ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಸವಣೂರು ವಲಯದ ಸಭೆ : ಸ್ಮಾರ್ಟ್ ಕಾರ್ಡ್ ವಿತರಣೆ

0

ಸವಣೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಸವಣೂರು ವಲಯದ ಸಾಮಾನ್ಯ ಸಭೆಯು ಸವಣೂರು ಯುವಕ ಮಂಡಲದಲ್ಲಿ ನಡೆಯಿತು.


ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಸವಣೂರು ವಲಯದ ಅಧ್ಯಕ್ಷ ಮೋಹನ್ ಕೆಡೆಂಜಿ ಅಧ್ಯಕ್ಷತೆ ವಹಿಸಿ ಪುತ್ತೂರು ಕ್ಷೇತ್ರ ಸಮಿತಿಯಲ್ಲಿನ ಮಾಹಿತಿಯನ್ನು ವಲಯ ಸಮಿತಿ ಸಭೆಯಲ್ಲಿ ವಿಚಾರ ವಿನಿಮಯ ಮಾಡಿಕೊಂಡರು. ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಸವಣೂರು ವಲಯ ಕಾರ್ಯದರ್ಶಿ ಜಯಶ್ರೀ ಕುಚ್ಚೆಜಾಲು ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ವಲಯ ಮಾಜಿ ಅಧ್ಯಕ್ಷರಾದ ವೆಂಕಪ್ಪಗೌಡ, ಜಗನ್ನಾಥ ಅಮೈ , ಬಾಬು ಗೌಡ ಮತ್ತು ಸಂಘಟನಾ ಕಾರ್ಯದರ್ಶಿ ಯಶೋಧ ಉಪಸ್ಥಿತರಿದ್ದರು.

ಸದಸ್ಯರಾದ ಸರಸ್ವತಿ,ಬೇಬಿ, ಪ್ರಮೀಳಾ,ಮೋಹಿನಿ, ಜಯಂತಿ, ತುಳಸಿ,ನೇತ್ರಾವತಿ, ಚೇತನ ಅರ್ಚನಾ ಕುಮಾರಿ,ಶಶಿಕಲಾ ರೇಖಾಶ್ರೀ,ಜಾನಕಿ, ಸಂಧ್ಯಾ,ದಿವ್ಯಾ ಮೊದಲಾದವರಿದ್ದರು. ಈ ಸಂದರ್ಭದಲ್ಲಿ ಹೊಸ ಸದಸ್ಯರ ಸದಸ್ಯತನ, ನವೀಕರಣ ಮಾಡಲಾಯಿತು ಹಾಗೂ ಸ್ಮಾರ್ಟ್ ಕಾರ್ಡ್ ವಿತರಣೆ ನಡೆಯಿತು. ಸವಣೂರು ವಲಯದ ಕೋಶಾಧಿಕಾರಿ ಸತೀಶ್ ಬಲ್ಯಾಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here