







ರಾಮಕುಂಜ; ಹಳೆನೇರೆಂಕಿ ಗ್ರಾಮದ ಆರಟಿಗೆ ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರದ ವಾರ್ಷಿಕೋತ್ಸವ ಮತ್ತು ಗ್ರಾಮ ಭಜನೆಯ ಮಂಗಳೋತ್ಸವ ಕಾರ್ಯಕ್ರಮ ಡಿ.೨೭ರಂದು ನಡೆಯಿತು.


ಧಾರ್ಮಿಕ ಉಪನ್ಯಾಸ ನೀಡಿದ ಆಧ್ಯಾತ್ಮಿಕ ಚಿಂತಕ ಪರೀಕ್ಷಿತ ತೋಳ್ಪಾಡಿ ಶಾಂತಿಗೋಡು ಅವರು ಮನೆಯಿಂದಲೇ ಸಂಸ್ಕೃತಿಯ ಪಾಠವನ್ನು ತಮ್ಮ ಮಕ್ಕಳಿಗೆ ನೀಡುವ ಮಹತ್ತರ ಜವಬ್ದಾರಿ ನಮ್ಮೆಲ್ಲರ ಹೊಣೆಯಾಗಿದೆ. ಹಳ್ಳಿಗಳಲ್ಲಿ ಭಜನಾ ಮಂದಿರಗಳ ಮೂಲಕ ಧರ್ಮ ಜಾಗೃತಿ ನಿರಂತರ ನಡೆದಾಗ ಧರ್ಮ ಉಳಿಯುತ್ತದೆ ಎಂದರು. ಭಜನಾ ಮಂದಿರದ ಅಧ್ಯಕ್ಷ ಚರಣ್ ಪಿ.ಪಾಳೆತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನವಿಕಾಸ ಕಡಬ ತಾಲೂಕು ಸಮನ್ವಯ ಅಧಿಕಾರಿ ಚೇತನ, ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯಸವ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ್ ರಾಮಕುಂಜ ಶುಭಹಾರೈಸಿದರು.



ಈ ಸಂದರ್ಭದಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಸಂಜೀವ ಗೌಡ ಹಾಗೂ ಬಾಲಕಿ ದಂಪತಿ ಮತ್ತು ಚಂದ್ರಶೇಖರ ಕಟ್ಟಪುಣಿ ಹಾಗೂ ರೋಹಿಣಿ ದಂಪತಿಯನ್ನು ಸನ್ಮಾನಿಸಲಾಯಿತು. 15 ದಿನಗಳ ಕಾಲ ನಿರಂತರ ಗ್ರಾಮ ಭಜನೆಯಲ್ಲಿ ಭಾಗವಹಿಸಿದ ಭಜನಾಪಟುಗಳನ್ನು ಗೌರವಿಸಲಾಯಿತು.
ಶೇಖರ ಕಟ್ಟಪುಣಿ ಪ್ರಸ್ತಾವಿಸಿದರು. ವಿದೀಶ್ ಎರಟಾಡಿ ವರದಿ ಮಂಡಿಸಿದರು. ವೀರೇಂದ್ರ ಪಾಲೆತ್ತಡ್ಡ ಸ್ವಾಗತಿಸಿದರು. ಗಣೇಶ್ ಮರಂಕಾಡಿ ವಂದಿಸಿದರು. ರಮೇಶ್ವ ರೈ ರಾಮಮಜಲು, ಶಿಕ್ಷಕ ಪ್ರೇಮನಾಥ್ ಪದ್ಮುಂಜ ನಿರೂಪಿಸಿದರು. ಕೃಷ್ಣ ಪ್ರಸಾದ್ ನೂರಿತ್ತಾಯ ನೇತೃತ್ವದಲ್ಲಿ ಬೆಳಿಗ್ಗೆ ಗಣಹೋಮ, ಸಾಯಂಕಾಲ ಶ್ರೀ ಸತ್ಯನಾರಾಣ ಪೂಜೆ, ಮಹಿಳಾ, ಪುರುಷ, ಮಕ್ಕಳ ಭಜನಾ ತಂಡದಿಂದ ಕುಣಿತ ಭಜನೆ ನಡೆಯಿತು.










