ಶ್ರೀಕ್ಷೇತ್ರ ಹನುಮಗಿರಿ ಶ್ರೀ ಕೋದಂಡರಾಮ ಮತ್ತು ಪಂಚಮುಖಿ ಆಂಜನೇಯ ಕ್ಷೇತ್ರ ಬ್ರಹ್ಮಕಲಶೋತ್ಸವದ ಸಮಾಲೋಚನಾ ಸಭೆ

0

ಪುತ್ತೂರು: 2026ರ ಏಪ್ರಿಲ್ 9 ರಿಂದ 12ರ ವರೆಗೆ ನಡೆಯಲಿರುವ ಶ್ರೀಕ್ಷೇತ್ರ ಹನುಮಗಿರಿ ಶ್ರೀ ಕೋದಂಡರಾಮ ಮತ್ತು ಪಂಚಮುಖಿ ಆಂಜನೇಯ ದೇವರ ಬ್ರಹ್ಮಕಲಶೋತ್ಸವದ ಸಮಾಲೋಚನಾ ಸಭೆಯು ಜ.4ರಂದು ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಹಾಗೂ ಗ್ರಾಮ ರಚನಾ ಸಮಿತಿಯ ಸಂಚಾಲಕ ಸಾಜಾ ರಾಧಾಕೃಷ್ಣ ಆಳ್ವ ಮಾತನಾಡಿ, ಗ್ರಾಮ ಸಮಿತಿಯ ಎಲ್ಲಾ ಪದಾಧಿಕಾರಿಗಳು ಪ್ರತಿ 10 ದಿನಕ್ಕೊಮ್ಮೆ ಸೇರಿ ಬ್ರಹ್ಮಕಲಶೋತ್ಸವದ ರೂಪುರೇಷೆಯ ಬಗ್ಗೆ ಚರ್ಚಿಸಬೇಕು ಹಾಗೂ ಇನ್ನುಳಿದ ಎಲ್ಲ ಗ್ರಾಮ ಸಮಿತಿಗಳನ್ನು ಜನವರಿ 14ರೊಳಗೆ ಮಾಡುವುದಾಗಿ ತಿಳಿಸಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್. ಸಿ. ನಾರಾಯಣ ಮಾತನಾಡಿ, ಏಪ್ರಿಲ್ 9 ರಿಂದ 12 ವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಸಂಪೂರ್ಣ ತಯಾರಿ ಹಾಗೂ ಕಾರ್ಯಯೋಜನೆಯ ಬಗ್ಗೆ ತಿಳಿಸಿದರು. ಸ್ವಾಗತ ಸಮಿತಿಯ ಉಪಾಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ, ಬ್ರಹ್ಮಕಲಶೋತ್ಸವದ ಎಲ್ಲಾ ಕಾರ್ಯಕ್ರಮಗಳಿಗೆ ಗ್ರಾಮ ಸಮಿತಿಯವರು ಸಂಪೂರ್ಣ ಸಹಕಾರವನ್ನು ನೀಡಬೇಕಾಗಿ ವಿನಂತಿಸಿದರು.

ಸಭೆಯಲ್ಲಿ ಪ್ರತಿ 10 ದಿನಕ್ಕೊಮ್ಮೆ ನಡೆಯುವ ಕೇಂದ್ರ ಸಮಿತಿಯ ಸಭೆಯಲ್ಲಿ ಎಲ್ಲಾ ಗ್ರಾಮ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿರಬೇಕು. ಮುಂದಿನ ಸಮಾಲೋಚನ ಸಭೆಯು ಜನವರಿ 14ರಂದು ಶ್ರೀ ಕ್ಷೇತ್ರದಲ್ಲಿ ನಡೆಯುತ್ತದೆ. ಪುತ್ತೂರು, ಸುಳ್ಯ, ಕಡಬ ಹಾಗೂ ಕಾಸರಗೋಡಿನ ಎಲ್ಲಾ ಪ್ರಮುಖ ಗ್ರಾಮಗಳಲ್ಲಿ ಜನವರಿ 14ರ ಒಳಗೆ ಗ್ರಾಮ ಸಮಿತಿ ರಚನೆಯಾಗುತ್ತದೆ. ಮಾರ್ಚ್ 4 ರಂದು ಶ್ರೀ ಕ್ಷೇತ್ರದಲ್ಲಿ ಶ್ರೀರಾಮ ತಾರಕ ಜಪ ದೀಕ್ಷೆ ಹಾಗೂ ರಾಮರಕ್ಷೆಯನ್ನು ನೀಡಲಾಗುತ್ತದೆ.ರಾಮ ಹನುಮಜ್ಯೋತಿ ರಥ ಆಗಮಿಸುವ ಗ್ರಾಮದ ಪ್ರಮುಖ ದೇವಾಲಯಗಳಿಗೆ ದೀಪವನ್ನು ಶ್ರೀ ಕ್ಷೇತ್ರದ ವತಿಯಿಂದ ನೀಡಲಾಗುತ್ತದೆ ಎಂದು ತೀರ್ಮಾನ ಕೈಗೊಂಡರು.


ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸದ ಪದಾಧಿಕಾರಿಗಳಾದ ಚನೀಲ ತಿಮ್ಮಪ್ಪ ಶೆಟ್ಟಿ, ಜೀವಂಧರ್ ಜೈನ್, ಗೋಪಾಲಕೃಷ್ಣ ಹೇರಳೆ, ಹರೀಶ ಕಂಜಿಪಿಲಿ, ಚಂದ್ರಶೇಖರ ಆಳ್ವ, ಶಿವರಾಮ ಶರ್ಮ, ಪ್ರವೀಣ್ ನೀರಳಿಕೆ, ಶ್ರೀರಾಮ್ ಪಕ್ಕಳ, ನಹುಷ, ಸೂರ್ಯನಾರಾಯಣ ಭಟ್, ಮನ್ಮಥ, ನಿತೀಶ್ ಕುಮಾರ್ ಶಾಂತಿವನ, ಸಂತೋಷ್ ಜಾಕೆ, ಚಂದ್ರಶೇಖರ್ ರೈ ಇಳಂತಾಜೆ, ಗಿರಿಧರ, ರಾಜೇಂದ್ರ ಪ್ರಸಾದ್ ರೈ ಮೇನಾಲ, ಆನಂದ ರೈ ಸಾಂತ್ಯ, ಮಹಾಲಿಂಗ ಪಾಟಾಳಿ ಸದಸ್ಯರಾದ ಸುನಿಲ್ ಸುಳ್ಯ, ರಂಜಿತ್ ಸುಳ್ಯ, ನಿಕೇಶ್ ಉಬರಡ್ಕ, ವಿವೇಕ್ ಕಟೂರ್, ಸ್ವಸ್ತಿಕ್ ಸುಳ್ಯ, ಸುರೇಶ ಸುಳ್ಯ, ಶಿವಪ್ಪ ಶಬರಿನಗರ, ಸುಭಾಷ್ ಚಂದ್ರ ರೈ ಕರ್ನೂರು, ಡಾ. ಕಿರಣ್ ಚಂದ್ರ ರೈ,ಡಾ. ಹರಿಪ್ರಸಾದ್, ದಿನೇಶ್, ಹರೀಶ್ ಕುಮಾರ್, ಜಲಜಾಕ್ಷಿ, ರೂಪ, ಮೀನಾಕ್ಷಿ, ಹೇಮಲತಾ, ನಾರಾಯಣ ರೈ, ರಾಮಣ್ಣ ನಾಯ್ಕ ಕುತ್ಯಾಳ, ಪದ್ಮನಾಭ ಗೌಡ, ಯತೀಂದ್ರ ಕೊಚ್ಚಿ, ಹರೀಶ್ ವಿಜತ್ರೆ, ಆನಂದ ಗೌಡ, ಗಿರೀಶ್ ಕೆ ಬಿ, ಜಯತ್ ಕೆಮ್ಮಾರ, ಕೃಷ್ಣಪ್ಪ ಗೌಡ ಬಾಯಂಬಾಡಿ, ಸತ್ಯ ಪ್ರಕಾಶ್ ಕುಂಟಿಕಾನ, ಸುನಿಲ್ ಶೆಟ್ಟಿ, ರಮೇಶ್ ಪೂಜಾರಿ ಮಂಡ್ಯ, ರವಿರಾಜ್ ಪಾಟಾಳಿ, ಪ್ರವೀಣ್ ರೈ ಮೇನಾಲ, ಮೋಹನ ಆಳ್ವ, ಶರತ್ ಕುಮಾರ್ ಮಾಡವು, ಶಶಿಧರ ಪಾಟಾಳಿ, ಸುಧೀರ್ ಕಟ್ಟಪುಣಿ, ನವೀನ್, ಯುವರಾಜ್ ಪೂಂಜ, ಅಚ್ಯುತ ಮಣಿಯಾಣಿ ಹಾಗೂ ಪುತ್ತೂರು, ಸುಳ್ಯ ,ಕಡಬ ,ಕಾಸರಗೋಡು ತಾಲೂಕಿನ ಪ್ರಮುಖರು ಉಪಸ್ಥಿತರಿದ್ದರು.

ಕ್ಷೇತ್ರದ ಧರ್ಮದರ್ಶಿ ಶಿವರಾಂ ಪಿ ಸ್ವಾಗತಿಸಿ, ಹರಿಪ್ರಸಾದ್ ವಂದಿಸಿದರು. ರಾಜೇಂದ್ರ ಪ್ರಸಾದ್ ಸಹಕಸಿದರು.

ಕಾರ್ಯಕ್ರಮದ ಪ್ರಮುಖ ಅಂಶಗಳು

LEAVE A REPLY

Please enter your comment!
Please enter your name here