ಪುತ್ತೂರು: ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ಅಂಗವಾಗಿ ಸಿರಿಧಾನ್ಯ ನಡಿಗೆ-2025-26

0

ಪುತ್ತೂರು : ದ.ಕ.ಜಿಲ್ಲಾಡಳಿತ, ದ.ಕ.ಜಿ.ಪಂ.,ಕೃಷಿ ಇಲಾಖೆ ಪುತ್ತೂರು ತಾಲೂಕು ಇದರ ವತಿಯಿಂದ ಅಂತರಾಷ್ಟ್ರೀಯ ವಾಣಿಜ್ಯ ಮೇಳ -ಉತ್ಪಾದನೆಯಾಚೆಗಿನ ಕೃಷಿ ರೈತರ ಸಬಲೀಕರಣ ಅಂಗವಾಗಿ ಕೃಷಿಕ ಸಮಾಜ ದ.ಕ ,ಪುತ್ತೂರು ವಿವೇಕಾನಂದ ಕಾಲೇಜಿನ ಸಹಯೋಗದೊಂದಿಗೆ ಸಿರಿಧಾನ್ಯ ನಡಿಗೆ 2025-26 ಸಿರಿಧಾನ್ಯ ಉತ್ಪನ್ನಗಳ ಕುರಿತು ಗ್ರಾಹಕರಿಗೆ ಜಾಗೃತಿ ಮೂಡಿಸಲು ಸಿರಿಧಾನ್ಯ ಜಾಥಾ ಕಾರ್ಯಕ್ರಮ ಜ.8ರಂದು ನಡೆಯಿತು.

ದರ್ಬೆ ರೈತ ಸಂಪರ್ಕ ಕೇಂದ್ರದ ಬಳಿಯಿಂದ ಆರಂಭವಾದ ಸಿರಿಧಾನ್ಯ ನಡಿಗೆಯು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯವರೆಗೆ ಸಾಗಿ ಸಮಾಪನಗೊಂಡಿತು.

ಕೃಷಿ ಇಲಾಖೆಯ ಪುತ್ತೂರು ಉಪವಿಭಾಗದ ಉಪಕೃಷಿ ನಿರ್ದೇಶಕ ಶಿವಶಂಕರ ದಾನೇಗೊಂಡರ ಮಾತನಾಡಿ, ಅಂತರಾಷ್ಟ್ರೀಯ ವಾಣಿಜ್ಯ ಮೇಳದ ಅಂಗವಾಗಿ ಕೃಷಿ ರೈತರ ಸಬಲೀಕರಣ ಅಂಗವಾಗಿ ಕೃಷಿ ಇಲಾಖೆಯ ವತಿಯಿಂದ ಈ ಸಿರಿಧಾನ್ಯ ನಡಿಗೆ ಆಯೋಜಿಸಲಾಗಿದೆ.ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದು,ಜ.10ರಿಂದ ಜ.12ರವರೆಗೆ ನಡೆಯುವ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಕರೆ ನೀಡಿದರು.

ದ.ಕ.ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಮಾತನಾಡಿ, ಜ.10ರಿಂದ ಜ.12ರವರೆಗೆ ನಡೆಯಲಿರುವ ಮೈಸೂರು ವಿಭಾಗಮಟ್ಟದ ಕೃಷಿ ಮೇಳ ಹಾಗೂ ಸಸ್ಯ ಜಾತ್ರೆಯ ಪೂರ್ವಭಾವಿಯಾಗಿ ನಡೆದ ಸಿರಿಧಾನ್ಯ ನಡಿಗೆ ಕೃಷಿಮೇಳದ ಪ್ರಚಾರಕ್ಕೆ ಪೂರಕವಾಗಿದೆ.

ಕೃಷಿಮೇಳ ಆಯೋಜನೆ ಸಮಿತಿಯ ಗೌರವಾಧ್ಯಕ್ಷರೂ ಹಾಗೂ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರ ನೇತೃತ್ವ ಹಾಗೂ  ಕೃಷಿಮೇಳದ ಸಂಚಾಲಕ ಮಾಜಿ ಶಾಸಕ ಸಂಜೀವ ಮಠಂದೂರು ಮಾರ್ಗದರ್ಶನದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ಸಮಿತಿಯ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಈಗಾಗಲೇ ಕೃಷಿ ಮೇಳದ ಸಿದ್ದತೆಗಳೂ ಭರದಿಂದ ಸಾಗುತ್ತಿದೆ ಎಂದರು.

