






ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕಿನ ವತಿಯಿಂದ, ಆಸಕ್ತ ಸ್ವ- ಉದ್ಯೋಗ ಮಾಡುವ ಸದಸ್ಯರಿಗೆ ಸ್ವ-ಉದ್ಯೋಗ ಕೌಶಲ್ಯಾಭಿವೃದ್ಧಿ ತರಬೇತಿಯು ದುರ್ಗಾಂಬಿಕಾ ಸಭಾಭವನ ಕಡಬದಲ್ಲಿ ನಡೆಯಿತು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ ಸ್ವ- ಉದ್ಯೋಗಕ್ಕೆ ಪೂರಕವಾದ ಶ್ರೀ ಕ್ಷೇತ್ರದಿಂದ ನಡೆಸುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಶುಭ ಹಾರೈಸಿದರು.



ರುಡ್ ಸೆಟ್ ಸಂಸ್ಥೆಯ ಉಪನ್ಯಾಸಕ ಕರುಣಾಕರ್ ಜೈನ್ ಆಸಕ್ತ ಫಲಾನುಭವಿಗಳಿಗೆ ಮಾರ್ಗದರ್ಶನ ಮಾಡುತ್ತಾ ಯಶಸ್ವಿ ಉದ್ಯಮಿಯಾಗಬೇಕಾದರೆ ಅಳವಡಿಸಿಕೊಳ್ಳಬೇಕಾದ ಕೌಶಲ್ಯಗಳು ಮತ್ತು ಆಧುನಿಕತೆಗೆ ತಕ್ಕಹಾಗೆ ಹೊಂದಿಕೊಂಡು ಹೋಗುವ ಬಗ್ಗೆ ಉಪನ್ಯಾಸ ನೀಡಿದರು. ಸಿಡ್ಬಿ ಪ್ರಾಯಸ್ ಯೋಜನೆಯ ಯೋಜನಾಧಿಕಾರಿಗಳಾದ ಅನುಷಾ ರೈ ರವರು ಸ್ವ- ಉದ್ಯೋಗ ನಡೆಸಲು ಸಿಗುವ ಸಬ್ಸಿಡಿ ಪ್ರಗತಿ ನಿಧಿಯ ಬಗೆಗ್ಗೆ ಮಾಹಿತಿ ನೀಡಿದರು.
ಪತ್ರಕರ್ತ ನಾಗರಾಜ ಏನ್. ಕೆ. ರವರು ಮಾತನಾಡುತ್ತಾ ರುಡ್ ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆದು ಯಶಸ್ವಿ ಸ್ವ -ಉದ್ಯೋಗ ನಡೆಸುತ್ತಿರುವ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸ್ವ-ಉದ್ಯೋಗ ನಡೆಸುವ ಫಲಾನುಭವಿಗಳು, ಹಣಕಾಸು ಪ್ರಬಂಧಕರು, ಜ್ಞಾನವಿಕಾಸ ಸಮನ್ವಯಾಧಿಕಾರಿ, ಕಡಬ ತಾಲೂಕಿನ ಮೇಲ್ವಿಚಾರಕರು ಮತ್ತು ಇತರರು ಉಪಸ್ಥಿತರಿದ್ದರು. ಕಡಬ ತಾಲೂಕಿನ ಯೋಜನಾಧಿಕಾರಿಗಳಾದ ಪ್ರಕಾಶ್ ಕುಮಾರ್ ಸ್ವಾಗತಿಸಿದರು. ಕಡಬ ವಲಯದ ಮೇಲ್ವಿಚಾರಕ ವಿಜೇಶ್ ಜೈನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.










