






ಪುತ್ತೂರು: ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರ ಸಾಂಸ್ಕೃತಿಕ ಉಪ ಸಮಿತಿ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ನಡೆಯುತ್ತಿರುವ ಪುತ್ತೂರಿನ ಬಾಲ ಕಲಾವಿದೆ ಸೋನಿಕಾ ಜನಾರ್ಧನ್ ಮತ್ತು ತಂಡದವರ ಭಾರತೀಯ ಸಂವಿಧಾನ ಪೀಠಿಕೆ ಗಾಯನ ಅಭಿಯಾನ ತಂಡಕ್ಕೆ ಮುಖ್ಯ ಮಂತ್ರಿಗಳು ಶುಭಾಶಯ ಕೋರಿದರು.


ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿ ಡ್ರ್ಯಾಗನ್ ಪಾಂಡ್ ಉದ್ಘಾಟನೆ ಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಾಲ ಕಲಾವಿದೆ ಸೋನಿಕಾ ಜನಾರ್ಧನ್ ತಂಡಕ್ಕೆ ಶುಭ ಕೋರಿದರು.



ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್. ಸಿ. ಮಹದೇವಪ್ಪ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ಸಾಂಸ್ಕೃತಿಕ ಉಪ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ, ಕಾರ್ಯಧ್ಯಕ್ಷ ರಾದ ಪ್ರಕಾಶ್, ಉಪಾಧ್ಯಕ್ಷರಾದ ಮೆಲ್ಲಹಳ್ಳಿ ರಾಜೇಶ್ ಸಿ ಗೌಡ, ಡೈರಿ ವೆಂಕಟೇಶ್, ಸೇರಿದಂತೆ ಸಾಂಸ್ಕೃತಿಕ ಉಪ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು










