ಜ.10-11: ಸುನಾದ ಸಂಗೀತ ಕಲಾ ಶಾಲೆಯ ಸುನಾದ ಸಂಗೀತೋತ್ಸವ

0

ಪುತ್ತೂರು: ಪುತ್ತೂರು ಸುನಾದ ಸಂಗೀತ ಕಲಾ ಶಾಲೆಯ ಸುನಾದ ಸಂಗೀತೋತ್ಸವ-2026 ಕಾರ್ಯಕ್ರಮ ಜ.10 ಮತ್ತು 11 ರಂದು ನೆಹರೂನಗರ ಸುದಾನ ವಸತಿಯುತ ಶಾಲಾ ಆವರಣದಲ್ಲಿ ನಡೆಯಲಿದೆ.

ಜ.10ರಂದು ಅಪರಾಹ್ನ 2 ರಿಂದ ಸುನಾದ ಸಂಗೀತ ಕಲಾ ಶಾಲಾ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಸಂಜೆ 6.30ರಿಂದ ವಿದ್ವಾನ್ ವಿ.ವಂಶೀದರ್ ಮೈಸೂರು ಹಾಗೂ ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ವೇಣು ವಾದನ ನಡೆಯಲಿದೆ. ಜ.11ರಂದು ಬೆಳಿಗ್ಗೆ 9 ರಿಂದ ಸುನಾದ ಸಂಗೀತ ಕಲಾ ಶಾಲಾ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ, ಮಧ್ಯಾಹ್ನ 12 ರಿಂದ ಪಂಚರತ್ನ ಗೋಷ್ಠಿ ಗಾಯನ, ಸಂಜೆ 6.30 ರಿಂದ ವಿದ್ವಾನ್ ಟಿ.ವಿ.ರಾಮ್‌ಪ್ರಸಾದ್ ಹಾಗೂ ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here