






ಪುತ್ತೂರು:ಹಿಂದೂ ಸಂಘಟನೆಗಳ ಮುಖಂಡ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಅವರ ತಾಯಿ ಸುಮತಿ ಆರ್ ಭಟ್ ಹಸಂತಡ್ಕ(72ವ) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಜ.8ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಪುತ್ತೂರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿದ್ದ ದಿ.ರಾಮ ಭಟ್ ಹಸಂತಡ್ಕ ಅವರ ಪತ್ನಿಯಾಗಿರುವ ಸುಮತಿ ಅವರು ಗೃಹಿಣಿಯಾಗಿದ್ದರು.ಮೃತರು ಪುತ್ರ ಮುರಳಿಕೃಷ್ಣ ಹಸಂತಡ್ಕ, ಪುತ್ರಿಯರಾದ ನಯನಶಂಕರಿ, ಅಶ್ವಿನಿಶಂಕರಿ ಹಾಗು ಸೊಸೆ, ಅಳಿಯಂದಿರು ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ.













