







ಬಡಗನ್ನೂರು : ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ ಸುವರ್ಣ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮದ ಪ್ರಯುಕ್ತ ಸದಸ್ಯರಿಗೆ ಲಭಿಸುವ ಸರಕಾರದ ಯೋಜನೆ, ವಿಮಾ ಸೌಲಭ್ಯಗಳು, ಸಹಕಾರಿ ಸಂಘದ ಸಾಲ ಸೌಲಭ್ಯಗಳ ವಿಚಾರಗೋಷ್ಠಿ ಡಿ. 28 ರಂದು ಬಡಗನ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಬಡಗನ್ನೂರು ಗ್ರಾ. ಪಂ ಅಧ್ಯಕ್ಷೆ ಪುಷ್ಪಾಲತಾ ದೇವಕಜೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸರಕಾರದ ಸೌಲಭ್ಯಗಳ ಮಾಹಿತಿಗಳು ಗ್ರಾಮದ ಕಟ್ಟಕಡೆಯ ವ್ಯಕ್ತಿಗಳಿಗೆ ದೊರಕಿಸುವ ಕೆಲಸ ಕುಂಬ್ರ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಮಾಡುತ್ತಿರುವ ಬಗ್ಗೆ ಕೃತಜ್ಞತೆ ಸಲ್ಲಿಸಿ, ಈ ಮಾಹಿತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿ ಶುಭ ಹಾರೖೆಸಿದರು.



ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೖೆ ಕೖೆಕಾರ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಸಂಘದ ಉದ್ದೇಶ ಸಾಪಲ್ಯತೆ ನಾಲ್ಕು ಗ್ರಾಮಗಳಿಗೂ ಸಮಾನ ರೀತಿಯಲ್ಲಿ ಪಸರಿಸುವ ನಿಟ್ಟಿನಲ್ಲಿ ಬಡಗನ್ನೂರು ಗ್ರಾಮದಲ್ಲಿ ಎರಡನೇ ಕಾರ್ಯಕ್ರಮವಾಗಿ ಸದಸ್ಯರಿಗೆ ಲಭಿಸುವ ಸರಕಾರದ ಯೋಜನೆ, ವಿಮಾ ಸೌಲಭ್ಯಗಳು, ಸಹಕಾರಿ ಸಂಘದ ಸಾಲ ಸೌಲಭ್ಯಗಳ ವಿಚಾರಗೋಷ್ಠಿ ಆಯೋಜಿಸಲಾಗಿದ್ದು ಇದರ ಸದುಪಯೋಗವನ್ನುಎಲ್ಲಾ ಸದಸ್ಯರು ಪಡೆದುಕೊಳ್ಳಬೇಕು.ದ. ಕ ಜಿಲ್ಲೆಯಲ್ಲಿ ಅಡಿಕೆ ಬೆಳೆ ಪ್ರಮುಖ ಬೆಳೆ, ಆದರೆ ಹವಮಾನ ವೖೆಪರಿತದಿಂದ ಕೃಷಿ ನಾಶವಾಗಿದೆ. ವಿಮೆ ಸೌಲಭ್ಯ ಎಲ್ಲರಿಗೂ ದೊರಕಿಸುವ ಮೂಲಕ ಸುವರ್ಣ ಮಹೋತ್ಸವ ಅರ್ಥಪೂರ್ಣವಾಗಿ ಮಾಡುವ ನಿಟ್ಟಿನಲ್ಲಿ ಗ್ರಾಮದ ಪ್ರತೀ ಮನೆಗೂ ಭೇಟಿ ನೀಡಿ ಸದಸ್ಯತ್ವವನ್ನು ಹೆಚ್ಚಿಸುವ ಕಾರ್ಯ ನಡೆಯುತ್ತಿದೆ ಎಂದ ಅವರು ಸ್ವ ಉದ್ಯೋಗ ನಿಟ್ಟಿನಲ್ಲಿ ಸಂಘವು ಅರ್ಥಿಕ ವ್ಯವಸ್ಥೆ ಮಾಡುತ್ತದೆ ಜೊತೆಗೆ ಇದಕ್ಕೆ ಪರಿಣತಿ ತಜ್ಞರಿಂದ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ, ಮಂಗಳೂರು ಯಸ್. ಸಿ.ಡಿ.ಸಿ.ಸಿ ಬ್ಯಾಂಕ್ ನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ನಾಯರ್ ಸಹಕಾರ ಸಂಘದಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ ಮತ್ತು ಸಹಕಾರಿ ವ್ಯವಸ್ಥೆ ಬಗ್ಗೆ ಸಮಗ್ರ ವಿಚಾರಗೋಷ್ಠಿ ನಡೆಸಿ ಮಾತನಾಡಿ, ಸಹಕಾರಿ ಸಂಘದಲ್ಲಿ ಎಲ್ಲರೂ ಸಮಾನರು. ಇಲ್ಲಿ ಯಾವುದೇ ಮೇಲು ಕೀಲು ಇಲ್ಲ, ಸದಸ್ಯರು ಸಹಾಕಾರಿ ಸಂಘದ ಒಡೆಯರು. ಸದಸ್ಯರ ಸಕ್ರೀಯ ಪಾಲ್ಗೊಳ್ಳುವಿಕೆಯಿಂದ ಸಹಕಾರಿ ಸಂಘದ ಯಶಸ್ಸು ಸಾಧ್ಯ ಎಂದು ಹೇಳಿದರು.
ಪುತ್ತೂರು ಆರ್ಥಿಕ ಸಾಕ್ಷರತಾ ಕೇಂದ್ರ,ಅಮೂಲ್ಯ ಕೆನರಾ ಬ್ಯಾಂಕಿನ ಆಪ್ತ ಸಮಲೋಚಕಿ ಗೀತಾ ವಿಜಯ್ ಸರಕಾರದ ಯೋಜನೆಗಳು ಮತ್ತು ವಿಮಾ ಸೌಲಭ್ಯಗಳ ಮಾಹಿತಿ ನೀಡಿದರು.
ವೇದಿಕೆಯ ಕೃ ಪ. ಸ. ಸಂಘದ ಮುಖ್ಯ ಕಾರ್ಯನಿರ್ವಾಹಕಧಿಕಾರಿ ಭವಾನಿ ಬಿ.ಆರ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಉಮೇಶ್ ಗೌಡ ಕನ್ನಯ, ವಸಂತ ಕುಮಾರ್, ಸತೀಶ್ ಕರ್ಕೆರ, ಹಾಗೂ ಸಂಘದ ಸದಸ್ಯರು ಹಾಗೂ ಊರ ರೖೆತ ಭಾಂಧವರು, ಮತ್ತು ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು..
ಬಡಗನ್ನೂರು ಶಾಲಾ ವಿದ್ಯಾರ್ಥಿ ಲಾಸ್ಯ ಪ್ರಾರ್ಥಿಸಿದರು.ಸಂಘದ ನಿರ್ದೇಶಕ ಸಂತೋಷ ಆಳ್ವ ಸ್ವಾಗತಿಸಿದರು. ಸಿಬ್ಬಂದಿ ವೀಣಾ ಕುಮಾರಿ ವಂದಿಸಿದರು. ಸಂಘದ ಮೆನೇಜರ್ ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.ಸಿಬ್ಬಂದಿಗಳಾದ ಭರತ್ ಹಾಗೂ ಪ್ರೀತ ಕುಮಾರಿ ಸಹಕರಿಸಿದರು.

ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ ಬಿ, ನಿರ್ದೇಶಕರಾದ ರಾಜೀವಿ ಎಸ್ ರೖೆ ಮಲ್ಲಿಕಾ ಎ. ಜೆ, ಶಿವರಾಮ ಬಿ, ಸಿಬ್ಬಂದಿ, ವೀಣಾ ಕುಮಾರಿ, ಹಾಗೂ ಅತಿಥಿಗಳನ್ನು ಹೂ, ಸಾಲು ನೀಡಿ ಗೌರವಿಸಿದರು.
ಬಡ್ಡಿ ರಹಿತ ಸಾಲ
ಸಿಬಂದಿ ಕಿರಣ್ ಕುಮಾರ್ ಮಾತನಾಡಿ, ಸಂಘವು ಸದಸ್ಯರಿಗೆ ರಸಗೊಬ್ಬರ ಖರೀದಿಸಲು ಬಡ್ಡಿ ರಹಿತ ಸಾಲನೀಡಲಾಗುವುದು ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಸ್ವ ಉದ್ಯೋಗಕ್ಕೆ ಆದ್ಯತೆ
ಸಹಕಾರಿ ಸಂಘಕ್ಕೆ ಒಳಪಡುವ ಗ್ರಾಮಗಳಲ್ಲಿ ಸ್ವ ಉದ್ಯೋಗ ಮಾಡಿಕೊಂಡು ಸ್ವಾವಲಂಬಿ ಬದಕು ಕಟ್ಟಿಕೊಳ್ಳಲು ಇಚ್ಚಿಸುವವರು ಮುಂದೆ ಬಂದಲ್ಲಿ ಸಂಘದ ವತಿಯಿಂದ ಆರ್ಥಿಕ ವ್ಯವಸ್ಥೆಯ ಜೊತೆಗೆ ಪರಿಣಿತರಿಂದ ತರಬೇತಿ ನೀಡುವ ಮೂಲಕ ಸ್ವ ಉದ್ಯೋಗಸ್ಥರಿಗೆ ಪ್ರೋತ್ಸಾಹ ನೀಡಲಾಗವುದು
ಪ್ರಕಾಶ್ಚಂದ್ರ ರೖೆ ಕೈಕಾರ ಸಂಘದ ಅಧ್ಯಕ್ಷ ಕುಂಬ್ರ ಕೃ. ಪ. ಸ. ಸಂಘದ ಅಧ್ಯಕ್ಷರು..










