







ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಳ್ತಿ) ಮಲರಾಯ ಸಪರಿವಾರ ದೇವಸ್ಥಾನಕ್ಕೆ ಕ್ಷೇತ್ರದ ಕಾಮಗಾರಿ ವೀಕ್ಷಣೆಗೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದರಾದ ನಳಿನ್ಕುಮಾರ್ ಕಟೀಲ್ರವರು ಜ.2ರಂದು ಸಂಜೆ ಆಗಮಿಸಲಿದ್ದಾರೆ.



ಕ್ಷೇತ್ರದ ಹೊರಾಂಗಣದ ಪೂರ್ವಭಾಗದಿಂದ ದಕ್ಷಿಣ ಆಗ್ನೇಯ ಭಾಗವು ಕುಸಿತಗೊಂಡಿದ್ದು, ಪರಿಹಾರೋಪಯವಾಗಿ ತಡೆಗೋಡೆ, ಕೊಠಡಿಗಳ ನಿರ್ಮಾಣ, ಇಂಟರ್ಲಾಕ್, ಮೇಲ್ಛಾವಣಿಗೆ ಶೀಟ್ ಅಳವಡಿಕೆ ಕಾಮಗಾರಿಗೆ ರೂ.35 ಲಕ್ಷ ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿದ್ದು, ಈ ಕುರಿತಂತೆ ತಡೆಗೋಡೆ ನಿರ್ಮಾಣಕ್ಕೆ ನಳಿನ್ಕುಮಾರ್ ಕಟೀಲ್ರವರು ರೂ.10 ಲಕ್ಷ ಅನುದಾನ ಮಂಜೂರುಗೊಳಿಸಿ ಕಾಮಗಾರಿ ವೀಕ್ಷಣೆಗೆ ಆಗಮಿಸಲಿದ್ದಾರೆ. ಈ ಕುರಿತು ಆಡಳಿತ ಸಮಿತಿ, ಭಕ್ತಾಧಿಗಳ ಜತೆ ಸಮಾಲೋಚನೆ ನಡೆಸಿ ಮಾರ್ಗದರ್ಶನ ನೀಡಲಿರುವರು.



ಇದೇ ಸಂದರ್ಭದಲ್ಲಿ ನಗರಸಭಾ ಸದಸ್ಯ ಸಂತೋಷ್ ಕುಮಾರ್ರವರ ಸದಸ್ಯತ್ವದ ಅವಧಿ 2018-2025ರ ತನಕದ ತಮ್ಮ ವಾರ್ಡ್-15ರಲ್ಲಿ ಕೈಗೊಂಡ ಕಾಮಗಾರಿಗಳ ವಿವರಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಿರುವರು. ಈ ಸಂದರ್ಭದಲ್ಲಿ ಪರಿಸರದ ಸಾರ್ವಜನಿಕರು ಉಪಸ್ಥಿತರಿರಬೇಕೆಂದು ಕ್ಷೇತ್ರದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.









