







ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿರುವ ಶಾರದಾ ಭಜನಾ ಮಂದಿರದಲ್ಲಿ 90ನೇ ವರ್ಷದ ಏಕಾಹ ಭಜನೆಯು ಡಿ.30ರ ಸೂರ್ಯೋದಯದಿಂದ ರಾತ್ರಿ 8ರವರೆಗೆ ವಿವಿಧ ಭಜನಾ ಮಂಡಳಿಗಳ ಸಹಕಾರದೊಂದಿಗೆ ನಡೆಯಿತು.



ಡಿ.20ರಂದು ನಗರ ಸಂಕೀರ್ತನೆ ಪ್ರಾರಂಭಗೊಂಡಿದ್ದು ಏಕಾಹ ಭಜನೆಯ ಪ್ರಯುಕ್ತ ಡಿ.30ರಂದು ಸಂಜೆ ಉಲ್ಪೆ ಮೆರವಣಿಗೆ (ಹಣ್ಣು ಹಂಪಲು) ನಡೆದು ರಾತ್ರಿ 8.30ಕ್ಕೆ ಮಂಗಳಾಚರಣೆಯೊಂದಿಗೆ ಏಕಾಹ ಭಜನೆ ಮುಕ್ತಾಯಗೊಂಡಿತು.




ಈ ಸಂದರ್ಭದಲ್ಲಿ ಮಂದಿರದ ಮಂದಿರದ ಅಧ್ಯಕ್ಷ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಅರ್ಚಕ ತಿರುಮಲೇಶ್ವರ ಭಟ್, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಉಪಾಧ್ಯಕ್ಷ ಯಶವಂತ ಆಚಾರ್ಯ, ಜತೆ ಕಾರ್ಯದರ್ಶಿಗಳಾದ ಸುಧೀರ್ ಕಲ್ಲಾರೆ, ಜಲಜಾಕ್ಷಿ ಹೆಗ್ಡೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯಕರಸೇವಕರ ತಂಡದ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.










