






ಪುತ್ತೂರು: ರಝಾನಗರ ಬುರೂಜ್ ಇಂಗ್ಲೀಷ್ ಮೀಡಿಯಂ ಹೈ ಸ್ಕೂಲ್ ನಲ್ಲಿ ಡಿ.27ರಂದು ವಾರ್ಷಿಕೋತ್ಸವ ನಡೆಯಿತು.


ಮಾನ್ಯ ಮಾಜಿ ಸಚಿವ ಬಿ ರಮಾನಾಥ ರೈ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸೆಕ್ರೆಡ್ ಚರ್ಚ್ ಪಾಧರ್ ರೆ ಫೇರ್ನಾಡಿಸ್ ಸ್ಟೇನಿ ಗೋವಸ್ ಮಾತನಾಡಿ , ವಿದ್ಯಾರ್ಥಿಗಳಿಗೆ ಆರ್ಶಿವದಿಸಿದರು.ರಾಜ್ಯೋತ್ಸವ ಪುರಸ್ಕೃತರಾದ ಅರ್ಜುನ್ ಭಂಡಾರ್ಕರ್ ಮಾತನಾಡಿ “ತಾಳ್ಮೆ ಕಠಿಣ ಪರಿಶ್ರಮವಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ” ಎಂದು ತಿಳಿಸಿದರು.



ವಿಟ್ಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರಮಾನಾಥ ವಿಟ್ಲ, “ಶಾಲೆ ಎಂದರೆ ತುಂಬಾ ಇಷ್ಟ. ನಮ್ಮ ಮಕ್ಕಳ ಪ್ರತಿಭೆ ಗುರುತಿಸಿ ಹೆತ್ತವರು ಪ್ರೋತ್ಸಾಹಿಸಬೇಕು” ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಬಂಟ್ವಾಳ ನಗರಾಭಿವೃದ್ಧಿ ಅಧ್ಯಕ್ಷರಾದ ಬೇಬಿ ಕುಂದರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಚಂದ್ರಪ್ರಕಾಶ್ ಶೆಟ್ಟಿ, , ಶಾರದ ಸೇವಾ ಟ್ರಸ್ಟ್ , ಇರ್ವತ್ತೂರು ಇದರ ಅಧ್ಯಕ್ಷರಾದ ಡಾ.ರಾಮಕೃಷ್ಣ ಎಸ್, ಜಮೀಯ್ಯತ್ ಫಲಾಹ್ ಅಧ್ಯಕ್ಷರಾದ ಅಬ್ಬಾಸ್ ಅಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ನಾಟಕ ರಚನೆ ಹಾಗೂ ನಿರ್ದೇಶಕರಾದ ಬಾಲಕೃಷ್ಣ ಆರ್ ಆಂಚನ್, ಕೃಷಿಕ ಸಮಾಜದ ಕಾರ್ಯಕಾರಿ ಸದಸ್ಯರಾದ ಶಂಕರ್ ನಾರಾಯಣ್ ಹೊಳ್ಳ, ಆನಿಯಾ ದರ್ಬಾರ್ ಹೋಟೆಲ್ಸ್ ಇದರ ಎಂ.ಡಿ ಯಾದ ಹಂಝ ಬಸ್ತಿಕೋಡಿ, ಸಿರಿಗುಂಡದಪಾಡಿ ದೇವಸ್ಥಾನದ ಅಧ್ಯಕ್ಷರಾದ ಮೊಹನ್ ಶೆಟ್ಟಿ ನರ್ವಲ್ದಡ್ಡ , ಬುರೂಜ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಸಿನಾನ್, ಕಾರ್ಯದರ್ಶಿಯಾದ ಆಶಿಶ್ ಪೂಜಾರಿ, ಸುದ್ದಿ ಬಿಡುಗಡೆ ಪತ್ರಕರ್ತರಾದ ವಸಂತಕುಮಾರ್, ಕಾವಳಕಟ್ಟೆ ಗ್ರಾಮ ಪಂಚಾಯತ್ ಸದಸ್ಯರಾದ ಖಲೀಲ್ ಅಹ್ಮದ್, ಸಮಾಜ ಸೇವಕರಾದ ಇಸ್ಮಾಯಿಲ್ ಸಿದ್ದೀಕ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಶಬನಾ ಮನ್ಸೂರ್,ಮುಖ್ಯ ಶಿಕ್ಷಕಿಯಾದ ಜಯಶ್ರೀ ಸಾಲ್ಯಾನ್, ಎಸ್.ಎಸ್.ಎಲ್.ಸಿ ಟಾಪರ್ ಮಲೀಹಾ, ಶಾಲಾ ನಾಯಕಿಯಾದ ಸನಾ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಸಚಿವರಾದ ರಮಾನಾಥ ರೈ ಯವರಿಗೆ,ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅರ್ಜುನ್ ಭಂಡಾರ್ಕರ್ ರವರಿಗೆ, 2024- 25 ನೇ ಸಾಲಿನಲ್ಲಿ 10 ನೇ ತರಗತಿಯಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಶಾಲಾ ವಾಹನ ಚಾಲಕರಿಗೆ, ಕಬ್ಬಡಿ ಮತ್ತು ಖೋಖೋ ತರಬೇತಿ ನೀಡಿದವರಿಗೂ ಸಿಬ್ಬಂದೇತರ ವರ್ಗಕ್ಕೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ವಾಗತ ಭಾಷಣ ಮತ್ತು ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ವಹಿಸಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಎಲ್ಸಿ ಲಸ್ರಾದೋ ವಂದಿಸಿದರು. ಶಿಕ್ಷಕಿಯರಾದ ಹಾಫಿಳಾ, ದಿವ್ಯ, ಮಾಜಿ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆಯಾದ ಎಸ್. ಪಿ. ರಝಿಯಾ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಕರಾಟೆ ಪ್ರದರ್ಶನ, ಲಕ್ಕಿ ಕೂಪನ್ ಡ್ರಾ ನಡೆಯಿತು.










