






ಬಡಗನ್ನೂರು: ಇತಿಹಾಸ ಪ್ರಸಿದ್ಧ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಕುಂಟಾರು ಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ಶ್ರೀ ರವೀಶ ತಂತ್ರಿಯವರ ನೇತೃತ್ವದಲ್ಲಿ ಜ.12ರಿಂದ 14ರ ತನಕ ವಿಜೃಂಭಣೆಯಲ್ಲಿ ಜರಗಲಿವುದು.



ಈ ಕಾರ್ಯಕ್ರಮದಲ್ಲಿ ಊರ, ಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ, ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.



ಕಾರ್ಯಕ್ರಮಗಳು
ಜ.12 ರಂದು ಬೆಳಗ್ಗೆ ಗಂ 7 ರಿಂದ ಶ್ರೀ ಧರ್ಮಸ್ಥಳ ಭಜನಾ ಪರಿಷತ್, ಅರಿಯಡ್ಕ ವಲಯ ಇವರಿಂದ “ಭಜನೋತ್ಸವ” ಹಾಗೂ ಬಡಗನ್ನೂರು ಎ ಒಕ್ಕೂಟದ ವಾರ್ಷಿಕೋತ್ಸವ, 9ರಿಂದ ಬಲಿವಾಡು ಶೇಖರಣೆ ಹಸಿರುವಾಣಿ ಹೊರೆಕಾಣಿಕೆ ಸಂಗ್ರಹಿಸುವುದು ಸಂಜೆ ಗಂ.6ರಿಂದ ಉಗ್ರಾಣ ತುಂಬಿಸುವುದು,ಸಂಜೆ 6.15ರಿಂದ 7.45 ವಿಶ್ವಗುರು ಭರತನಾಟ್ಯ ಮತ್ತು ಸಂಗೀತ ಕಲಾ ಶಾಲೆ ಕುರಿಯ ಇವರಿಂದ ವಿದುಷಿ ಭಾಗ್ಯಶ್ರೀ ರೈ, ವಿಂದ್ಯಾಶ್ರೀ ರೈ ನಿರ್ದೇಶಕನದಲ್ಲಿ “ನೃತ್ಯಾಂಜಲಿ”, ರಾತ್ರಿ ಗಂಟೆ 8ರಿಂದ ಮಹಾಪೂಜೆ, ಮಹಾ ಗಣಪತಿ ಪೂಜೆ, ಅತ್ತಾಳಪೂಜೆ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನ ಪ್ರಸಾದ ವಿತರಣೆ ನಡೆಯಲಿದೆ.
13ರಂದು ಬೆಳಗ್ಗೆ ಗಂ.6.30ಕ್ಕೆ ಕ್ಷೇತ್ರಕ್ಕೆ ತಂತ್ರಿಗಳ ಆಗಮನ 7 ಕ್ಕೆ ಶ್ರೀ ಕ್ಷೇತ್ರದ ಮೂಲಸ್ಥಾನ ಪವಿತ್ರ ತೀರ್ಥದ ಕಲ್ಲಿನಿಂದ ಶಂಖ, ಜಾಗಟೆ, ವಾದ್ಯಮೇಳದೊಂದಿಗೆ ತೀರ್ಥ ತರಲು ಹೊರಡುವುದು,8 ರಿಂದ ಮಹಾಗಣಪತಿ ಹವನ, ನವಕಾಭಿಷೇಕ 10.30ರಿಂದ ತುಲಾಭಾರ ಸೇವೆ, ಮಹಾಪೂಜೆ, ಪಲ್ಲಪೂಜೆ, ಬಲಿಹೊರಡುವುದು, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ಸಂಜೆ ಗಂ 5.30ರಿಂದ ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ ಸೇವೆ. 6.30ರಿಂದ ಶ್ರೀ ದೇವರ ಉತ್ಸವ ಬಲಿ, ಶ್ರೀ ಭೂತ ಬಲಿ, ನೃತ್ಯಬಲಿ, ಕಟ್ಟೆ ಪೂಜೆ (ವಸಂತ ಕಟ್ಟೆ ಪೂಜೆಯಲ್ಲಿ ಕಟ್ಟೆ ಪೂಜೆ ಮಾಡಿಸುವವರಿಗೆ ಅವಕಾಶವಿದೆ) ಸುಡುಮದ್ದು ಪ್ರದರ್ಶನ ಅನ್ನಪ್ರಸಾದ ವಿತರಣೆ ನಡೆಯಲಿದೆ.
14ರಂದು ಬೆಳಗ್ಗೆ ಗಂ.8ರಿಂದ ಸ್ಥಳೀಯ ಭಜನಾ ತಂಡಗಳಿಂದ ಭಜನಾ ಸಂಕೀರ್ತನ ಸೇವೆ, 9ರಿಂದ ಶ್ರೀ ದೇವರ ಬಲಿ ಹೊರಡುವುದು, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಗಂ7.30ರಿಂದ ಶ್ರೀ ದೇವರಿಗೆ ರಂಗಪೂಜೆ, ಅನ್ನ ಪ್ರಸಾದ (ರಂಗಪೂಜೆ ಸೇವೆ ಮಾಡಿಸುವವರಿಗೆ ಅವಕಾಶವಿದೆ), 8.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿಬೈಲೂರು ಚೈತನ್ಯ ಕಲಾವಿದರಿಂದ ತುಳು ಸಾಮಾಜಿಕ ಹಾಸ್ಯಮಯ ನಾಟಕ ʼರಘು ಮಾಸ್ಟ್ರುʼ ನಡೆಯಲಿದೆ.