ದ.ಕ.ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಅವರು ಮಾತನಾಡಿ,ಸಿರಿಧಾನ್ಯದ ಬಳಕೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು‌.ಈ ನಿಟ್ಟಿನಲ್ಲಿ ಸಿರಿಧಾನ್ಯ ನಡಿಗೆ ಸಿರಿಧಾನ್ಯ ಬಳಕೆ ಮಾಡಲು ಜನತೆಗೆ ಉತ್ತೇಜನ ನೀಡಿದಂತಾಗಿದೆ ಎಂದರು.

ಈ ಸಂದರ್ಭದಲ್ಲಿ ಕೃಷಿಮೇಳದ ಸಂಚಾಲಕ ಮಾಜಿ ಶಾಸಕ ಸಂಜೀವ ಮಠಂದೂರು, ಉಪಾಧ್ಯಕ್ಷ ಚಂದ್ರ ಕೋಲ್ಚಾರು ,ಕೋಶಾಧಿಕಾರಿ ಕುಸುಮಾಧರ ಎ.ಟಿ.,ನಿರ್ದೇಶಕರಾದ ಸಂಪತ್ ಸಾಮ್ರಾಜ್ಯ,ರಾಜು ಪೂಜಾರಿ,ಮಹಾವೀರ ಜೈನ್, ಮಹೇಶ್ ಕೆ.ಸವಣೂರು,ಕೃಷ್ಣರಾಜ ಹೆಗ್ಡೆ,ದೇವದಾಸ ಭಂಡಾರಿ, ಪದ್ಮರಾಜ ಬಲ್ಲಾಳ್,ಇಸ್ಮಾಯಿಲ್ ,ರೈತ ಕುಡ್ಲ ಪ್ರತಿಷ್ಠಾನದ ಭರತ್ ರಾಜ್ ಸೊರಕೆ, ಸುಹಾಸ್ ಮರಿಕೆ,ಸವಣೂರು ಕಾಣಿಯೂರು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಗಿರಿಶಂಕರ ಸುಲಾಯ, ಸವಣೂರು ಸಿಎ ಬ್ಯಾಂಕ್ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕೋಡಿಬೈಲು, ನಿರ್ದೇಶಕರಾದ ಉದಯ ರೈ ಮಾದೋಡಿ,ಕಡಬ ಕೃಷಿಕ ಸಮಾಜದ ನಿರ್ದೇಶಕ ರಾಜರಾಮ ಪ್ರಭು,ಶೀನಪ್ಪ ಶೆಟ್ಟಿ ನೆಕ್ರಾಜೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಅಧಿಕಾರಿ ಬಾಲಕೃಷ್ಣ ಎಂ.,ಸುಕುಮಾರ ಕೆ.ಆರ್.ಶಿರಾಡಿ,ಗೋವಿಂದ ಬೋರ್ಕರ್ ಪುತ್ತೂರು,ಪಾಂಡುರಂಗ ಹೆಗ್ಡೆ,ಎ.ಪಿ.ಸದಾಶಿವ ಮರಿಕೆ,ಬಾಲಕೃಷ್ಣ ಗೌಡ ಕಬಕ,ಸಂಜೀವ ಶೆಟ್ಟಿ,ವಿನೋದ್ ಕುಮಾರ್ ರೈ ,ಸುದರ್ಶನ ಶಿರಾಡಿ,ವಿನೋದ್ ಶೆಟ್ಟಿ,ರಾಮಪ್ರಸಾದ್ ಬಿ.ಎಸ್.,ಧನಂಜಯ ಬೆದ್ರೋಡಿ,ದಿವ್ಯ ಪ್ರಸಾದ್ ಸೇರಿದಂತೆ ಕಡಬ ,ಸುಳ್ಯ ,ಬೆಳ್ತಂಗಡಿ,ಮೂಡಬಿದಿರೆ,ಬಂಟ್ವಾಳ, ಉಳ್ಳಾಲ ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕೃಷಿಕ ಸಮಾಜದ ಪದಾಧಿಕಾರಿಗಳು, ಸಹಾಯಕ ಕೃಷಿ ನಿರ್ದೇಶಕ ಚೆಲುವರಂಗಪ್ಪ ಟಿ.ಜಿ.,ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಜಿ.ಗೌಡ, ಯಶಸ್ ಮಂಜುನಾಥ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here