್ ಕೋಟೆ, ಹೇರಂಭ ಶಾಸ್ತ್ರಿ, ಶಶಿಧರ ಶೆಟ್ಟಿ, ಲೋಕೇಶ್ ಆಚಾರ್ಯ, ಮನೋಜ್ ದುರ್ಗಾಗಿರಿ, ಗೋಪಾಲಕೃಷ್ಣ , ಲೋಕೇಶ್ ಬೆತ್ತೋಡಿ, ಕೈಲಾರ್ ರಾಜಗೋಪಾಲ ಭಟ್, ಅಶೋಕ್ ಕುಮಾರ್ ರೈ , ಸುಬ್ರಹ್ಮಣ್ಯ ಶೆಣೈ, ಹರಿರಾಮಚಂದ್ರ, ಕಂಗ್ವೆ ವಿಶ್ವನಾಥ ಶೆಟ್ಟಿ, ಕರಾಯ ರಾಘವೇಂದ್ರ ನಾಯಕ್, ಮಹೇಶ್ ಬಜತ್ತೂರು, ಯು ರಾಜೇಶ್ ಪೈ, ಮಂಜುನಾಥ್ ಕಂಗಿನಾರು ಬೆಟ್ಟು, ಯು ಕೆ ರೋಹಿತಾಕ್ಷ, ಜಯಶ್ರೀ ಜನಾರ್ಧನ್ , ವಿನಯಾ ರಾಜಾರಾಮ್ , ಪುಷ್ಪಲತಾ ಜನಾರ್ಧನ್ , ಶಶಿಕಲಾ ಭಾಸ್ಕರ್, ಯತೀಶ್ ಶೆಟ್ಟಿ, ಉಷಾ ಮುಳಿಯ, ಶೋಭಾ ದಯಾನಂದ, ಬಾಲಚಂದ್ರ ಶೆಟ್ಟಿ, ಅಕ್ಷಯ್ ಕುಮಾರ್, ರವಿಕುಮಾರ್, ಕಿರಣ್ ಹರಿನಗರ, ಗಾಯತ್ರಿ, ಭಾಗ್ಯಜ್ಯೋತಿ ತಿಮ್ಮಪ್ಪ, ವಾರಿಜ ವಿಶ್ವನಾಥ , ರವಿಕುಮಾರ್ ಜೆ , ದೀಪ , ಪ್ರಶಾಂತ್ ಉಬಾರ್ ಮೊದಲಾದವರು ಭಾಗವಹಿಸಿದ್ದರು.
ಜ್ಯೋತಿ ಪ್ರಶಾಂತ್ ರವರ ನಿರೂಪಣೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶುಭ ಪ್ರಾರ್ಥಿಸಿದರು. ಭರತೇಶ್ ಸ್ವಾಗತಿಸಿ, ಶೋಭಿತಾ ವಂದಿಸಿದರು. ಶಿಶು ಮಂದಿರದ್ ಮಾತಾಜಿಗಳಾದ ಚೈತ್ರಾ, ಕಾಂತಿಮಣಿ , ಚಂದ್ರಾವತಿ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.










